: ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿ ಎಬ್ಬಿಸುತ್ತಾ ಕೃಷ್ಣಂ ಪ್ರಣಯ ಸಖಿ..! : ಕೃಷ್ಣಂ ಪ್ರಣಯ ಸಖಿ ಸಿನಿಮಾ ಗಣೇಶ್‌ಪಾಲಿ ಮತ್ತೊಮ್ಮೆ ಮುಂಗಾರು ಮಳೆಯಂತಹ ಹಿಟ್‌ ಕೊಡಲಿದೆಯಾ ಎಂಬ ಕುತೂಹಲ ಜನರಲ್ಲಿ ಮೂಡಿದೆ. :ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ “ಕೃಷ್ಣಂ ಪ್ರಣಯ ಸಖಿ” ಸಿನಿಮಾ ನಾಳೆ ಅಂದರೆ ಸ್ವಾತಂತ್ರ್ಯ ದಿನಾಚರಣೆಯಂದು ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ. ಸ್ಯಾಂಡಲ್‌ವುಡ್‌ನಲ್ಲಿ ಈ ಸಿನಿಮಾ ಹೊಸ ಇತಿಹಾಸ ಬರೆಯುವ ಎಲ್ಲ ಲಕ್ಷಣಗಳು ಇದೀಗ ಕಾಣುತ್ತಿದೆ. ಕೃಷ್ಣಂ ಪ್ರಣಯ ಸಖಿ ಸಿನಿಮಾ ಗಣೇಶ್‌ ಪಾಲಿಗೆ ಮತ್ತೊಮ್ಮೆ ಮುಂಗಾರು ಮಳೆಯಂತಹ ಹಿಟ್‌ ಕೊಡಲಿದೆಯಾ ಎಂಬ ಕುತೂಹಲ ಜನರಲ್ಲಿ ಮೂಡಿದೆ. ಕೃಷ್ಣಂ ಪ್ರಣಯ ಸಖಿ ಸಿನಿಮಾದ ಹಾಡುಗಳು ಸಿಕ್ಕಾಪಟ್ಟೆ ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದು, ಈ ಸಿನಿಮಾ ಮೇಲಿನ ಜನರ ನಿರೀಕ್ಷೆಯನ್ನು ಹೆಚ್ಚಾಗಿಸಿವೆ. ಒಂದೊಂದು ಹಾಡುಗಳು ಅದ್ಭುತವಾಗಿವೆ. ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಎಂಟು ನಟಿಯರು ಇರುವುದು ಮತ್ತೊಂದು ಹೈಲೈಟ್‌ ಆಗಿದೆ. ಕೃಷ್ಣಂ ಪ್ರಣಯ ಸಖಿ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುವುದು ಪಕ್ಕಾ ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ. ಇದನ್ನೂ ಓದಿ: ಕಷ್ಣಂ ಪ್ರಣಯ ಸಖಿ ಚಿತ್ರ ಇದೀಗ ಬಿಡುಗಡೆಯ ಒಂದು ದಿನ ಮುಂಚಿತವಾಗಿಯೇ ಸದ್ದು ಮಾಡುತ್ತಿದೆ. ಫ್ಯಾನ್ಸ್ ಪೇಯ್ಡ್ ಪ್ರೀಮಿಯರ್ ಶೋ ಹೌಸ್ ಫುಲ್ ಆಗಿದ್ದು, ಸ್ಯಾಂಡಲ್‌ವುಡ್‌ ಅದೃಷ್ಟದ ಬಗಿಲು ತೆರೆಯುವಂತೆ ಕಾಣುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಗಣೇಶ್‌ ಮತ್ತೊಂದು ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡುತ್ತಿದೆ. ಅಂದು ಮುಂಗಾರು ಮಳೆ ಸಿನಿಮಾ ಗಣೇಶ್‌ ಅವರಿಗೆ ಇಂದು ಕೃಷ್ಣಂ ಪ್ರಣಯ ಸಖಿ. 2006 ರಲ್ಲಿ ಮುಂಗಾರು ಮಳೆ ಸಾಂಗ್ಸ್ ಸೂಪರ್ ಹಿಟ್ ಆಗಿದ್ದವು. ಕೃಷ್ಣಂ ಪ್ರಣಯ ಸಖಿ ಸಾಂಗ್ಸ್ ಕೂಡ ಸೂಪರ್ ಹಿಟ್ ಹಾಡುಗಳು ಕೂಡ ಹಿಟ್‌ ಆಗಿವೆ. ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋ ಹೌಸ್‌ ಫುಲ್‌ ಆಗಿದೆ. ಇದನ್ನೂ ಓದಿ:ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡುವ ಕಾತುರದಲ್ಲಿರುವ ಸಿನಿ ಪ್ರಿಯರು ಒಂದು ದಿನ ಮುಂಚಿತವಾಗಿಯೇ ಫ್ಯಾನ್ಸ್ ಶೋ ಹೌಸ್ ಫುಲ್ ಆಗಿದೆ. ಕೆಲವೆಡೆ ಮಾತ್ರ ಪೇಯ್ಡ್ ಪ್ರೀಮಿಯರ್ ಶೋ ಗೆ ಚಿತ್ರತಂಡ ಪ್ಲಾನ್ ಮಾಡಿತ್ತು. ಈಗಾಗಲೇ ರಾಜ್ಯಾದ್ಯಂತ 300 ಕ್ಕೂ ಹೆಚ್ಚು ಪ್ರದರ್ಶನಕ್ಕೆ ಚಿತ್ರತಂಡ ಪ್ಲಾನ್‌ ಮಾಡಿದೆ. ಈ ಶೋನ ಬಹುತೇಕ ಟಿಕೆಟ್‌ ಸೋಲ್ಡ್‌ ಔಟ್‌ ಆಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...