ʼಈ' ಖ್ಯಾತ ನಿರ್ದೇಶಕನೊಂದಿಗೆ ಸಮಂತಾ ನಿಶ್ಚಿತಾರ್ಥ?! ನಾಗ ಚೈತನ್ಯ ವಿರುದ್ಧ ಸೇಡು ತೀರಿಸಿಕೊಳ್ಳಲು ಇಂತಹ ನಿರ್ಧಾರ ತೆಗೆದುಕೊಂಡ್ರಾ ಸ್ಯಾಮ್‌.. : ಟಾಲಿವುಡ್‌ ಹಿರೋ ನಾಗಚೈತನ್ಯ ನಿಶ್ಚತಾರ್ಥದ ಬೆನ್ನಲೇ ಸಮಂತಾ ಖ್ಯಾತ ನಿರ್ದೇಶಕರೊಂದಿಗೆ ಎಂಗೇಜ್‌ ಆಗಲಿದ್ದಾರೆ ಎನ್ನುವ ಮಾಹಿತಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ. : ಇತ್ತೀಚೆಗಷ್ಟೇ ಟಾಲಿವುಡ್ ಹೀರೋ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧೂಳಿಪಾಲ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದು ನಡೆದು ಒಂದು ವಾರವೂ ಕಳೆದಿಲ್ಲ. ಆದರೆ, ನಾಗ ಚೈತನ್ಯ ಅವರ ಮಾಜಿ ಪತ್ನಿ ಹಾಗೂ ಸಿನಿಮಾ ನಾಯಕಿ ಸಮಂತಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಮಂತಾ ನಟಿಸುತ್ತಿರುವ ವೆಬ್ ಸೀರೀಸ್ ನಿರ್ದೇಶಿಸಿದ್ದ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ರಾಜ್ ಡಿಕೆ ನಿರ್ದೇಶನದ ಜೋಡಿಯ ರಾಜ್ ನಿಡುಮೋರೆ ಅವರನ್ನು ಸಮಂತಾ ಪ್ರೀತಿಸುತ್ತಿದ್ದಾರೆ ಎನ್ನಲಾಗ್ತಿದೆ.. ಇದನ್ನೂ ಓದಿ- ಈ ಹಿಂದೆ ಅವರು ರಾಜು ಡಿಕೆ ಹಾಗೂ ಸಮಂತಾ ಅವರೊಂದಿಗೆ 'ದಿ ಫ್ಯಾಮಿಲಿ ಮ್ಯಾನ್' ಎಂಬ ಸರಣಿಯನ್ನು ಮಾಡಿದ್ದರು. ಈ ಸರಣಿಯಲ್ಲಿ ಸಮಂತಾ ಅಭಿನಯವು ವಿವಾದಗಳಿಗೆ ಕಾರಣವಾಯಿತು. ಆ ನಂತರ ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆದರು. ಆದರೆ ಇತ್ತೀಚೆಗೆ ಬಂದ ವರದಿಯ ಪ್ರಕಾರ, ರಾಜ್ - ಸಮಂತಾ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ.. ಇದನ್ನೂ ಓದಿ- ರಾಜ್ ಈಗಾಗಲೇ ಮದುವೆಯಾಗಿದ್ದಾರೆ.. ಅಲ್ಲದೇ ಅವರು ಸಮಂತಾಳೊಂದಿಗೆ ಪ್ರೀತಿಯಲ್ಲಿ ಬಿದ್ದ ನಂತರ ತನ್ನ ಹೆಂಡತಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ... ಆದರೆ, ಇದು ಎಷ್ಟರಮಟ್ಟಿಗೆ ಸತ್ಯ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ವಿಚ್ಛೇದನದ ನಂತರ ರಾಜ್ ಡಿಕೆ ಸಮಂತಾ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದು ಆಗ ಚರ್ಚೆಯ ವಿಷಯವಾಗಿತ್ತು. ಮತ್ತು ಸಮಂತಾ ರಾಜ್ ಅವರು ಡಿಕೆ ನಿರ್ದೇಶನದಲ್ಲಿ 'ಸಿಟಾಡೆಲ್' ಮತ್ತು 'ಹನಿ ಬನ್ನಿ' ಎಂಬ ವೆಬ್ ಸೀರೀಸ್ ಮಾಡಿದ್ದಾರೆ. ಇದು ಶೀಘ್ರದಲ್ಲೇ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...