ವಿಚ್ಛೇದನದ ಬಳಿಕ ಸಮಂತಾಗೆ ಇಷ್ಟು ಕೋಟಿ ಜೀವನಾಂಶ ಕೊಟ್ಟಿದ್ದಾರಾ ನಾಗಚೈತನ್ಯ?! : ಸೌತ್‌ ಸಿನಿರಂಗದ ಪ್ರಸಿದ್ಧ ನಟಿ, ಸಮಂತಾ ರುತ್ ಪ್ರಭು ಅವರು ತಮ್ಮ ವೃತ್ತಿಪರ ಜೀವನ ಮತ್ತು ವೈಯಕ್ತಿಕ ಜೀವನಕ್ಕಾಗಿ ಸುದ್ದಿಯಲ್ಲಿ ಉಳಿದಿದ್ದಾರೆ. 2021 ರಲ್ಲಿ ಸಮಂತಾಗೆ ವಿಚ್ಛೇದನ ನೀಡಿದ ನಂತರ, ನಾಗ ಚೈತನ್ಯ ಈಗ ಶೋಭಿತಾ ಧೂಳಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. - : ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಒಂದು ಕಾಲದಲ್ಲಿ ಅಭಿಮಾನಿಗಳ ನೆಚ್ಚಿನ ಜೋಡಿಯಾಗಿದ್ದರು. ಆದರೆ 2021 ರಲ್ಲಿ ದಂಪತಿಗಳು ಬೇರ್ಪಟ್ಟರು. ಮಾಧ್ಯಮ ವರದಿಗಳ ಪ್ರಕಾರ, ದಂಪತಿಗಳ ವಿಚ್ಛೇದನದ ನಂತರ, ಸಮಂತಾ ರುತ್ ಪ್ರಭು ಅವರು ನಾಗಾ ಅವರಿಗೆ ಜೀವನಾಂಶವಾಗಿ 200 ಕೋಟಿ ರೂ. ನೀಡಲು ನಿರ್ಧರಿಸಿದ್ದು, ಆದರೆ ನಟಿ ನಿರಾಕರಿಸಿದ್ದರಂತೆ.. ಇದನ್ನೂ ಓದಿ- ಕರಣ್ ಜೋಹರ್ ಅವರ ಕಾಫಿ ವಿಥ್ ಕರಣ್ ಸಂಚಿಕೆಯಲ್ಲಿ ಸಮಂತಾ ಅವರನ್ನು ಕೇಳಿದಾಗ, ನಟಿ ಈ ವದಂತಿಗಳಿಗೆ ಪ್ರತಿಕ್ರಿಯಿಸಿಲ್ಲ.. ಮಾಹಿತಿಯ ಪ್ರಕಾರ, ಸಮಂತಾ ಮತ್ತು ನಾಗನ ವಿಚ್ಛೇದನಕ್ಕೆ 6 ತಿಂಗಳ ಮೊದಲು, ನಟಿ ತನ್ನ ಮಗು ಮಾಡಿಕೊಳ್ಳುವ ಪ್ಯ್ಯಾನ್‌ ಕೂಡ ಮಾಡಿದ್ದರಂತೆ.. ಸ್ವಲ್ಪ ಸಮಯದವರೆಗೆ ಸಿನಿಮಾಗಳಿಂದ ವಿರಾಮ ತೆಗೆದುಕೊಂಡು ತಮ್ಮ ವೈಯಕ್ತಿಕ ಜೀವನದತ್ತ ಗಮನ ಹರಿಸಲು ಬಯಸಿದ್ದರಂತೆ.. ನಟಿ ಹಲವಾರು ಸಂದರ್ಶನಗಳಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು.. ಆದರೆ ದುರಾದೃಷ್ಟವಶಾತ್ ಇಬ್ಬರೂ ವಿಚ್ಛೇದನ ಪಡೆದರು. ಇದನ್ನೂ ಓದಿ- ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥದ ದಿನದಿಂದ ಅಭಿಮಾನಿಗಳು ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ... ಚೈ ದ್ರೋಹ ಬಗೆದಿದ್ದಾನೆ ಅಂತಾರೆ ಸಮಂತಾ ಅಭಿಮಾನಿಗಳು. ಸದ್ಯ ನಾಗ ಮತ್ತು ಶೋಭಿತಾ ನಿಶ್ಚಿತಾರ್ಥದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...