"ನಾವು ವಿಚ್ಛೇದನ ಪಡೆಯುತ್ತಿದ್ದೇವೆ..." ಐಶ್ವರ್ಯಾ ರೈ ಜೊತೆ ವಿಚ್ಛೇದನ ಖಚಿತಪಡಿಸಿದ ಅಭಿಷೇಕ್ ಬಚ್ಚನ್!? ಸೆನ್ಸೇಷನಲ್ ಹೇಳಿಕೆ ವಿಡಿಯೋ : ಈ ವಿಚ್ಛೇದನದ ವದಂತಿಗಳ ನಡುವೆ, ದಂಪತಿಯ ಹಳೆಯ ವೀಡಿಯೊಗಳು ನಿರಂತರವಾಗಿ ವೈರಲ್ ಆಗುತ್ತಲೇ ಇವೆ. ಕೆಲ ದಿನಗಳಿಂದ ಇಬ್ಬರ ನಡುವೆ ಮನಸ್ತಾಪವಿದೆ ಎಂಬ ಸುದ್ದಿ ಹರಿದಾಡುತ್ತಿದೆ. :ಕಳೆದ ಕೆಲ ಸಮಯದಿಂದ ಬಾಲಿವುಡ್‌ ಪವರ್‌ ಕಪಲ್‌ ಎಂದೇ ಪ್ರಖ್ಯಾತಿ ಪಡೆದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಜೋಡಿ ವಿಚ್ಛೇದನ ಪಡೆಯಲಿದೆ ಎಂಬ ವದಂತಿ ಹರಿದಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಪ್ರಸ್ತುತ ಬೆಳವಣಿಗೆಗಳು ನಡೆಯುತ್ತಿವೆ. ಇದನ್ನೂ ಓದಿ: ಈ ವಿಚ್ಛೇದನದ ವದಂತಿಗಳ ನಡುವೆ, ದಂಪತಿಯ ಹಳೆಯ ವೀಡಿಯೊಗಳು ನಿರಂತರವಾಗಿ ವೈರಲ್ ಆಗುತ್ತಲೇ ಇವೆ. ಕೆಲ ದಿನಗಳಿಂದ ಇಬ್ಬರ ನಡುವೆ ಮನಸ್ತಾಪವಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಭಾಗವಹಿಸಲು ಐಶ್ವರ್ಯಾ ರೈ, ಬಚ್ಚನ್ ಕುಟುಂಬ ಹೊರತಾಗಿ ಮಗಳು ಆರಾಧ್ಯ ಜತೆ ಆಗಮಿಸಿದ್ದರು. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅಭಿಷೇಕ್ ಬಚ್ಚನ್ ಅವರು "ಐಶ್ವರ್ಯಾ ಮತ್ತು ನಾನು ವಿಚ್ಛೇದನ ಪಡೆಯುತ್ತಿದ್ದೇವೆ" ಎಂದು ಹೇಳುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ಅಭಿಷೇಕ್‌, ಐಶ್ವರ್ಯಾ ರೈ ಬಚ್ಚನ್ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡುತ್ತಿದ್ದಾರೆ. ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ. ಇದೇ ಸಂದರ್ಭದಲ್ಲಿ ಈ ವೀಡಿಯೋದಲ್ಲಿ ಅಭಿಷೇಕ್ ಬಚ್ಚನ್ ತಮ್ಮ ಮಗಳು ಆರಾಧ್ಯ ಬಚ್ಚನ್ ಬಗ್ಗೆಯೂ ಪ್ರಸ್ತಾಪಿಸುವುದನ್ನು ಸಹ ಕೇಳಬಹುದು. ಅಂದಹಾಗೆ ಈ ವಿಡಿಯೊದ ಸತ್ಯಾಸತ್ಯತೆಯ ಬಗ್ಗೆ ತಿಳಿಯುವುದಾದರೆ, ಇದು ಡೀಪ್‌ ಫೇಕ್‌ ವಿಡಿಯೋ ಆಗಿದೆ. ಅಭಿಷೇಕ್ ಬಚ್ಚನ್ ಅವರ ಲಿಪ್ ಸಿಂಕ್ ಆಗದಿರುವುದು ಈ ವಿಡಿಯೋದಲ್ಲಿ ಕಾಣಿಸುತ್ತಿದ್ದು, ತಂತ್ರಜ್ಞಾನ ಅಥವಾ ಆನ್‌ ಲೈನ್ ಪರಿಕರಗಳನ್ನು ಬಳಸಿಕೊಂಡು ಮಾಡಲಾದ ವಿಡಿಯೋ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಇನ್ನು ಅಭಿಷೇಕ್ ಬಚ್ಚನ್ ಆಗಲಿ, ಐಶ್ವರ್ಯಾ ಆಗಲಿ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರಾಗಲಿ ಈ ವಿಷಯದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಹೀಗಂದ ಮಾತ್ರಕ್ಕೆ ಈ ವದಂತಿಯನ್ನು ನಿರಾಕರಿಸಿಯೂ ಇಲ್ಲ. ಹೀಗಿರುವಾಗ ಅವರ ಅಭಿಮಾನಿಗಳು ಸೇರಿದಂತೆ ಅನೇಕರಿಗೆ ಈ ಜೋಡಿ ವಿಚ್ಛೇದನ ಪಡೆಯುತ್ತದೆಯೇ ಎಂಬ ಅನುಮಾನದಲ್ಲಿದ್ದಾರೆ. ಅಷ್ಟೆ ಅಲ್ಲದೆ ಅನೇಕ ಈ ಜೋಡಿ ಎಂದಿಗೂ ಬೇರಾಗದಿರಲಿ ಎಂದು ಹಾರೈಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...