ಪತ್ನಿಗೆ ಡ್ರಗ್ಸ್ ನೀಡಿ 73 ಜನರಿಂದ ಅತ್ಯಾಚಾರ ಮಾಡಿಸಿದ ಗಂಡ..! ದುಡ್ಡು ಕೊಟ್ಟು ಈ ಕೆಲಸ ಮಾಡಿಸುತ್ತಿದ್ದ ಪಾಪಿ ಪತಿ : ಪತ್ನಿಯ ಮೇಲೆ ಯಾರಾದರೂ ಕಣ್ಣಿಟ್ಟರೆ ಆಕೆಯನ್ನು ಕೊಂದು ಹಾಕುವವರನ್ನು ನೋಡಿದ್ದೇವೆ, ಆದರೆ ಸ್ವಂತ ಮಡದಿಗೆ ಮಾದಕ ದ್ರವ್ಯ ನೀಡಿ ಬೇರೆಯವರಿಂದ ಯಾರಾದರು ಅತ್ಯಾಚಾರವೆಸಗುತ್ತಾರೆಯೇ.? ಆದರೆ ಇಲ್ಲೊಬ್ಬ ಪಾಪಿ ಪತಿ ಈ ಕೃತ್ಯವನ್ನು ಮಾಡಿದ್ದಾನೆ.. ಘಟನೆ ನಡೆದದ್ದು ಎಲ್ಲಿ..? ಹೆಚ್ಚಿನ ವಿವರ ಇಲ್ಲಿದೆ.. :ಶಾಪಿಂಗ್ ಮಾಡುತ್ತಿದ್ದ ಹುಡುಗಿಯರನ್ನು ಅಶ್ಲೀಲ ಕೋನಗಳಲ್ಲಿ ಫೋಟೋ ತೆಗೆಯುತ್ತಿದ್ದ ಡೊಮಿನಿಕ್ ಪೆಲ್ಲಿಕಾಟ್ ಎಂಬ 71 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಫೋನ್ ಮತ್ತು ಗ್ಯಾಜೆಟ್ ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗಿತ್ತು.. ಈ ವೇಳೆ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಫೊಟೋ ಪೊಲೀಸರಿಗೆ ಅನುಮಾನ ತರಿಸಿತ್ತು.. ಬಂಧಿಸಿ ವಿಚಾರಿಸಿದಾಗ ಶಾಕಿಂಗ್‌ ವಿಚಾರ ಬಹಿರಂಗಗೊಂಡಿದೆ.. ಸತ್ಯವೆಂದರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆ ಅವನ ಹೆಂಡತಿ. ಅಲ್ಲದೆ, ಆಕೆಯ ಮೇಲೆ ಅತ್ಯಚಾರಗೈದವರನ್ನು ಪಲೀಸರು ಬಂಧಿಸಿದ್ದಾರೆ.. ಈ ಘಟನೆ ತುಂಬಾ ವಿಚಿತ್ರವಾಗಿ ಕಂಡು ಬಂದ ಹಿನ್ನೆಲೆ ಪೊಲೀಸರು ಆಳವಾಗಿ ತನಿಖೆ ನಡೆಸಿದಾಗ ಅಚ್ಚರಿ ಸಂಗತಿಗಳು ಬಹಿರಂಗಗೊಂಡಿವೆ.. ಇದನ್ನೂ ಓದಿ: ಫ್ರಾನ್ಸ್‌ನ ಡೊಮಿನಿಕ್ ಪೆಲ್ಲಿಕಾಟ್ ಫ್ರಾನ್ಸ್‌ನ ವಿದ್ಯುತ್ ಇಲಾಖೆಯಿಂದ ನಿವೃತ್ತರಾದರು. ಐವತ್ತು ವರ್ಷಗಳಿಂದ ತನ್ನ ಹೆಂಡತಿಯೊಂದಿಗೆ ಮನೆಯಲ್ಲಿದ್ದಾರೆ. ಅವಳಿಗೆ 70 ವರ್ಷ ವಯಸ್ಸು. ಕಳೆದ ಹದಿನಾಲ್ಕು ವರ್ಷಗಳಿಂದ ತನ್ನ ಪತ್ನಿಗೆ ಡ್ರಗ್ಸ್ ನೀಡಿ ಪ್ರಜ್ಞೆ ತಪ್ಪಿಸಿದ್ದ.. ಅಷ್ಟೇ ಅಲ್ಲ, ಅಪರಿಚಿತರನ್ನು ಕರೆಸಿ ಅತ್ಯಾಚಾರ ಮಾಡಿಸಿದ್ದಾನೆ. ಇದುವರೆಗೆ 72 ಜನರು ಆ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಅವರಲ್ಲಿ ಕೆಲವರು ಎರಡು ಬಾರಿ ಬಂದವರೂ ಇದ್ದಾರೆ. ಅತ್ಯಾಚಾರ ಎಸಗಿದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಇದೆಲ್ಲವೂ ಪರಸ್ಪರ ಒಪ್ಪಿಗೆಯಿಂದ ನಡೆಯುತ್ತಿದೆ ಅಂತ ಅವರು ಭಾವಿಸಿದ್ದೇವು.. ಇದು ಫ್ಯಾಂಟಸಿ ಅಂತ ತಿಳಿದಿದ್ದೇವು ಆದರೆ.. ಅತ್ಯಾಚಾರ ಮಾಡಿಲ್ಲ ಎಂದು ಆರೋಪಿಗಳು ಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಪತ್ನಿಯ ಮೇಲೆ ಮುದುಕ ಗಂಡನ ಅರಾಜಕತೆ ಇದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...