ಜೂಹಿ ಚಾವ್ಲಾ ಕಿಸ್ ಮಾಡಲು ನಿರಾಕರಿಸಿದಾಗ ನಟಿಯ ಕೈ ಮೇಲೆ ಉಗುಳಿದ್ದರಂತೆ ಈ ಸ್ಟಾರ್‌ ನಟ! ಮುಂದೇನಾಗಿತ್ತು ಅಂತಾ ಗೊತ್ತಾದ್ರೆ ಶಾಕ್‌ ಆಗ್ತೀರಾ!! : ಅಮೀರ್ ಖಾನ್ ಯಾವಾಗಲೂ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಮುಖ್ಯಾಂಶಗಳಲ್ಲಿ ಇರುತ್ತಾರೆ. ಆದರೆ ಜೂಹಿ ಚಾವ್ಲಾಗೆ ಸಂಬಂಧಿಸಿದ ಈ ಘಟನೆ ಬಹಳ ಜನಪ್ರಿಯವಾಗಿದೆ.. : ಅಮೀರ್ ಖಾನ್ ಅವರನ್ನು ಬಾಲಿವುಡ್‌ನ ನಿಜವಾದ ಸೀರಿಯಲ್ ಕಿಸ್‌ ಕಿಂಗ್ ಎಂದು ಕರೆಯಲಾಗುತ್ತದೆ. ಅವರು ತಮ್ಮ ಬಹುತೇಕ ಎಲ್ಲಾ ಚಿತ್ರಗಳಲ್ಲಿ ಸಹ-ನಟಿಯರಿಗೆ ಮುತ್ತಿಟ್ಟಿದ್ದಾರೆ. ಆದರೆ ಜೂಹಿ ಚಾವ್ಲಾ ಅವರನ್ನು ಚುಂಬಿಸಲು ನಿರಾಕರಿಸಿದಾಗ ಅಮೀರ್ ಏನು ಮಾಡಿದ್ದರು ಎನ್ನುವುದೇ ಈ ಸುದ್ದಿಯ ಸಾರಾಂಶ... ಖಯಾಮತ್ ಸೆ ಕಯಾಮತ್ ಚಿತ್ರದಿಂದ ಅಮೀರ್ ಮತ್ತು ಜೂಹಿ ಮನ್ನಣೆ ಪಡೆದರು. ಚಿತ್ರದ ಒಂದು ದೃಶ್ಯದಲ್ಲಿ ಅಮೀರ್ ಜೂಹಿ ಚಾವ್ಲಾ ಅವರನ್ನು ಚುಂಬಿಸಬೇಕಾಯಿತು. ಆದರೆ ಜೂಹಿ ಹಾಗೆ ಮಾಡಲು ಸ್ಪಷ್ಟವಾಗಿ ನಿರಾಕರಿಸಿದ್ದರಾಂತೆ.. ಇದನ್ನೂ ಓದಿ- ಚಿತ್ರದ ಅಕೇಲೆ ಹೈ ತೋ ಕ್ಯಾ ಗಮ್ ಹೈ ಹಾಡಿನ ಸಮಯದಲ್ಲಿ ಈ ಕಿಸ್‌ ದೃಶ್ಯವನ್ನು ಚಿತ್ರೀಕರಿಸಬೇಕಿತ್ತು. ಜೂಹಿ ನಿರಾಕರಿಸಿದಾಗ ನಿರ್ದೇಶಕ ಮನ್ಸೂರ್ ಖಾನ್ ಕೋಪಗೊಂಡು.. ಎಲ್ಲಾ ಸಿಬ್ಬಂದಿಯನ್ನು ಕೆಲಸ ಮಾಡುವುದು ಬಿಟ್ಟು ಕುಳಿತುಕೊಳ್ಳಲು ಹೇಳಿದ್ದರಂತೆ. ನಿರ್ದೇಶಕರ ಈ ಕೋಪ ನೋಡಿ ಜೂಹಿ ಬಳಿಕ ಕಿಸ್‌ ಮಾಡಲು ಒಪ್ಪಿಕೊಂಡಿದ್ದರಂತೆ.. ಇದನ್ನೂ ಓದಿ- ಜೂಹಿ ಅಮೀರ್ ಜೊತೆ ಇಷ್ಕ್ ಎಂಬ ಇನ್ನೊಂದು ಚಿತ್ರದಲ್ಲಿ ಕೆಲಸ ಮಾಡಿದ್ದರು. ಆದರೆ ಚಿತ್ರದ ಸೆಟ್‌ಗಳಲ್ಲಿ, ಅಮೀರ್ ಜೂಹಿಯೊಂದಿಗೆ ಅಂತಹ ಕೆಲಸವನ್ನು ಮಾಡಿದ್ದು, ಅದು ಜೂಹಿಗೆ ಕೋಪ ತರಿಸಿದ್ದಲ್ಲದೇ.. ಇನ್ನು ಮುಂದೆ ಅಮಿರ್ ಜೊತೆ ಕೆಲಸ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದರು ವಾಸ್ತವವಾಗಿ, ಅಮೀರ್ ಜೂಹಿಗೆ ಜ್ಯೋತಿಷ್ಯ ಹೇಳುತ್ತೇನೆ ಎಂದು ಅವರ ಕೈಗಳನ್ನು ಚಾಚಲು ಹೇಳಿ ಕೈ ತೋರಿಸಿದ ತಕ್ಷಣ ಆತ ಆಕೆಯ ಕೈ ಮೇಲೆ ಉಗುಳಿ ಓಡಿ ಹೋಗಿದ್ದರಂತೆ.. ಅಮೀರ್‌ನ ಈ ಒರಟು ಹಾಸ್ಯವನ್ನು ಜೂಹಿಗೆ ಇಷ್ಟವಾಗದೇ ನಟಿ ಅಮೀರ್ ಜೊತೆ ಶೂಟಿಂಗ್ ರಿಜೆಕ್ಟ್‌ ಮಾಡಿದ್ದರಂರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...