ʼಆʼ ಪ್ಯಾನ್‌ ಇಂಡಿಯಾ ಸ್ಟಾರ್‌ ಸಿನಿಮಾ ರಿಜೆಕ್ಟ್‌ ಮಾಡಿದ ಕೀರ್ತಿ ಸುರೇಶ್..! ಅಷ್ಟಕ್ಕೂ ಯಾರು ಆ ನಟ?! : ನಟಿ ಕೀರ್ತಿ ಸುರೇಶ್ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಗೊತ್ತಿದ್ದೂ ಮಾತನಾಡಿದ್ದಾರೋ ಅಥವಾ ತಿಳಿಯದೆ ಮಾತನಾಡುತ್ತಿದ್ದಾರೋ ಗೊತ್ತಿಲ್ಲ ಆದರೆ ಆಕೆ ಹೇಳಿದ್ದೆಲ್ಲವೂ ವಿವಾದವಾಗುತ್ತಿದೆ. : ಇತ್ತೀಚೆಗೆ ನಟಿ ಕೀರ್ತಿ ಸುರೇಶ್‌ ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ಕೀರ್ತಿ ಸುರೇಶ್ ಮಾಡಿರುವ ಕಾಮೆಂಟ್‌ಗಳು ವಿವಾದಕ್ಕೀಡಾಗಿದ್ದು ಗೊತ್ತೇ ಇದೆ. ಕೀರ್ತಿ ಸುರೇಶ್ ಸದ್ಯ ತಮಿಳಿನ ರಘುತಾತ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಪ್ರಮೋಷನ್‌ನಲ್ಲಿ ಕೀರ್ತಿ ಸುರೇಶ್ ಭಾಗವಹಿಸಿದ್ದರು. ಚಿರಂಜೀವಿ ಮತ್ತು ತಮಿಳು ಸ್ಟಾರ್ ವಿಜಯ್ ನಡುವೆ ನೀವು ಯಾರಿಗೆ ಮತ ಹಾಕುತ್ತೀರಿ ಎಂದು ಆಂಕರ್ ಕೀರ್ತಿ ಸುರೇಶ್ ಅವರನ್ನು ಕೇಳಿದಾಗ, ಅವರು ಯೋಚಿಸದೆ ವಿಜಯ್ ಹೆಸರನ್ನು ಹೇಳಿದರು. ಇದರಿಂದ ಮೆಗಾ ಅಭಿಮಾನಿಗಳು ಆಕೆಯ ಮೇಲೆ ಕಿಡಿಕಾರಿದ್ದಾರೆ. ಚಿರಂಜೀವಿಯಂತಹ ದೊಡ್ಡ ನಟನನ್ನು ವಿಜಯ್‌ಗೆ ಹೋಲಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.. ಈ ವಿವಾದ ಮಾಸುವ ಮುನ್ನವೇ ಮತ್ತೊಂದು ವಿವಾದವನ್ನು ಹುಟ್ಟು ಹಾಕಿದ್ದಾರೆ. ಇದನ್ನೂ ಓದಿ- ಕೀರ್ತಿ ಸುರೇಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರೊಂದಿಗೆ ಸಿನಿಮಾ ಮಾಡುವುದಿಲ್ಲ ಎಂದು ಹೇಳುವ ಮೂಲಕ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದಾರೆ.. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಕೀರ್ತಿ ಸುರೇಶ್ ಹೇಳಿದ್ದು.. ನಿರ್ದೇಶಕ ನಾಗ್ ಅಶ್ವಿನ್ ಕಲ್ಕಿ 2898 ಎಡಿ ಸಿನಿಮಾದ ಪಾತ್ರಕ್ಕೆ ನನ್ನನ್ನು ಕರೆದಿದ್ದರು. ಆದರೆ ಆ ಪಾತ್ರ ಮಾಡಲು ಸಾಧ್ಯವಿಲ್ಲ ಎಂದು ರಿಜೆಕ್ಟ್‌ ಮಾಡಿದೆ.. ಆದರೆ ಅದರ ನಂತರ ನಾನು ಆ ಪ್ರಾಜೆಕ್ಟ್‌ನ ಭಾಗವಾಗಲು ಬಯಸುತ್ತೇನೆ ಎಂದು ನಾಗ್ ಅಶ್ವಿನ್‌ಗೆ ಸಂದೇಶ ಕಳುಹಿಸಿದೆ. ಹೀಗಾಗಿ ಬುಜ್ಜಿಗೆ ಧ್ವನಿ ನೀಡುವ ಅವಕಾಶವನ್ನು ನಾಗ್ ಎಂದು ಕೀರ್ತಿ ಸುರೇಶ್ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದರು. ಇದಲ್ಲದೇ "ಕಲ್ಕಿ ಭಾಗ 2 ಗಾಗಿ ಕಾತರದಿಂದ ಕಾಯುತ್ತಿದ್ದೇನೆ .. ಬುಜ್ಜಿಗೆ ವಾಯ್ಸ್ ಓವರ್ ನೀಡಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ" ಎಂದಿದ್ದಾರೆ. ಆದರೆ ಕಲ್ಕಿಯಲ್ಲಿ ಯಾವ ಪಾತ್ರವನ್ನು ತಿರಸ್ಕರಿಸಿದೆ ಎಂದು ಹೇಳುವುದಿಲ್ಲ ಎಂದು ಕೀರ್ತಿ ಸುರೇಶ್ ತಿಳಿಸಿದ್ದಾರೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...