ಅಭಿಷೇಕ್-ಐಶ್ವರ್ಯಾ ವಿಚ್ಛೇದನ ಪಡೆಯೋಕೆ ಸಾಧ್ಯವೇ ಇಲ್ಲ.. ವದಂತಿಗಳಿಗೆ ಬ್ರೇಕ್‌ ಹಾಕಿತು ʼಈʼ ವೈರಲ್‌ ಪೋಟೋ!! : ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಾಲಿವುಡ್‌ನ ಹೆಚ್ಚು ಮಾತನಾಡುವ ಜೋಡಿಗಳಲ್ಲಿ ಒಬ್ಬರು. ಆದರೆ, ಕಳೆದ ಕೆಲವು ದಿನಗಳಿಂದ ಇವರಿಬ್ಬರ ವಿಚ್ಛೇದನದ ಸುದ್ದಿ ಜೋರಾಗಿ ಹರಡುತ್ತಿದೆ.. ಇದೆಲ್ಲದರ ಕಾಣಿಸಿಕೊಂಡಿರುವ ಅವರಿಬ್ಬರ ಪೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.. : ಕಳೆದ ಕೆಲವು ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವೆ ಯಾವುದೂ ಸರಿಯಿಲ್ಲ ಎಂಬ ವರದಿಗಳು ಬರುತ್ತಿವೆ. ಇದರ ನಡುವೆ ನಟಿ ಇತ್ತೀಚೆಗೆ ತನ್ನ ಮಗಳು ಆರಾಧ್ಯ ಬಚ್ಚನ್ ಜೊತೆ ವಿಹಾರಕ್ಕೆ ವಿದೇಶಕ್ಕೆ ಹೋಗಿದ್ದರು. ಈ ವೇಳೆ ಅಭಿಷೇಕ್ ನಟಿ ಜೊತೆ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಹೊರಬಿದ್ದಿರುವ ಪೋಟೋಗಳು ವಿಚ್ಛೇದನದ ಸುದ್ದಿಯನ್ನು ಅಲ್ಲಗಳೆದಿವೆ. ವಾಸ್ತವವಾಗಿ, ರಾಯಲ್ ಬ್ಲಾಕ್ ಲೆಮನ್ ಕಂಪನಿಯ ಸಿಇಒ ಅಭಿಷೇಕ್ ಮತ್ತು ಐಶ್ವರ್ಯಾ ಅವರೊಂದಿಗಿನ ಕೆಲವು ಪೋಟೋಗಳನ್ನು ತಮ್ಮ ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ದಂಪತಿಗಳು ತಮ್ಮ ಮಗಳು ಆರಾಧ್ಯ ಅವರೊಂದಿಗೆ ಹಾಲಿಡೇ ಕಳೆಯುತ್ತಿಯುವುದನ್ನು ಕಾಣಬಹುದು. ಈಗ ವಿಚ್ಛೇದನದ ಸುದ್ದಿಯ ನಡುವೆ, ಅಭಿಮಾನಿಗಳು ಜೋಡಿಯನ್ನು ಒಟ್ಟಿಗೆ ನೋಡಿ ಖುಷಿಯಾಗಿದ್ದಾರೆ.. ಇದನ್ನೂ ಓದಿ- ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಪ್ರತ್ಯೇಕವಾಗಿ ಆಗಮಿಸಿದ್ದರು.. ಅಲ್ಲಿ ಅಭಿಷೇಕ್ ತನ್ನ ಕುಟುಂಬದೊಂದಿಗೆ ಕಾಣಿಸಿಕೊಂಡರೇ, ಮಗಳು ಆರಾಧ್ಯ ಜೊತೆ ಐಶ್ವರ್ಯಾ ರೈ ಒಬ್ಬರೇ ಆಗಮಿಸಿದ್ದರು. ನಂತರ, ಐಶ್ವರ್ಯಾ ಮತ್ತು ಅಭಿಷೇಕ್ ಒಟ್ಟಿಗೆ ಇರುವ ಫೋಟೋ ವೈರಲ್ ಆಗಿತ್ತು. ಆದರೆ ಇದರ ಬಳಿಕವೇ ಐಶ್ವರ್ಯಾ ಮತ್ತು ಬಚ್ಚನ್ ಕುಟುಂಬದ ನಡುವೆ ಏನೋ ಸರಿಯಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹಗಳು ಪ್ರಾರಂಭವಾದವು. ಹಾಗೇ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿ ಸುದ್ದಿ ಮಾಡಿದ್ದು ಇದೇ ಮೊದಲಲ್ಲ. ಐಶ್ವರ್ಯಾ ತನ್ನ ಅತ್ತೆಯ ಮನೆ ಜಲ್ಸಾವನ್ನು ತೊರೆದು ತನ್ನ ತಾಯಿಯ ಮನೆಗೆ ತೆರಳಿದ್ದಾಳೆ ಎಂಬ ಸುದ್ದಿ ಈ ಹಿಂದೆ ಬಂದಿತ್ತು. ವರದಿಗಳನ್ನು ನಂಬುವುದಾದರೆ, ಐಶ್ವರ್ಯಾ ಮತ್ತು ಬಚ್ಚನ್ ಕುಟುಂಬದ ನಡುವೆ ಕೆಲವು ಭಿನ್ನಾಬಿಪ್ರಾಯಗಳಿವೆ ಎನ್ನಲಾಗಿದೆ.. ಆದರೆ ಈಗ ಈ ಪೋಟೋಗಳು ಹೊರಬಂದ ನಂತರ, ಊಹಾಪೋಹಗಳು ತಪ್ಪು ಎಂದು ಸಾಬೀತಾಗಿದೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...