ಎಷ್ಟು ಕೋಟಿ ಕೊಟ್ಟರೂ.. ʼಈʼ ಒಂದು ಕಾರಣಕ್ಕೆ ರಜನಿಕಾಂತ್‌ ಜೊತೆ ನಟಿಸೋದಿಲ್ಲ ಎಂದಿದ್ದರಂತೆ ಐಶ್ವರ್ಯ ರೈ! : ಎಂಥಿರಾನ್ ಚಿತ್ರದಲ್ಲಿ ಮೊದಲ ಬಾರಿಗೆ ರಜನಿ ಎದುರು ಜೋಡಿಯಾದ ಐಶ್ವರ್ಯಾ ರೈ, ಅದಕ್ಕೂ ಮೊದಲು ಅವರೊಂದಿಗೆ ನಟಿಸಲು 4 ಚಿತ್ರಗಳ ಆಫರ್‌ಗಳನ್ನು ತಿರಸ್ಕರಿಸಿದ್ದರಂತೆ.. ಹಾಗಾದ್ರೆ ಆ ಸಿನಿಮಾಗಳಾವುವು ಎನ್ನುವುದನ್ನು ಇಲ್ಲಿ ತಿಳಿಯೋಣ.. - : ಐಶ್ವರ್ಯಾ ರೈ 1994 ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದರು. ಆ ನಂತರ ಅವರನ್ನು ಚಿತ್ರರಂಗಕ್ಕೆ ಕರೆತಂದದ್ದು ನಿರ್ದೇಶಕ ಮಣಿರತ್ನಂ. ಐಶ್ವರ್ಯಾ ರೈ 1997 ರಲ್ಲಿ ಶಂಕರ್ ಅವರ ಎಂಥಿರನ್ ಮೂಲಕ ಕಾಲಿವುಡ್‌ಗೆ ಮರು ಪ್ರವೇಶಿಸಿದರು. ಮುಂದೆ, ಅವರು ಶಂಕರ್ ನಿರ್ದೇಶನದ ಜೀನ್ಸ್ ಚಿತ್ರದಲ್ಲಿ ಪ್ರಶಾಂತ್ ಜೊತೆ ನಟಿಸಿದರು. ಅದೂ ಕೂಡ ದ್ವಿಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪೊನ್ನಿಯ ಸೆಲ್ವನ್ ತನಕ ತಮಿಳಿನಲ್ಲಿ ಅವರ ಎಲ್ಲಾ ಚಿತ್ರಗಳು ಹಿಟ್ ಆಗಿದ್ದವು. ಇದನ್ನೂ ಓದಿ- ಹಿಟ್ ಚಿತ್ರಗಳಲ್ಲಿ ನಟಿಸುತ್ತಿರುವ ಐಶ್ವರ್ಯಾ ರೈ, ಸೂಪರ್ ಸ್ಟಾರ್ ರಜನಿಕಾಂತ್ ಎದುರು ಒಂದೇ ಒಂದು ತಮಿಳು ಚಿತ್ರದಲ್ಲಿ ನಟಿಸಿದ್ದಾರೆ.. ಶಂಕರ್ ನಿರ್ದೇಶನದ ಈ ಮೆಗಾ ಚಿತ್ರದಲ್ಲಿ ಸನಾ ಎಂಬ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಐಶ್ವರ್ಯಾ ರೈ ಸೂಪರ್‌ಸ್ಟಾರ್‌ನ ನೆಚ್ಚಿನ ನಟಿಯರಲ್ಲಿ ಒಬ್ಬರಂತೆ ಹೀಗಾಗಿ ಅವರೊಂದಿಗೆ ಜೋಡಿ ನಟಿಸಲು ವರ್ಷಗಳಿಂದ ಪ್ರಯತ್ನಿಸಿದ್ದಾರಂತೆ ರಜನಿಕಾಂತ್..‌ ಎಂಥಿರನ್ ಗಿಂತ ಮೊದಲು, ಐಶ್ವರ್ಯಾ ರೈ ಅವರನ್ನು ರಜಿನಿ ಜೊತೆ ನಾಲ್ಕು ಚಿತ್ರಗಳಲ್ಲಿ ನಟಿಸಲು ಕೇಳಲಾಗಿತ್ತಂತೆ.. ಆದರೆ ಕಾರಣಾಂತರಗಳಿಂದ ಐಶ್ವರ್ಯಾ ರೈ ಆ ನಾಲ್ಕು ಚಿತ್ರಗಳಲ್ಲಿ ನಟಿಸಲು ನಿರಾಕರಿಸಿದ್ದರಂತೆ... ಆ ನಾಲ್ಕು ಚಿತ್ರಗಳ ಹೆಸರು ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ. ಇದನ್ನೂ ಓದಿ- ಸೂಪರ್‌ಸ್ಟಾರ್ ರಜನಿ ಎದುರು ನಟಿಸಲು ಅವರನ್ನು ಸಂಪರ್ಕಿಸಿದ ಮೊದಲ ಚಿತ್ರ ಪಡಿಯಪ್ಪ.. ಈ ಚಿತ್ರದಲ್ಲಿ ಐಶ್ವರ್ಯ ರೈ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲು ನಿರ್ದೇಶಕ ಕೆ.ಎಸ್.ರವಿಕುಮಾರ್ ನಿರ್ಧರಿಸಿದ್ದರು. ಆದರೆ ಸೂಪರ್ ಸ್ಟಾರ್ ರಜನಿ ಅದರಲ್ಲಿ ನಟಿಸಲು ನಿರಾಕರಿಸಿದ್ದರು. ಬಳಿಕ ಅದು ಮನೀಶಾ ಕೊಯಿರಾಲಾ ಅವರ ಕೈಗೆ ಹೋಯಿತು. ನಂತರ ಬಿ.ವಾಸು ನಿರ್ದೇಶನದ ಚಂದ್ರಮುಖಿ ಹಾಗೂ ಶಂಕರ್ ನಿರ್ದೇಶನದ ಶಿವಾಜಿ ಚಿತ್ರಗಳಲ್ಲಿ ರಜನಿಕಾಂತ್‌ ನಟಿಸಿದ್ದರು. ಆದರೆ ಅದರಲ್ಲಿ ಐಶ್ವರ್ಯ ರೈ ನಟಿಸಲು ನಿರಾಕರಿಸಿದರಂತೆ... ಅವರು ನಿರಾಕರಿಸಿದ ಈ ನಾಲ್ಕು ಚಿತ್ರಗಳಲ್ಲಿ ಮೂರು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದವು ಎಂಬುದು ಗಮನಾರ್ಹ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...