ಹೀಗಾಗುವುದರಿಂದಲೇ ಸಲ್ಮಾನ್ ಕಿಸ್ಸಿಂಗ್ ಸೀನ್ ಮಾಡುವುದಿಲ್ಲ!ಸತ್ಯ ಹೇಳಿ ಸಹೋದರನನ್ನು ಮುಜುಗರಕ್ಕೆ ಗುರಿ ಮಾಡಿದ ಅರ್ಬಾಜ್ ಖಾನ್ :ಸಲ್ಮಾನ್ ಖಾನ್ ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ನಲ್ಲಿ ಯಾಕೆ ನಟಿಸುವುದಿಲ್ಲ ಎನ್ನುವುದನ್ನು ಅವರ ಸಹೋದರ ಟಾಕ್ ಷೋ ವೊಂದರಲ್ಲಿ ಹೇಳಿದ್ದಾರೆ. :ಸಲ್ಮಾನ್ ಖಾನ್ ಯಾವುದೇ ಸಿನಿಮಾ ಮಾಡಿದರೂ ಗಲ್ಲ ಪೆಟ್ಟಿಗೆಯಲ್ಲಿ ದಾಖಲೆ ಬರೆದು ಬಿಡುತ್ತದೆ. ಹಾಗೆಯೇ ಸಲ್ಮಾನ್ ಖಾನ್ ಬಾಲಿವುಡ್ ಗೆ ಅದೆಷ್ಟೋ ನಾಯಕಿಯರನ್ನು ಪರಿಚಯಿಸಿದ್ದಾರೆ.ಅವರ ಬೆಳವಣಿಗೆಗೆ ಕಾರಣರಾಗಿದ್ದಾರೆ.ಇನ್ನು ಸಲ್ಮಾನ್ ಖಾನ್ ನನ್ನು ಎದುರು ಹಾಕಿಕೊಂಡರೆ ಬಾಲಿವುಡ್ ನಲ್ಲಿ ನೆಲೆಯೂರುವುದು ಕೂಡಾ ಕಷ್ಟ ಎನ್ನುವ ಮಾತು ಪದೇ ಪದೇ ಕೇಳಿ ಬರುತ್ತದೆ. ಎಲ್ಲರಿಗೂ ತಿಳಿದಿರುವಂತೆಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್.ಈ ನಟನ ಹೆಸರು ಅನೇಕ ನಾಯಕರಿರ ಜೊತೆ ಸೇರಿಕೊಂಡಿದೆ. ಬಾಲಿವುಡ್ ಗೆ ಕಾಲಿಟ್ಟ ದಿನದಿಂದಲೂ ಒಂದಲ್ಲ ಒಂದು ಹಿರೋಯಿನ್ ಗಳ ಜೊತೆ ಈ ನಟನ ಹೆಸರು ಥಳಕು ಹಾಕಿ ಕೊಂಡಿದೆ. ಆದರೆ ಇನ್ನು ಕೂಡಾ ಮದುವೆಯಾಗದೆ ಉಳಿದಿದ್ದಾರೆ. ಇದನ್ನೂ ಓದಿ : ಸಲ್ಮಾನ್ ಸಿನಿಮಾಗಳ ವಿಶೇಷತೆ ಎಂದರೆ ಇವರ ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ಇರುವುದಿಲ್ಲ.ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ನಲ್ಲಿ ನಟಿಸಲು ಸಲ್ಲು ಭಾಯಿ ಸಾರಾಸಗಟಾಗಿ ನಿರಾಕರಿಸಿ ಬಿಡುತ್ತಾರೆಯಂತೆ.ಈ ಬಗ್ಗೆ ಕಾಮಿಡಿ ಷೋ ನಲ್ಲಿ ಕಪಿಲ್ ಶರ್ಮಾ ಮಾತಿಗಿಳಿದಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಲ್ಮಾನ್ ಮತ್ತು ಅರ್ಬಾಜ್ ಮತ್ತು ಸೋಹೈಲ್ ಒಟ್ಟಾಗಿ ಭಾಗವಹಿಸಿದ್ದರು.ಇಲ್ಲಿ ನಾನು ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ನಲ್ಲಿ ನಟಿಸುವುದಿಲ್ಲ ಎಂದು ಸಲ್ಮಾನ್ ಹೇಳಿದ್ದಾರೆ. ತಕ್ಷಣ ಸಹೋದರ ಅರ್ಬಾಜ್ ಆಫ್ ಸ್ಕ್ರೀನ್ ನಲ್ಲಿಯೇ ಬೇಕಾದಾಷ್ಟು ಬಾರಿ ಆಗುವಾಗ ಆನ್ ಸ್ಕ್ರೀನ್ ನಲ್ಲಿ ಮಾಡುವ ಅಗತ್ಯ ಏನಿದೆ ಎಂದು ಚಟಾಕಿ ಹಾರಿಸಿದ್ದಾರೆ. ಇದನ್ನೂ ಓದಿ : ಈ ರೀತಿ ಉತ್ತರ ನೀಡುತ್ತಾರೆ ಎನ್ನುವುದನ್ನು ಸಲ್ಮಾನ್ ಕೂಡಾ ನಿರೀಕ್ಷಿಸಿರಲಿಲ್ಲ.ಅರ್ಬಾಜ್ ಹೇಳಿಕೆಯಿಂದ ಸಲ್ಮಾನ್ ಮುಜುಗರಗೊಂಡಿರುವುದು ಅವರ ಮುಖ ಭಾವದಿಂದಲೇ ತಿಳಿಯುತ್ತದೆ.ಅಂದ ಹಾಗೆ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಕೂಡಾ ಆಗಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...