"ನಾನಿನ್ನೂ ಅವನ ನೆನಪಲ್ಲಿದ್ದೇನೆ"- ವಯಸ್ಸು 51 ಆದ್ರೂ ಇನ್ನೂ ಮದುವೆಯಾಗದಿರಲು ಕಾರಣ ತಿಳಿಸಿದ ‘ಹಾಲುಂಡ ತವರು’ ನಟಿ ಸಿತಾರಾ : ಇದೀಗ 51 ವರ್ಷ ವಯಸ್ಸು. ಆದರೆ ಇದುವರೆಗೆ ಮದುವೆಯಾಗದೆ ಏಕಾಂಜಿ ಜೀವನ ನಡೆಸುತ್ತಿದ್ದಾರೆ. ಅಷ್ಟಕ್ಕೂ ಈ ನಿರ್ಧಾರಕ್ಕೆ ಕಾರಣ ಎಂಬುದನ್ನು ಸಂದರ್ಶನವೊಂದರಲ್ಲಿ ಸಿತಾರಾ ಅವರೇ ಬಹಿರಂಗಪಡಿಸಿದ್ದಾರೆ. : ನಟಿ ಸಿತಾರಾ ಕನ್ನಡದ ಪ್ರಖ್ಯಾತ ನಟಿ, ಮನೋಜ್ಞ ನಟನೆಯಿಂದಲೇ ಸಾಕಷ್ಟು ಜನಪ್ರಿಯತೆ ಪಡೆದ ಈ ನಟಿ, ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲೂ ಪರಿಚಿತ ಮುಖ. 1986 ರಲ್ಲಿ ಮಲಯಾಳಂ ಚಲನಚಿತ್ರ 'ಕಾವೇರಿ' ಮೂಲಕ ಸಿನಿಬದುಕು ಪ್ರಾರಂಭಿಸಿದ ಸಿತಾರ, ದಕ್ಷಿಣ ಭಾರತದಲ್ಲಿ 80 ಮತ್ತು 90 ರ ದಶಕದ ಅತ್ಯಂತ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು. ಇದನ್ನೂ ಓದಿ: ಇನ್ನು ಇವರಿಗೆ ಇದೀಗ 51 ವರ್ಷ ವಯಸ್ಸು. ಆದರೆ ಇದುವರೆಗೆ ಮದುವೆಯಾಗದೆ ಏಕಾಂಜಿ ಜೀವನ ನಡೆಸುತ್ತಿದ್ದಾರೆ. ಅಷ್ಟಕ್ಕೂ ಈ ನಿರ್ಧಾರಕ್ಕೆ ಕಾರಣ ಎಂಬುದನ್ನು ಸಂದರ್ಶನವೊಂದರಲ್ಲಿ ಸಿತಾರಾ ಅವರೇ ಬಹಿರಂಗಪಡಿಸಿದ್ದಾರೆ. "ಮನೆಯವರಿಂದ ಅನೇಕ ಮದುವೆ ಪ್ರಪೋಸಲ್‌ಗಳು ಬಂದಿವೆ. ಆದರೆ ಚಿತ್ರರಂಗದಲ್ಲಿ ಒಬ್ಬರನ್ನು ಪ್ರೀತಿಸುತ್ತಿದ್ದೆ. ಆದರೆ ಆ ಪ್ರೀತಿ ಉಳಿಯಲಿಲ್ಲ. ನಾನು ಅವನ ಬಗ್ಗೆಯೇ ಯೋಚಿಸುತ್ತಿದ್ದರಿಂದ, ಬೇರೆಯವರನ್ನು ಮದುವೆಯಾಗುವ ಮನಸು ಮಾಡಲಿಲ್ಲ" ಎಂದು ನಟಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: "ಈ ವಿಷಯದ ಹೊರತಾಗಿ ಬಲವಾದ ಕಾರಣವೂ ಇದೆ. ನಾನು ನನ್ನ ತಂದೆ ಪರಮೇಶ್ವರನ್ ನಾಯರ್‌ʼಗೆ ತುಂಬಾ ಹತ್ತಿರ. ತಂದೆ ತಾಯಿಯನ್ನು ಬಿಟ್ಟು, ಅವರಿಂದ ದೂರ ಉಳಿಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ನಾನು ಮದುವೆಯಾಗಲು ಸಿದ್ಧನಿರಲಿಲ್ಲ. ನನ್ನ ತಂದೆ ತೀರಿಕೊಂಡ ನಂತರ, ಮದುವೆಯಾಗಿ ನೆಲೆಸುವ ಆಲೋಚನೆ ಸಂಪೂರ್ಣವಾಗಿ ಮರೆಯಾಯಿತು”ಎಂದು ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...