ಸಮಂತಾ ಜೊತೆಗಿನ ʼಆʼ ಒಂದು ಫೋಟೋವನ್ನು ಮಾತ್ರ ಯಾಕೆ ಡಿಲೀಟ್‌ ಮಾಡಿಲ್ಲ ನಾಗಚೈತನ್ಯ?! - : ನಿಶ್ಚಿತಾರ್ಥದ ಹಿನ್ನಲೆಯಲ್ಲಿ ತಮ್ಮ ಸಾಮಾಜಿಕ ಜಾಲತಾಣಗಳಿಂದ ಸಮಂತಾ ಫೋಟೋಗಳನ್ನು ನಾಗಚೈತನ್ಯ ಡಿಲೀಟ್ ಮಾಡಿದ್ದಾರೆ.. ಆದರೆ ಸ್ಯಾಮ್‌ ಜೊತೆಗಿನ ಒಂದೇ ಒಂದು ಪೋಟೋವನ್ನು ಚೈತೂ ಇನ್ನೂ ತಮ್ಮ ಖಾತೆಯಲ್ಲಿ ಇಟ್ಟುಕೊಂಡಿದ್ದಾರೆ.. : ಚೈತು ಅಭಿಮಾನಿಗಳಿಗೆ ಈಗಷ್ಟೇ ಹೊಸ ಗೊಂದಲ ಶುರುವಾಗಿದೆ... ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥ ರಹಸ್ಯವಾಗಿ ನಡೆದಿದ್ದು, ಕೊನೆ ಕ್ಷಣದವರೆಗೂ ಈ ವಿಚಾರ ಯಾರಿಗೂ ಗೊತ್ತಾಗದಂತೆ ಎಚ್ಚರ ವಹಿಸಿದ್ದ ಅಕ್ಕಿನೇನಿ ಕುಟುಂಬ ನಿಶ್ಚಿತಾರ್ಥದ ಜತೆಗೆ ಫೋಟೋಗಳನ್ನು ಬಿಡುಗಡೆ ಮಾಡಿದೆ. ನಾಗಾರ್ಜುನ ಒಂದು ಪೋಸ್ಟ್ ಹಾಕಿ ಆಶೀರ್ವಾದ ಮಾಡಿದ್ದಾರೆ.. ಇದರೊಂದಿಗೆ ಚೈ ಜೀವನದಲ್ಲಿ ಸಮಂತಾ ಅವರ ಅಧ್ಯಾಯ ಸಂಪೂರ್ಣ ಮುಚ್ಚಿಹೋಗಿದೆ.. ನಟ ನಾಗಚೈತನ್ಯ ಸಮಂತಾ ಜೊತೆ ಡಿವೋರ್ಸ್‌ ಮಾಡಿಕೊಂಡಿದ್ದರೂ ಆಕೆಯೊಂದಿಗಿನ ಪೋಟೋಗಳನ್ನು ತಮ್ಮ ಸೋಷಿಯಲ್‌ ಮಿಡಿಯಾದಿಂದ ಡಿಲೀಟ್‌ ಮಾಡಿರಲಿಲ್ಲ.. ಸದ್ಯ ಚೈತು ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನಟ ಸದ್ಯ ಸ್ಯಾಮ್‌ ಜೊತೆಗಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ್ದಾರಾ? ಎನ್ನುವ ಹಲವಾರು ಗೊಂದಲ ಅಭಿಮಾನಿಗಳಲ್ಲಿ ಮೂಡಿದೆ.. ಅದರಂತೆ ನಾಗ ಚೈತನ್ಯ ಇನ್‌ಸ್ಟಾಗ್ರಾಂನಿಂದ ಸಮಂತಾ ಜೊತೆಗಿನ ಕೆಲವು ಪೋಟೋಗಳು ಕಾಣೆಯಾಗಿವೆ.. ಇದನ್ನೂ ಓದಿ- ಇದರೊಂದಿಗೆ ನಾಗ ಚೈತನ್ಯ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುವ ಮುನ್ನ ಹೊಸ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ, ಸಮಂತಾ ಚೈತುಲಾ ಅಭಿನಯದ ಮಜಿಲಿ ಚಿತ್ರದ ಪ್ರಚಾರ ಪೋಸ್ಟರ್‌ಗಳನ್ನು ಮಾತ್ರ ಬಿಟ್ಟಿದ್ದಾರೆ. ಆದರೆ ಸಮಂತಾ ಜೊತೆಗಿನ ಒಂದೇ ಒಂದು ಫೋಟೋವನ್ನು ಚೈತೂ ಡಿಲೀಟ್‌ ಮಾಡಿಲ್ಲ.. ಹೌದು 2018 ರಲ್ಲಿ ಚೈತನ್ಯ ಅವರು ಪೋಸ್ಟ್ ಮಾಡಿದ ರೇಸ್ ಕಾರಿನ ಪಕ್ಕದಲ್ಲಿ ಇಬ್ಬರು ನಿಂತಿರುವ ಸ್ನ್ಯಾಪ್‌ಶಾಟ್ ಅನ್ನು "ಥ್ರೋ ಬ್ಯಾಕ್... ಮಿಸೆಸ್ ಅಂಡ್ ದಿ ಗರ್ಲ್‌ಫ್ರೆಂಡ್" ಎಂದು ಶೀರ್ಷಿಕೆ ನೀಡಿದ್ದ ಪೋಸ್ಟ್‌ನ್ನು ಮಾತ್ರ ನಟ ಇಟ್ಟುಕೊಂಡಿದ್ದಾರೆ.. ಇದನ್ನೂ ಓದಿ- ಸಮಂತಾ ಅವರ ಅಭಿಮಾನಿಗಳಿಗೆ ಅವರು ಎಲ್ಲಾ ಫೋಟೋಗಳು ಮತ್ತು ಪೋಸ್ಟ್‌ಗಳನ್ನು ಏಕೆ ತೆಗೆದು ಈ ಪೋಸ್ಟ್ ಅನ್ನು ಇರಿಸಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಚೈತನ್ಯ ಅವರ ನಿಶ್ಚಿತಾರ್ಥ ಬೆಳಕಿಗೆ ಬರುತ್ತಿದ್ದಂತೆ ಮತ್ತೊಮ್ಮೆ ಈ ಪೋಸ್ಟ್ ವೈರಲ್ ಆಗಿದೆ. ಸದ್ಯ ಆ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.. ಸಮಂತಾ ಜೊತೆಗಿನ ಎಲ್ಲಾ ನೆನಪುಗಳನ್ನು ಡಿಲೀಟ್ ಮಾಡುವಂತೆ ಚೈತುಗೆ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.. ಇನ್ನು ನಾಗ ಚೈತನ್ಯ ಅವರು ಸಮಂತಾ ಅವರನ್ನು ಅಕ್ಟೋಬರ್ 2017 ರಲ್ಲಿ ವಿವಾಹವಾದರು, ಅವರು ವೈಯಕ್ತಿಕ ಕಾರಣಗಳಿಂದ ಅಕ್ಟೋಬರ್ 2, 2021 ರಂದು ಬೇರ್ಪಡುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...