ಪಬ್ಲಿಕ್‌ನಲ್ಲೇ ಮುತ್ತು .. ʼಈʼ ಖ್ಯಾತ ವ್ಯಕ್ತಿಯೊಂದಿಗೆ ಐಶ್ವರ್ಯ ರೈ ಅಫೇರ್..?‌! ಅಭಿಷೇಕ್‌ ಜೊತೆ ಡಿವೋರ್ಸ್‌ ಫಿಕ್ಸ್?‌! - : ಅಭಿಷೇಕ್ ಬಚ್ಚನ್ - ಐಶ್ವರ್ಯಾ ರೈ ದಂಪತಿಗಳು ಬಾಲಿವುಡ್‌ನ ಫೇಮಸ್‌ ಕಪಲ್. 2007ರಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಗೊತ್ತೇ ಇದೆ. ಅವರಿಗೆ ಆರಾಧ್ಯ ಎಂಬ ಮಗಳೂ ಇದ್ದಾಳೆ. : 16 ವರ್ಷಗಳಿಂದ ಉತ್ತಮವಾಗಿ ನಡೆಯುತ್ತಿರುವ ಅಭಿಷೇಕ್ ಬಚ್ಚನ್ - ಐಶ್ವರ್ಯಾ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ತಲೆದೂರಿವೆಯಂತೆ.. ಅಲ್ಲದೇ ಕಳೆದ ಕೆಲವು ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನುವ ಹಲವಾರು ಸುದ್ದಿಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿವೆ..ಈ ಸುದ್ದಿಗೆ ಪುಷ್ಟಿ ನೀಡುವಂತೆ ಬಚ್ಚನ್ ಫ್ಯಾಮಿಲಿ ಐಶ್ವರ್ಯ ಅವರೊಂದಿಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ.. ಇದೇ ವೇಳೆ ಬಿಗ್ ಬಿ ಅಮಿತಾಬ್ ತಮ್ಮ ಸೊಸೆ ಐಶ್ವರ್ಯಾ ರೈ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅನ್ ಫಾಲೋ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಐಶ್ವರ್ಯಾ ರೈ - ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಚರ್ಚೆ ನಡೆಸಿದ್ದಾರೆ.. ಐಶ್ವರ್ಯಾ ರೈ ತಮ್ಮ ಫ್ಯಾಮಿಲಿ ಫೋಟೋಗಳನ್ನು ಹಂಚಿಕೊಂಡರೂ ತಾವು ಚೆನ್ನಾಗಿಯೇ ಇದ್ದೇವೆ ವಿಚ್ಛೇದನ ಪಡೆಯುತ್ತಿಲ್ಲ ಎಂದು ಸ್ಪಷ್ಟನೆ ನೀಡುತ್ತಾ ಬಂದರೂ ಈ ವದಂತಿಗಳು ನಿಂತಿಲ್ಲ. ಇದನ್ನೂ ಓದಿ- ಅಂಬಾನಿ ಮನೆಯಲ್ಲಿ ನಡೆದ ಮದುವೆಯಲ್ಲಿ ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ವಿಚ್ಛೇದನದ ಮಾತು ಮುನ್ನೆಲೆಗೆ ಬಂದಿತು... ಫೋಟೋ ಸೆಷನ್‌ನ ಭಾಗವಾಗಿ, ಐಶ್ವರ್ಯಾ ರೈ ಒಬ್ಬರೇ ಪೋಟೋಗಳಿಗೆ ಪೋಸ್‌ ನೀಡಿದ್ದರು.. ಹೀಗಾಗಿ ಮತ್ತೊಮ್ಮೆ ದಂಪತಿಗಳ ವಿಚ್ಛೇದನದ ಬಗ್ಗೆ ಚರ್ಚೆ ನಡೆದಿದೆ.. ಈ ಘಟನೆಯ ನಂತರ ಐಶ್ವರ್ಯ ರೈ ಮಗಳ ಜೊತೆ ಒಂಟಿಯಾಗಿ ವಿದೇಶಕ್ಕೆ ಹೋಗಿದ್ದು ಹಾಟ್ ಟಾಪಿಕ್ ಆಗಿತ್ತು. ಮುಂಬೈ ವಿಮಾನ ನಿಲ್ದಾಣದಲ್ಲಿ ಐಶರ್ಯ ಮತ್ತು ಆರಾಧ್ಯ ಕಾಣಿಸಿಕೊಂಡರು ಮತ್ತು ಅಭಿಷೇಕ್ ಬಚ್ಚನ್ ಇರಲಿಲ್ಲ.. ಆಗಲೂ ಮತ್ತೊಮ್ಮೆ ದಂಪತಿಗಳ ವಿಚ್ಛೇದನದ ಬಗ್ಗೆ ಸುದ್ದಿ ಹರಿದಾಡತೊಡಗಿತು.. ಈ ನಡುವೆ ಐಶ್ವರ್ಯ ರೈ ಒಬ್ಬ ವ್ಯಕ್ತಿಯೊಂದಿಗೆ ಕ್ಲೋಸ್ ಆಗುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಹೌದು ಜಿರಾಕ್ ಮಾರ್ಕರ್ ಎಂಬ ವೈದ್ಯರಿಗೆ ಐಶ್ವರ್ಯಾ ರೈ ಆಪ್ತರಾಗಿದ್ದಾರೆ ಎಂಬ ಸುದ್ದಿ ಇದೆ. ಆದರೆ ಈ ಗೆಳೆತನ ಈಗ ಬೇರೆ ಸಂಬಂಧಕ್ಕೆ ತಿರುಗಿದೆ ಎಂದು ಬಾಲಿವುಡ್ ಮಂದಿ ಚರ್ಚಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಐಶ್ವರ್ಯಾ ಅವರು ವೈದ್ಯರೊಂದಿಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಅವರೊಂದಿಗೆ ಕ್ಲೋಸ್‌ ಆಗಿರುವ ಫೋಟೋಗಳು ಮತ್ತು ವಿಡಿಯೋಗಳು ಇದೀಗ ಸಖತ್ ವೈರಲ್ ಆಗುತ್ತಿವೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...