ಅಭಿಮಾನಿ ದೇವರಿಂದ ಅನೌನ್ಸ್ ಆಯ್ತು ಪೆಪೆ ಮುಹೂರ್ತ! : ‘ಪೆಪೆ’.. ಈ ಚಿತ್ರದ ಮೇಲೆ ದೊಡ್ಮನೆ ಅಭಿಮಾನಿಗಳು ಮತ್ತು ಬುದ್ಧಿವಂತ ಕನ್ನಡ ಪ್ರೇಕ್ಷಕರು ವಿಶೇಷವಾದ ನಿಗವನ್ನ ಇಟ್ಟಿದ್ದಾರೆ. ಕಾರಣ ‘ಒಂದು ಸರಳ ಪ್ರೇಮ ಕಥೆ‘ ಸಿನಿಮಾ ಹಿಟ್ ಆದ ನಂತರ ವಿನಯ್ ರಾಜ್ ಕುಮಾರ್ ಮುಂದಿನ ಸಿನಿಮಾ ನಡೆಯ ಮೇಲೆ ಒಂದು ಕುತೂಹಲ ಎದ್ದಿದೆ. ಜೊತೆಗೆ ಪೆಪೆ ಸಿನಿಮಾ ಪೋಸ್ಟರ್ಗಳು ಈ ಹಿಂದೆ ಬಿಟ್ಟ ಟೀಸರ್ಗಳು ಇನಷ್ಟು ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಈಗ ಅಂತು ಇಂತು ಪೆಪೆ ಪ್ರೇಕ್ಷಕ ಮಹಾ ಪ್ರಭುಗಳ ಮುಂದೆ ಬಂದು ತನ್ನ ಗತ್ತು ಗಮ್ಮತ್ತನ ತೋರಿಸೋ ಶುಭ ದಿನಾಂಕ ನಿಗಧಿಯಾಗಿದೆ. ವಿಶೇಷವೇನೆಂದ್ರೆ ಪೆಪೆ ಸಿನಿಮಾದ ರಿಲೀಸ್ ಡೇಟ್ ಅನ್ನ ಅಭಿಮಾನಿ ದೇವರುಗಳು ಅದ್ರಲ್ಲೂ ಕನ್ನಡವನ್ನ ಕನ್ನಡ ಸಿನಿಮಾವನ್ನ ಹೊತ್ತು ಮೆರೆಸುವ ಆಟೋ ಸಾರಥಿಗಳಿಂದ ಪೆಪೆ ದಿನಾಂಕ ಬಹಿರಂಗವಾಗಿದೆ. ಈ ತಿಂಗಳ ಕೊನೆ ಶುಕ್ರವಾರ ಆಗಸ್ಟ್ 30ರಂದು ರಾಜ್ಯಾದ್ಯಂತ ಪೆಪೆ ಸಿನಿಮಾ ತನ್ನ ಆರ್ಭವನ್ನ ತೋರಲಿದೆ. ಇದನ್ನೂ ಓದಿ- ಇಂದು ಮಧ್ಯಾಹ್ನ ಸದಾಶಿವ ನಗರದ ಗ್ರೌಂಡ್ನಲ್ಲಿ ಪೆಪೆ ಸಿನಿಮಾದ ಪೋಸ್ಟರ್ಸ್ಗಳನ್ನ ಆಟೋ ರಿಕ್ಷದ ಮೇಲೆ ಅಂಟಿಸಿ ರಿಲೀಸ್ ಡೇಟ್ ಅನೌನ್ಸ್ ಮಾಡಲಾಯ್ತು. ಅಭಿಮಾನಿ ಆಟೋ ಡ್ರೈವರ್ಗಳು ಭವರವಸೆಯ ನಾಯಕ ನಟ ವಿನಯ್ ರಾಜ್ ಕುಮಾರ್ ಸಮುಖದಲ್ಲಿ ಪೆಪೆ ರಿಲೀಸ್ ಪೋಸ್ಟರ್ಸ್ಗಳನ್ನ ಅನಾವರಣ ಮಾಡಿದ್ರು. ಇದನ್ನೂ ಓದಿ- ಸಿದ್ಧಾರ್ಥನಾಗಿ ಸ್ಯಾಂಡಲ್ವುಡ್ ಸೀಮೆಗೆ ಬಲಗಾಲಿಟ್ಟ ದೊಡ್ಮನೆಯ ಮೂರನೇ ತಲೆಮಾರಿನ ಭರವಸೆಯ ನಟ ವಿನಯ್ ರಾಜ್ ಕುಮಾರ್ ಈಗ ಮೆಗಾ ಮಾಸ್ ಹೀರೋ ಆಗೋ ಸೂಚನೆ ಕೊಡ್ತಿದ್ದಾರೆ. ತನ್ನ ದೊಡ್ಡಪ್ಪ ಚಿಕ್ಕಪ್ಪನ ರೀತಿ ಕ್ಲಾಸ್ಗೂ ಸೈ ಮಾಸ್ಗೂ ಜೈ ಅನ್ನೋದು ಪಕ್ಕ. ಒಂದು ಸರಳ ಪ್ರೇಮ ಕಥೆ ಸಿನಿಮಾದ ಮೂಲಕ ತಾನೆಂಥ ಕ್ಲಾಸ್ ಹೀರೋ ಅನ್ನೋದನ್ನ ಚೆಂದವಾಗಿ ಚಂದನವನದ ಅಭಿಮಾನಿ ದೇವರುಗಳಿಗೆ ತೋರಿಸಿದ ವಿನಯ್ ಈ ಬಾರಿ ಮಾಸ್ ಅವತಾರವನ್ನ ‘ಪೆಪೆ‘ ಚಿತ್ರದ ಮೂಲಕ ಸಾಬೀತು ಮಾಡಲಿದ್ದಾರೆ.ಯುವ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ಕಲ್ಪನೆಯಲ್ಲಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಖರ್ಚಿನಲ್ಲಿ ‘ಪೆಪೆ’ ಅದ್ಧೂರಿಯಾಗಿ ಮೂಡಿಬಂದಿದೆ. ಕ್ಲಾಸ್ ಸಿನಿಮಾಗಳಿಗೆ ಮ್ಯೂಸಿಕ್ ಕೊಟ್ಟು ಹೆಸರು ಮಾಡಿರುವ ಪೂರ್ಣ ಚಂದ್ರ ತೇಜಸ್ವಿ ಈ ಬಾರಿ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವೊಂದನ್ನ ಮ್ಯೂಸಿಕ್ ಮಾಡಿರೋದು ವಿಶೇಷ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...