ಪ್ಲೀಸ್ ನನ್ನನ್ನು ಮದ್ವೆಯಾಗಿ ಎಂದು ಬೇಡಿಕೊಂಡ ಅಭಿಮಾನಿಗೆ ಸಮಂತಾ ಕೊಟ್ಟ ಉತ್ತರವೇನು ಗೊತ್ತಾ? : ಮುಕೇಶ್ ಚಿಂತಾ ಹೆಸರಿನ ಇನ್ಸ್ಟಾಗ್ರಾಂ ಬಳಕೆದಾರನೊಬ್ಬ ಸಮಂತಾರಿಗೆ ಪ್ರಪೋಸ್ ಮಾಡುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾನೆ. ʼಸಮಂತಾ ನೀವು ತುಂಬಾ ಬೇಸರ ಮಾಡಿಕೊಳ್ಳಬೇಕಿಲ್ಲ. ನಾನು ನಿಮಗಾಗಿ ಇದ್ದೇನೆ. ನಾನು ಮತ್ತು ನೀವು ಒಳ್ಳೆಯ ಜೋಡಿಯಾಗಬಹುದು. ನೀವು ಅಂದರೆ ನಾನು ನಿಮ್ಮನ್ನು ಮದುವೆಯಾಗಲು ಸಿದ್ಧʼವೆಂದು ಹೇಳಿದ್ದಾನೆ. :ಟಾಲಿವುಡ್​ ಹೀರೋ ಮತ್ತು ಖ್ಯಾತ ನಟಿ ಸಮಂತಾರ ಮಾಜಿ ಪತಿ ನಾಗಚೈತನ್ಯ ೨ನೇ ಮದುವೆಗೆ ಸಜ್ಜಾಗಿದ್ದಾರೆ. ಆಗಸ್ಟ್​ 8ರಂದು ನಟಿ ಶೋಭಿತಾ ಧೂಳಿಪಾಲರೊಂದಿಗೆ ನಾಗಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರವೇ ಈ ಜೋಡಿ ಹಸೆಮಣೆ ಏರಲಿದೆ. ಯಾವಾಗನಿಶ್ಚಿತಾರ್ಥ ಮಾಡಿಕೊಂಡರೋ ಇದೀಗ ಎಲ್ಲರ ಕಣ್ಣು ಸಮಂತಾರ ಮೇಲೆ ಬಿದ್ದಿದೆ. ಈ ನಿಶ್ಚಿತಾರ್ಥದ ಬಗ್ಗೆ ಸಮಂತಾ ಏನು ಹೇಳುತ್ತಾರೋ ಅನ್ನೂ ಕುತೂಹಲ ಮೂಡಿದೆ. ಇದೇ ಕಾರಣದಿಂದ ಸಮಂತಾ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ಟ್ರೆಂಡ್​ ಸೃಷ್ಟಿಸಿದ್ದಾರೆ. ಇದೆಲ್ಲದವರ ನಡುವೆ ಅಭಿಮಾನಿಯೊಬ್ಬ ಮಾಡಿದ ಪ್ರೇಮ ನಿವೇದನೆಗೆ ಎನ್ನುವ ಮೂಲಕ ಸಮಂತಾ ಮತ್ತೆ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ಹೌದು, ಮುಕೇಶ್​ ಚಿಂತಾ ಹೆಸರಿನ ಇನ್​ಸ್ಟಾಗ್ರಾಂ ಬಳಕೆದಾರನೊಬ್ಬ ಸಮಂತಾರಿಗೆ ಪ್ರಪೋಸ್​ ಮಾಡುತ್ತಿರುವ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾನೆ. ʼಸಮಂತಾ ನೀವು ತುಂಬಾ ಬೇಸರ ಮಾಡಿಕೊಳ್ಳಬೇಕಿಲ್ಲ. ನಾನು ನಿಮಗಾಗಿ ಇದ್ದೇನೆ. ನಾನು ಮತ್ತು ನೀವು ಒಳ್ಳೆಯ ಜೋಡಿಯಾಗಬಹುದು. ನೀವು ಅಂದರೆ ನಾನು ನಿಮ್ಮನ್ನು ಮದುವೆಯಾಗಲು ಸಿದ್ಧ. ನೀವು ನನಗೆ ಸ್ವಲ್ಪ ವರ್ಷ ಸಮಯ ಕೊಡಿ, ನಾನು ಚೆನ್ನಾಗಿ ಹಣ ಸಂಪಾದನೆ ಮಾಡಿ ನಿಮ್ಮ ಬಳಿಗೆ ಬರುತ್ತೇನೆ. ನನ್ನ ಹೃದಯವನ್ನು ಸದ್ಯಕ್ಕೆ ಟೋಕನ್​ ಆಗಿ ಇಟ್ಟುಕೊಳ್ಳಿ. ದಯವಿಟ್ಟು ನನ್ನನ್ನು ಮದುವೆಯಾಗಿ ಸ್ಯಾಮ್​. ಪ್ಲೀಸ್​ ಸಮಂತಾ.. ಪ್ಲೀಸ್​.. ಪ್ಲೀಸ್...​ ಅಂತಾ ಹೇಳಿದ್ದಾನೆ. ಅಭಿಮಾನಿಯ ಪ್ರಪೋಸ್‌ನ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿದ್ದು, ಅದು ಸಮಂತಾರ ಕಣ್ಣಿಗೂ ಬಿದ್ದಿದೆ. ಈ ಪೋಸ್ಟ್‌ಗೆ ಅವರು ಪ್ರತಿಕ್ರಿಯೆ ಸಹ ನೀಡಿದ್ದಾರೆ. ಅಭಿಮಾನಿ ಹಂಚಿಕೊಂಡಿರುವ ವಿಡಿಯೋದ ಬ್ಯಾಕ್​ಗ್ರೌಂಡ್​ನಲ್ಲಿ ಜಿಮ್​ ದೃಶ್ಯಾವಳಿಗಳಿವೆ. ʼಹಿಂಬದಿಯಲ್ಲಿರುವ ಆ ಜಿಮ್​ ಬ್ಯಾಂಕ್​ಗ್ರೌಂಡ್​ ಬಹುತೇಕ ನನಗೆ ಮನವರಿಕೆ ಮಾಡಿದೆ( ♥️) ಎಂದು ಹಾರ್ಟ್‌ ಸಿಂಬಲ್ ಹಾಕುವ ಮೂಲಕ ಅಭಿಮಾನಿಯ ಪ್ರೇಮ ನಿವೇದನೆಗೆ ಸಮಂತಾ ಎಂದಿದ್ದಾರೆ. ಇದನ್ನೂ ಓದಿ: ರ ಈ ಪ್ರತಿಕ್ರಿಯೆಯಿಂದ ತುಂಬಾ ಖುಷಿಯಾಗಿರುವ ಅಭಿಮಾನಿ, ʼಇಡೀ ಜಗತ್ತೇ ಸಮಂತಾರ ಎದುರು ನಿಂತುಕೊಂಡರೆ, ನಾನು ಆ ಜಗತ್ತಿನ ವಿರುದ್ಧವಾಗಿ ನಿಲ್ಲುತ್ತೇನೆʼ ಅಂತಾ ಹೇಳಿದ್ದಾನೆ. ಸದ್ಯ ಈ ಪೋಸ್ಟ್​ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್​ ಆಗುತ್ತಿದೆ. ಅಭಿಮಾನಿಯ ಪೋಸ್ಟ್‌ಗೆ ಸ್ವತಃ ನಟಿ ಸಮಂತಾ ಉತ್ತರಿಸಿರುವುದನ್ನು ಕಂಡು ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...