ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ಬಗ್ಗೆ ಅಭಿಷೇಕ್ ಬಚ್ಚನ್ ಮೊದಲ ಪ್ರತಿಕ್ರಿಯೆ!ದಾಖಲೆ ತೋರಿಸಿಯೇ ಮಾತನಾಡಿದ ಬಿಗ್ ಬಿ ಪುತ್ರ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ವಿಚ್ಛೇದನ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿದೆ. ಇದೀಗ ಮೊದಲ ಬಾರಿಗೆ ಮಾಧ್ಯಮದ ಎದುರು ಬಂದು ಅಭಿಷೇಕ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. :ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ವಿಚ್ಛೇದನದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.ಕಳೆದ ಕೆಲವು ತಿಂಗಳುಗಳಿಂದ ಅವರ ವಿಚ್ಛೇದನದ ವದಂತಿಗಳು ವೇಗವಾಗಿ ಹರಿದಾಡುತ್ತಿದೆ.ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳು ಆರಾಧ್ಯ ಜೊತೆ ಅಂಬಾನಿ ವಿವಾಹ ಸಮಾರಂಭಕ್ಕೆ ಏಕಾಂಗಿಯಾಗಿ ಆಗಮಿಸಿದ್ದರು. ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ನಂದಾ, ನವ್ಯ ನಂದಾ ಇವರೆಲ್ಲಾ ಜೊತೆಯಾಗಿ ಮದುವೆಗೆ ಆಗಮಿಸಿದ್ದರು. ಇದಾದ ನಂತರ,ಅಭಿಷೇಕ್ ಬಚ್ಚನ್ ವಿಚ್ಛೇದನಕ್ಕೆ ಸಂಬಂಧಿಸಿದ ಒಂದು ಪೋಸ್ಟ್ ಗೆ ಸಾಮಾಜಿಕ ಮಾಧ್ಯಮದಲ್ಲಿ ಲೈಕ್ ಕೊಟ್ಟಿದ್ದರು. ಇಲ್ಲಿಂದ ವಿಚ್ಛೇದನ ಎನ್ನುವ ಸುದ್ದಿ ರೆಕ್ಕೆ ಪುಕ್ಕ ಪಡೆದುಕೊಂಡಿತು. ಇನ್ನು ಅಭಿಷೇಕ್ ಕೂಡಾ ವಿಚ್ಛೇದನವನ್ನು ಖಚಿತಪಡಿಸಿದ್ದಾರೆ ಎನ್ನುವ ಡೀಪ್‌ಫೇಕ್ ವಿಡಿಯೋ ಕೂಡಾ ಹರಿದಾಡಿತು. ಅವರ ಈ ಡೀಪ್‌ಫೇಕ್ ವೀಡಿಯೊ ಭಾಳ ವೇಗವಾಗಿ ವೈರಲ್ ಆಗಿದೆ. ಈ ಮಧ್ಯೆ, ಅಭಿಷೇಕ್ ಬಚ್ಚನ್ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಬಾಲಿವುಡ್ ಯುಕೆ ಮಾಧ್ಯಮದ ಜೊತೆ ಮಾತಬಾಡಿದ ಅಭಿಷೇಕ್ ತಮ್ಮ ಮದುವೆಯ ಉಂಗುರವನ್ನು ತೋರಿಸಿದ್ದಾರೆ. ಈ ಮೂಲಕ ನಮ್ಮಿಬ್ಬರ ವಿಚ್ಛೇದನ ಆಗಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ : "ಹೀಗ್ಯಾಕೆ ಆಗುತ್ತಿದೆ ಗೊತ್ತಿದೆ ":“ಈ ಎಲ್ಲಾ ವಿಚಾರಗಳ ಬಗ್ಗೆ ನಾನು ಮಾತನಾಡುವುದಿಲ್ಲ.ದುಃಖಕರವೆಂದರೆ ಇಡೀ ವಿಷಯವು ಮಿತಿ ಮೀರಿದೆ.ಯಾಕೆ ಹೀಗಾಗುತ್ತಿದೆ ಎನ್ನುವುದು ನಂಗೆ ತಿಳಿದಿದೆ. ಈ ಸುದ್ದಿ ಹೇಗೆ ಹಬ್ಬಿತು ಯಾಕೆ ಹಬ್ಬಿತು ಎನ್ನುವುದು ಗೊತ್ತಿದೆ.ನಾವು ಸೆಲೆಬ್ರಿಟಿಗಳು, ಇದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇನ್ನುಸಂಪೂರ್ಣ ನಕಲಿ ಎನ್ನುವುದನ್ನು ಕೂಡಾ ಅಭಿಷೇಕ್ ಒತ್ತಿ ಹೇಳಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...