"ಅವರು... ಇದು ನಟನೆಗೆ ಸರಿಯಾದ ಮುಖವೇ ಅಂತ ಅವಮಾನಿಸಿದ್ರು"- ನ್ಯಾಷನಲ್‌ ಕ್ರಶ್ ರಶ್ಮಿಕಾ ಮಂದಣ್ಣ‌ ಶಾಕಿಂಗ್‌ ಹೇಳಿಕೆ : ಸಿನಿರಂಗದ ಪ್ರವೇಶ ಆಕೆಗೆ ಸುಲಭವಾಗಿರಲಿಲ್ಲ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ʼಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಮಾತನಾಡಿದ್ದ ರಶ್ಮಿಕಾ ಮಂದಣ್ಣ ಚಿತ್ರರಂಗದಲ್ಲಿ ಆಡೀಷನ್‌ ನೀಡುವ ಸಂದರ್ಭದಲ್ಲಿ ಆಕೆ ಅನುಭವಿಸಿದ ನೋವುಗಳ ಬಗ್ಗೆ ಮಾತನಾಡಿದ್ದಾರೆ. :ನಟಿ ರಶ್ಮಿಕಾ ಮಂದಣ್ಣ ಕೊನೆಯದಾಗಿ ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಪುಷ್ಪ 2: ದಿ ರೂಲ್, ಕುಬೇರ, ರೈನ್ಬೋ, ದಿ ಗರ್ಲ್‌ಫ್ರೆಂಡ್, ಚಾವ ಮತ್ತು ಸಿಕಂದರ್ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. 2016 ರಲ್ಲಿ ಕನ್ನಡದ ರೊಮ್ಯಾಂಟಿಕ್ ಕಾಮಿಡಿ ʼಕಿರಿಕ್ ಪಾರ್ಟಿʼಯೊಂದಿಗೆ ಸಿನಿಜಗತ್ತಿಗೆ ಪಾದಾರ್ಪಣೆ ಮಾಡಿದ ರಶ್ಮಿಕಾ ಇದೀಗ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಇದನ್ನೂ ಓದಿ: ಆದರೆ, ಸಿನಿರಂಗದ ಪ್ರವೇಶ ಆಕೆಗೆ ಸುಲಭವಾಗಿರಲಿಲ್ಲ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ʼಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಮಾತನಾಡಿದ್ದ ರಶ್ಮಿಕಾ ಮಂದಣ್ಣ ಚಿತ್ರರಂಗದಲ್ಲಿ ಆಡೀಷನ್‌ ನೀಡುವ ಸಂದರ್ಭದಲ್ಲಿ ಆಕೆ ಅನುಭವಿಸಿದ ನೋವುಗಳ ಬಗ್ಗೆ ಮಾತನಾಡಿದ್ದಾರೆ. ತನ್ನ ಹೋರಾಟದ ದಿನಗಳನ್ನು ನೆನಪಿಸಿಕೊಂಡ ರಶ್ಮಿಕಾ, "ವೃತ್ತಿಜೀವನದ ಆರಂಭದಲ್ಲಿ ಹಲವಾರು ಅವಮಾನಗಳನ್ನು ಎದುರಿಸಿದ್ದೆ. ದಿನಾ ಕಣ್ಣೀರಿಡುತ್ತಾ ಮನೆಗೆ ಬರುತ್ತಿದೆ. ಇದು ನಟನೆಗೆ ಸರಿಯಾದ ಮುಖವೇ... ಎಂದೆಲ್ಲಾ ಅವಮಾನಿಸುತ್ತಿದ್ದರು, ತಿರಸ್ಕರಿಸುತ್ತಿದ್ದರು" ಎಂದು ನೋವಿನ ಸಂಗತಿ ಬಿಚ್ಚಿಟ್ಟಿದ್ದಾರೆ. "ಸಾಕಷ್ಟು ಹೋರಾಟ ಮತ್ತು ತಾಳ್ಮೆಯ ನಂತರ ಕೊನೆಗೂ ಆಡಿಷನ್‌ʼನಲ್ಲಿ ಸೆಲೆಕ್ಟ್‌ ಆದೆ. ಆ ಪಾತ್ರಕ್ಕೆ ಆಯ್ಕೆ ಮಾಡುವ ಮೊದಲು ಅನೇಕ ಸುತ್ತಿನ ಆಡಿಷನ್‌ ಮಾಡಿದ್ರು. ಆದರೆ ಅವರಿಗೆ ಹಿಡಿಸಲಿಲ್ಲ. ಇನ್ನು ಈ ಪ್ರಾಜೆಕ್ಟ್‌ʼಗಾಗಿ 2-3 ತಿಂಗಳು ತರಬೇತಿ ಪಡೆದೆ. ಕೊನೆಗೆ ಆ ಪ್ರಾಜೆಕ್ಟ್‌ ಕ್ಯಾನ್ಸಲ್‌ ಅಂದರು" ಎಂದು ಹೋರಾಟದ ದಿನಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಇನ್ನು ಈ ಎಲ್ಲಾ ಅವಮಾನಗಳು, ಕಿರಿಕ್‌ ಪಾರ್ಟಿ ಸಿನಿಮಾದ ನಟನೆಯ ನಂತರ ಮುಕ್ತಾಯಗೊಂಡಿತು ಎಂದೇ ಹೇಳಬಹುದು. ಈ ಸಿನಿಮಾದ ಬಳಿಕ ರಶ್ಮಿಕಾ ಸಿನಿಬದುಕಲ್ಲಿ ನಡೆದಿದ್ದೆಲ್ಲಾ ಇತಿಹಾಸವೇ... ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...