ʼಅಂತಹ ಪಾತ್ರ ಮಾಡೋಹಾಗಿಲ್ಲʼ ಎಂದು ನಟಿ ಅನುಷ್ಕಾಗೆ ತಾಕೀತು ಮಾಡಿದ್ದರಂತೆ ಈ ಸ್ಟಾರ್‌ ನಟ!! ಯಾರದು ಗೊತ್ತೇ? : ಅನುಷ್ಕಾ ತಮ್ಮ ವೃತ್ತಿ ಜೀವನದಲ್ಲಿ ಅದ್ಭುತ ಪಾತ್ರಗಳನ್ನು ಮಾಡಿದ್ದಾರೆ. ಆದರೆ ಅವರ ಒಂದು ಪಾತ್ರ ಮಾತ್ರ ಕೆಲವರಿಗೆ ಇಷ್ಟವಾಗಿರಲಿಲ್ಲ..ಅದು ವೇಶ್ಯೆಯ ಪಾತ್ರ. ಆ ಪಾತ್ರ ಮಾಡಬೇಡಿ ಎಂದು ಅನೇಕರು ಅನುಷ್ಕಾಗೆ ಹೇಳಿದ್ದರು. ಅಲ್ಲದೇ ಒಬ್ಬ ಸ್ಟಾರ್ ಹೀರೋ ಸಖತ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.. -: ಸೌತ್‌ ಬ್ಯೂಟಿ ಅನುಷ್ಕಾ ಅವರು ನಟಿಸಿರುವ ಪ್ರತಿ ಪಾತ್ರಗಳು ಅದ್ಭುತವಾಗಿವೆರ.. ಈಗಿನ ಯಾವ ನಾಯಕಿಯೂ ಅವುಗಳನ್ನು ಮಾಡಿಲ್ಲ. ಸ್ಟಾರ್ ಹೀರೋಗಳ ಎದುರು ನಾಯಕಿಯಾಗಿ ಮಿಂಚಿದ್ದ ಈ ಚೆಲುವೆ.. ಲೇಡಿ ಓರಿಯೆಂಟೆಡ್ ಪಾತ್ರಗಳಲ್ಲೂ ತನಗೆ ಸರಿಸಾಟಿಯೇ ಇಲ್ಲ ಎನಿಸಿಕೊಂಡಿದ್ದಾರೆ... ಅರುಂಧತಿ ಮತ್ತು ಭಾಗಮತಿಯಂತಹ ಸಿನಿಮಾಗಳು ಆಕೆಯ ವೃತ್ತಿಜೀವನವನ್ನು ಎಲ್ಲೋ ಕೊಂಡೊಯ್ದವು. ಅನುಷ್ಕಾ ಸ್ಟಾರ್‌ಡಮ್ ಎಷ್ಟು ಬೆಳೆದಿದೆ ಎಂದರೇ ಟಾಲಿವುಡ್‌ನಲ್ಲಿ ಸ್ಟಾರ್ ಹೀರೋಗಳನ್ನು ಮೀರಿದ ಇಮೇಜ್‌ ಅವರಿಗಿದೆ... ಸ್ಟಾರ್ ಹೀರೋಗಳಿಗೆ ಸರಿಸಮಾನವಾಗಿ ಸಂಭಾವನೆಯನ್ನೂ ತೆಗೆದುಕೊಂಡಿದ್ದಾರೆ ಈ ಸುಂದರಿ. ಅಷ್ಟೇ ಅಲ್ಲ, ತಮ್ಮ ವೃತ್ತಿ ಜೀವನದಲ್ಲಿ ಒಂದಷ್ಟು ರಿಸ್ಕ್ ಪಾತ್ರಗಳನ್ನು ಸಹ ಮಾಡಿದ್ದಾರೆ. ಅದರಲ್ಲಿ ವೇದ ಚಿತ್ರದಲ್ಲಿ ವೇಶ್ಯೆಯ ಪಾತ್ರವೂ ಒಂದು. ಒಬ್ಬ ಸ್ಟಾರ್ ಹೀರೋಯಿನ್... ಕೆರಿಯರ್ ಒಳ್ಳೆ ಸ್ವಿಂಗ್ ಆಗಿರುವಾಗ... ಇಂಥ ಪಾತ್ರ ಮಾಡುವುದೇ ದೊಡ್ಡ ಸಾಹಸವೇ ಸರಿ.. ಇದನ್ನೂ ಓದಿ- ಕ್ರಿಶ್ ನಿರ್ದೇಶನದಲ್ಲಿ, ಅರ್ಕಾ ಮೀಡಿಯಾ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ಪ್ರಸಾದ್ ದೇವಿನೇನಿ ನಿರ್ಮಿಸಿದ ವೇದಂ ಚಿತ್ರವು 2010 ರಲ್ಲಿ ಬಿಡುಗಡೆಯಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಹಲವು ಪ್ರಶಸ್ತಿಗಳನ್ನೂ ಗೆದ್ದಿತು.. ಆದರೆ ವೇದಾ ಚಿತ್ರದಲ್ಲಿ ವೇಶ್ಯೆಯಾಗಿ ಅನುಷ್ಕಾ ನಟಿಸಲಿದ್ದಾರೆ ಎಂಬ ಸುದ್ದಿ ಬಂದಾಗ ಆಕೆಯ ಅಭಿಮಾನಿಗಳು, ಸಿನಿಪ್ರೇಮಿಗಳು ಹಾಗೂ ಕೋಸ್ಟಾರ್‌ಗಳು ಕೂಡ ಶಾಕ್ ಆಗಿದ್ದರು. ಏಕೆಂದರೆ ಆಗಲೂ ಅನುಷ್ಕಾ ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ತಮ್ಮ ಶಕ್ತಿ ತೋರಿಸುತ್ತಿದ್ದರು. ಅರುಂಧತಿಯಂತಹ ಸಿನಿಮಾದ ಮೂಲಕ ಹೀರೋಗಳಿಗೆ ಸರಿಸಮಾನವಾಗಿ ಕ್ರೇಜ್ ಗಳಿಸಿದ್ದರು..ಈ ಪಾತ್ರವನ್ನು ಅನುಷ್ಕಾ ಮಾಡಬಾರದು ಎಂದು ಪ್ಯಾನ್ಸ್ ವಿನಂತಿಸಿದ್ದರು. ಇದನ್ನೂ ಓದಿ- ಅಷ್ಟೇ ಅಲ್ಲ ಇಂಡಸ್ಟ್ರಿಯಲ್ಲಿರುವ ಸ್ಟಾರ್ ಗಳೂ..ಯಾಕೆ ಇಷ್ಟೊಂದು ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ? ಮತ್ತು ಇಂಡಸ್ಟ್ರಿಯಲ್ಲಿ ಅನುಷ್ಕಾಗೆ ತುಂಬಾ ಕ್ಲೋಸ್ ಮತ್ತು ಬೆಸ್ಟ್ ಫ್ರೆಂಡ್ ಆಗಿರುವ ಪ್ರಭಾಸ್ ಕೂಡ ಅನುಷ್ಕಾಗೆ ಈ ವಿಚಾರವಾಗಿ ಸಖತ್ ವಾರ್ನಿಂಗ್ ಕೊಟ್ಟಿದ್ದರಂತೆ.. ಸಿನಿಮಾ ಸೂಪರ್ ಹಿಟ್ ಎಂದು ಹೇಳಲಾಗದು ಆದರೆ ಅನುಷ್ಕಾ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು... ಪ್ರಶಸ್ತಿಯೂ ಬಂದಿತ್ತು. ಈ ಸಿನಿಮಾದ ಪ್ರಭಾವ ಆಕೆಯ ಕೆರಿಯರ್ ಮೇಲೆ ಅಷ್ಟಾಗಿ ಪರಿಣಾಮ ಬೀರಿಲ್ಲ.. ಈ ಚಿತ್ರದ ನಂತರವೂ ಅನುಷ್ಕಾ ಬಾಹುಬಲಿಯಂತಹ ದೊಡ್ಡ ಪ್ರಾಜೆಕ್ಟ್‌ಗಳನ್ನು ಮಾಡಿದ್ದಾರೆ. ಸದ್ಯ ಅನುಷ್ಕಾ ಹೆಚ್ಚು ಸಿನಿಮಾ ಮಾಡುತ್ತಿಲ್ಲ. 42 ವರ್ಷದವರಾದರೂ ಮದುವೆಯಾಗದೆ ಬ್ಯಾಚುಲರ್ ಲೈಫ್ ಮುಂದುವರಿಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...