"ದ್ವಾಪರ ತೊರೆದು ಸಖಿಯನ್ನು ಹುಡುಕುತ್ತಾ ಭೂಮಿಗೆ ಬಂದ ಕೃಷ್ಣ"..ಇಂದು ಗೋಲ್ಡನ್‌ ಸ್ಟಾರ್‌ ಅಭಿನಯದ "ಕೃಷ್ಣಂ ಪ್ರಣಯ ಸಖಿ" ರಿಲೀಸ್‌ : ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ "ಕೃಷ್ಣಂ ಪ್ರಣಯ ಸಖಿ" ಸಿನಿಮಾ ಇಂದು(ಗುರುವಾರ) ಆಗಸ್ಟ್‌ 15 ರಂದು ಸ್ವತಂತ್ರೋತ್ಸವದ ಅಂಗವಾಗಿ ರಾಜ್ಯದೆಲ್ಲೆಡೆ ತೆರೆ ಕಂಡಿದೆ. ಈಗಾಗಲೇ ತನ್ನ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಸಿನಿಮಾ ರಿಲೀಸ್‌ಗಾಗಿ ಜನರು ಕಾತುರದಿಂದ ಕಾಯುತ್ತಿದ್ದರು, ಈ ಕಾಯುವಿಕೆಗೆ ಇದೀಗ ಬ್ರೇಕ್‌ ಬಿದ್ದಿದ್ದು, ಸಿನಿಮಾ ನೋಡಲು ಜನರು ಥಿಯೇಟರ್‌ನತ್ತ ಮುಗಿ ಬಿದ್ದಿದ್ದಾರೆ. :ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ "ಕೃಷ್ಣಂ ಪ್ರಣಯ ಸಖಿ" ಸಿನಿಮಾ ಇಂದು(ಗುರುವಾರ) ಆಗಸ್ಟ್‌ 15 ರಂದು ಸ್ವತಂತ್ರೋತ್ಸವದ ಅಂಗವಾಗಿ ರಾಜ್ಯದೆಲ್ಲೆಡೆ ತೆರೆ ಕಂಡಿದೆ. ಈಗಾಗಲೇ ತನ್ನ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಸಿನಿಮಾ ರಿಲೀಸ್‌ಗಾಗಿ ಜನರು ಕಾತುರದಿಂದ ಕಾಯುತ್ತಿದ್ದರು, ಈ ಕಾಯುವಿಕೆಗೆ ಇದೀಗ ಬ್ರೇಕ್‌ ಬಿದ್ದಿದ್ದು, ಸಿನಿಮಾ ನೋಡಲು ಜನರು ಥಿಯೇಟರ್‌ನತ್ತ ಮುಗಿ ಬಿದ್ದಿದ್ದಾರೆ. ಇಂದು ಸ್ವತಂತ್ರ ದಿನಾಚರಣೆಯಂದು "ಕೃಷ್ಣಂ ಪ್ರಣಯ ಸಖಿ" ಸಿನಿಮಾ ರಿಲೀಸ್‌ ಆಗಿದೆ. ಈ ಮುಂಚೆ ಸಿನಿಮಾಗಾಗಿ ಟಿಕೆಟ್‌ಗಳ ಪ್ರೀ ಬುಕಿಂಗ್‌ಗಾಗಿ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು, ಎಲ್ಲಾ ಥಿಯೇಟರ್‌ಗಳಲ್ಲಿ ಸೀಟ್ಸ್‌ ಫುಲ್‌ ಆಗಿದ್ದವು. ಟಿಕೆಟ್‌ಗಳು ಸಿಗದೆ ಹಲವರು ಬೇಸರಗೊಂಡಿದ್ದರು, ಬಹುನರೀಕ್ಷಿತ ಸಿನಿಮಾಗಾಗಿ ಜನರು ಇಷ್ಟು ದಿನ ಕಾದು ಸುಸ್ತಾಗಿ ಇದೀಗ ಥಿಯೇಟರ್‌ಗಳ ಬಳಿ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಸಿನಿಮಾದ ಸಾಂಗ್ಸ್‌ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ, ಇನ್ಸ್ಟಾಗ್ರಾಂನಲ್ಲಿ ಈ ಸಿನಿಮಾದ ದ್ವಾಪರ ದಾಟುತ ಬಂದ ಹಾಡಂತೂ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಒಂದು ಟ್ರೆಂಡ್‌ ಅನ್ನೆ ಸೃಷ್ಟಿಸಿ ಬಿಟ್ಟಿದೆ. ಇನ್ನೂ, ಕೇವಲ ಹಾಡುಗಳಿಂದ ಸದ್ದು ಮಾಡಿದ್ದ ಈ ಸಿನಿಮಾದ ಯಾವುದೇ ಟೀಸರ್‌ ಅಥವಾ ಟ್ರೇಲರ್‌ಗಳನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಈ ಸಿನಿಮಾ ಹಾಡುಗಳಷ್ಟೆ ಅಲ್ಲದೆ ಮತ್ತೊಂದು ಇನ್ಟ್ರೆಸ್ಟಿಂಗ್‌ ಅಂಶದಿಂದ ಕೂಡಿದೆ, ಈ ಸಿನಿಮಾದಲ್ಲಿ, ಒಂದಲ್ಲ ಎರಡಲ್ಲ ಎಂಟು ನಾಯಕಿಯರಿದ್ದು, ಗೋಲ್ಡನ್‌ ಸ್ಟಾರ್‌ ಗಣೇಶ್‌ ತನ್ನ ಎಂಟು ಸಖಿಯರೊಂದಿಗೆ ರೊಮ್ಯಾನ್ಸ್‌ ಮಾಡುವುದನ್ನು ಕಾಣಬಹುದು. ಇನ್ನೂ, ಈ ಸಿನಿಮಾದಲ್ಲಿ ಫ್ಯಾಮಿಲಿ ಡ್ರಾಮಾವನ್ನು ನೀವು ಕಾಣಬಹುದು. ಇದನ್ನೂ ಓದಿ: ಕೃಷ್ಣಂ ಪ್ರಣಯ ಸಖಿ ಸಿನಿಮಾದ ಪ್ರೀಮಿಯರ್‌ ಶೋವನ್ನು ಬುಧವಾರ ಸಂಜೆ ರಿಲೀಸ್‌ ಮಾಡಲಾಗಿತ್ತು, ಕೇವಲ ಸ್ಯಾಂಡಲ್‌ವುಡ್‌ನ ಸ್ಟಾರ್‌ಗಳಷ್ಟೆ ಅಲ್ಲದೆ ಹಲವರು ಬುಧವಾರ ಸಂಜೆಯೇ ಈ ಸಿನಿಮಾವನ್ನು ವೀಕ್ಷಿಸಿದ್ದರು. ಗೋಲ್ಡನ್‌ ಸ್ಟಾರ್‌ ಗಣಿ ಅಭಿನಯಕ್ಕೆ ಎಲ್ಲರೂ ಸೈ ಅಂದಿದ್ದಾರೆ. ಕಳೆದ ವಾರ ಭೀಮಾ ಸಿನಿಮಾ ತೆರೆ ಕಂಡಿದ್ದು ಗೊತ್ತೇ ಇದೆ, ಇದೀಗ ಗಣೇಶ್‌ ಅಭಿನಯದ ಸಿನಿಮಾ ರಿಲೀಸ್‌ ಆಗಿದ್ದು, ಈ ಇಬ್ಬರು ಸ್ಟಾರ್‌ ನಟರ ಸಿನಿಮಾಗಳು ಪೈಪೋಟಿಗೆ ಬಿದ್ದಂತಾಗಿದೆ. ಇದರ ನಡುವೆ ಯಾವ ಸಿನಿಮಾ ಪ್ರೇಕ್ಷಕರ ಮನವನ್ನು ಗೆಲ್ಲುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.ಈ ಚಿತ್ರಕ್ಕೆ ಶ್ರೀನಿವಾಸ್ ರಾಜು ಆಕ್ಷನ್‌ ಕಟ್‌ ಹೇಳಿದ್ದು, ರಂಗಾಯಣ ರಘು, ಸಾಧು ಕೋಕಿಲ ಸೇರಿದಂತೆ ಕಲಾವಿದರ ದೊಡ್ಡ ಬಣವೇ ಈ ಸಿನಿಮಾದಲ್ಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...