ಪೋರ್ನ್‌ ಸ್ಟಾರ್ ಖ್ಯಾತಿಗೂ ಮುನ್ನ ʼಈʼ ಕೆಲಸ ಮಾಡ್ತಿದ್ರು ಹಾಟ್‌ ಬ್ಯೂಟಿ ಸನ್ನಿ ಲಿಯೋನ್‌! : ಇದೀಗ ಬಾಲಿವುಡ್‌ʼನಲ್ಲಿ ಬಹುಬೇಡಿಕೆಯ ನಟಿಯಾಗಿರುವ ಸನ್ನಿ ಲಿಯೋನ್, ಒಂದೊಮ್ಮೆ ಪೋರ್ನ್‌ ಸ್ಟಾರ್‌ ಆಗಿದ್ದವರು. ಆದರೆ ಅದಕ್ಕೂ ಮುನ್ನ ಆಕೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. :43 ವರ್ಷ ವಯಸ್ಸಿನಲ್ಲೂ ಸನ್ನಿ ಲಿಯೋನ್ ಸಾಕಷ್ಟು ಫಿಟ್ ಮತ್ತು ಆರೋಗ್ಯವಂತರಾಗಿ ಕಾಣುತ್ತಾರೆ. ಇನ್ನು ಪ್ರಸ್ತುತ ದಿನಗಳಲ್ಲಿ ಸನ್ನಿ ಲಿಯೋನ್ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಬಿಗ್ ಬಾಸ್ 5ಕ್ಕೆ ಬರುವ ಮೊದಲು ಸನ್ನಿ ಲಿಯೋನ್ ಹೆಸರು ಕೆಲವೇ ಜನರಿಗೆ ಗೊತ್ತಿತ್ತು. ಶೋನಲ್ಲಿ ಕಾಣಿಸಿಕೊಂಡ ತಕ್ಷಣ ಭಾರತದಲ್ಲಿ ಜನಪ್ರಿಯರಾದರು. ಇದನ್ನೂ ಓದಿ: ಇದೀಗ ಬಾಲಿವುಡ್‌ʼನಲ್ಲಿ ಬಹುಬೇಡಿಕೆಯ ನಟಿಯಾಗಿರುವ ಸನ್ನಿ ಲಿಯೋನ್, ಒಂದೊಮ್ಮೆ ಪೋರ್ನ್‌ ಸ್ಟಾರ್‌ ಆಗಿದ್ದವರು. ಆದರೆ ಅದಕ್ಕೂ ಮುನ್ನ ಆಕೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಸನ್ನಿ ಲಿಯೋನ್ ತನ್ನ ವೃತ್ತಿಜೀವನ ಶುರು ಮಾಡಿದ್ದು ಬೇಕರಿ ಅಂಗಡಿಯಿಂದ. ಇದು ಅವರ ಮೊದಲ ಕೆಲಸವಾಗಿತ್ತು. ಬಾಲಿವುಡ್ ಪ್ರವೇಶಿಸುವ ಮೊದಲು ವಯಸ್ಕರ ಚಿತ್ರಗಳಲ್ಲಿ ಕೆಲಸ ಮಾಡಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಇನ್ನು ಕೆಲ ವರದಿಗಳ ಪ್ರಕಾರ, ಬಾಲಿವುಡ್ ಪ್ರವೇಶಿಸುವ ಮೊದಲು ಸನ್ನಿ ಲಿಯೋನ್‌ʼಗೆ ತನ್ನನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ ಎಂಬ ಭಾವನೆ ಇತ್ತಂತೆ. ಆದರೆ ಇಂದು ಆಕೆಯ ಸೌಂದರ್ಯಕ್ಕೆ ಅದೆಷ್ಟೋ ಮಂದಿ ಹುಚ್ಚರಾಗಿರುವುದು ಸುಳ್ಳಲ್ಲ. ಸನ್ನಿ ಲಿಯೋನ್‌ 1981 ರಲ್ಲಿ ಕೆನಡಾದ ಸರ್ನಿಯಾ ಒಂಟಾರಿಯೊದಲ್ಲಿ ಪಂಜಾಬಿ ಸಿಖ್ ಕುಟುಂಬದಲ್ಲಿ ಜನಿಸಿದರು. ತನ್ನ ಕುಟುಂಬದೊಂದಿಗೆ ಗೆ ಸ್ಥಳಾಂತರಗೊಂಡಾಗ ಕೇವಲ 11 ವರ್ಷ ವಯಸ್ಸಿನವಳು. ಸನ್ನಿ ತಂದೆ ಇಂಜಿನಿಯರ್ ಮತ್ತು ತಾಯಿ ಗೃಹಿಣಿ. ಅವರಿಗೆ ಒಬ್ಬ ಸಹೋದರನಿದ್ದಾನೆ. ಅವರ ಹೆಸರು ಸಂದೀಪ್ ಸಿಂಗ್ ವೋಹ್ರಾ. ಅವರು ಅಮೇರಿಕಾದಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಾರೆ. ಮಾಧ್ಯಮಗಳ ಪ್ರಕಾರ ಸನ್ನಿ ಜಿಸ್ಮ್-2 ಚಿತ್ರದ ಮೂಲಕ ಬಾಲಿವುಡ್‌ʼಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿನ ಅವರ ನಟನೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಅದಾದ ನಂತರ 2013 ರಲ್ಲಿ ಜಾಕ್‌ ಪಾಟ್ ಮತ್ತು ಶೂಟೌಟ್ ಅಟ್ ವಾಡ್ಲಾದಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದ್ದರು. 2014 ರಲ್ಲಿ ಏಕ್ತಾ ಕಪೂರ್ ಅವರ ರಾಗಿಣಿ ಎಂಎಂಎಸ್ 2 ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಅವಕಾಶ ಸಿಕ್ಕಿತು. ಈ ಚಿತ್ರ ರಾತ್ರೋರಾತ್ರಿ ಸನ್ನಿಗೆ ಉದಯೋನ್ಮುಖ ಬಾಲಿವುಡ್ ನಟಿಯ ಮನ್ನಣೆಯನ್ನು ನೀಡಿತು. ಇದನ್ನೂ ಓದಿ: ಇನ್ನು ಸನ್ನಿ ಡೇನಿಯಲ್ ವೆಬರ್ ಅವರನ್ನು ಮದುವೆಯಾಗಿದ್ದಾರೆ. 2018 ರಲ್ಲಿ ಹೆಣ್ಣು ಮಗುವನ್ನು ದತ್ತು ಪಡೆದ ಅವರು, ಅದಾದ ಬಳಿಕ ಬಾಡಿಗೆ ತಾಯ್ತನದ ಮೂಲಕ ಎರಡು ಅವಳಿಗಳ ತಾಯಿಯಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...