ಇದು ಜಗತ್ತಿನ ಅತಿ ಶ್ರೀಮಂತ ನಾಯಿ! ಬರೋಬ್ಬರಿ 30 ಶತಕೋಟಿ ಆಸ್ತಿ ಮಾಲೀಕ... ಈ ಶ್ವಾನದ ಹೆಸರಲ್ಲಿದೆ ಐಷಾರಾಮಿ ಬಂಗಲೆ, ಪ್ರೈವೇಟ್‌ ಬೋಟ್‌... : ಈ ನಾಯಿಯ ಹೆಸರು ಗುಂಥರ್ , ಇದು ಜರ್ಮನ್ ಶೆಫರ್ಡ್ ನಾಯಿಯಾಗಿದ್ದು, ಸುಮಾರು 30 ಬಿಲಿಯನ್ ಮೌಲ್ಯದ ಆಸ್ತಿ ಹೊಂದಿದೆ. ಈ ಅಸಾಮಾನ್ಯ ಶ್ವಾನಕ್ಕೆ ಕಾರಿನಲ್ಲೇ ಓಡಾಟ, ಸ್ವಂತವಾಗಿರುವ ಅನೇಕ ಬಂಗಲೆ ಕೂಡ ಇದೆ. ಅಷ್ಟೇ ಅಲ್ಲ ಈ ಬಂಗಲೆಗಳ ಸಮೀಪ ಫುಟ್ಬಾಲ್ ಕ್ಲಬ್ ಕೂಡ ಇದೆ. :ನಾವೆಲ್ಲರೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯ ಬಗ್ಗೆ ಕೇಳಿರುತ್ತೇವೆ, ಆದರೆ ವಿಶ್ವದ ಶ್ರೀಮಂತ ನಾಯಿಯ ಬಗ್ಗೆ ಎಂದಾದರೂ ಕೇಳಿದ್ದೀರಾ? ಇಲ್ಲೊಂದು ನಾಯಿ ಇದೆ. ಅದರ ಜೀವನಶೈಲಿ ಸಾಮಾನ್ಯ ಮಾನವನ ಜೀವನಕ್ಕೆ ಹೋಲಿಸಿದರೆ, ಎಷ್ಟೋ ಪಟ್ಟು ಹೆಚ್ಚಿನ ಸೌಕರ್ಯಯುತವಾಗಿದೆಯಂತೆ. ಆ ನಾಯಿ ಯಾವುದು ಎಂಬುದನ್ನು ಮುಂದೆ ನೋಡೋಣ. ಇದನ್ನೂ ಓದಿ: ಈ ನಾಯಿಯ ಹೆಸರು ಗುಂಥರ್ , ಇದು ಜರ್ಮನ್ ಶೆಫರ್ಡ್ ನಾಯಿಯಾಗಿದ್ದು, ಸುಮಾರು 30 ಬಿಲಿಯನ್ ಮೌಲ್ಯದ ಆಸ್ತಿ ಹೊಂದಿದೆ. ಈ ಅಸಾಮಾನ್ಯ ಶ್ವಾನಕ್ಕೆ ಕಾರಿನಲ್ಲೇ ಓಡಾಟ, ಸ್ವಂತವಾಗಿರುವ ಅನೇಕ ಬಂಗಲೆ ಕೂಡ ಇದೆ. ಅಷ್ಟೇ ಅಲ್ಲ ಈ ಬಂಗಲೆಗಳ ಸಮೀಪ ಫುಟ್ಬಾಲ್ ಕ್ಲಬ್ ಕೂಡ ಇದೆ. ಗುಂಥರ್ ಪ್ರಸಿದ್ಧ ಪಾಪ್ ಗಾಯಕ ಮಡೋನಾ ಅವರ ಹಳೆಯ ಮನೆಯಲ್ಲಿ ವಾಸ ಮಾಡುತ್ತಿದೆ. ಇದಕ್ಕೆಂದೇ ವಿಹಾರ ನೌಕೆ ಕೂಡ ಇದೆ. ಬಹಾಮಾಸ್‌ ವಿಲ್ಲಾಗಳಿಂದಲೂ ಸೇವಕರು ಇಲ್ಲಿಗೆ ಬರುತ್ತಾರೆ. ಈ ನಾಯಿ ಕೆರಿಬಿಯನ್ ದ್ವೀಪಗಳಲ್ಲಿರುವ 6 ಬಿಲಿಯನ್ 81 ಕೋಟಿ ಮೌಲ್ಯದ ತನ್ನ ಮನೆಯಲ್ಲಿ ವಾಸಿಸುತ್ತಿದೆ. ದಿ ಸನ್‌ʼನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ನಾಯಿಯ ಹಣವನ್ನು ಇಟಲಿಯ 66 ವರ್ಷದ ಉದ್ಯಮಿ ಮೌರಿಜಿಯೊ ಮಿಯಾನ್ ನಿಯಂತ್ರಿಸುತ್ತಾರೆ. ಇದನ್ನೂ ಓದಿ: ಮಿಯಾನ್ ಗುಂಥರ್ ಕಾರ್ಪೊರೇಶನ್‌ʼನ ಸಿಇಒ ಆಗಿದ್ದು, ಈ ನಾಯಿಯ ಮೂಲ ಮಾಲೀಕರು ಬಿಟ್ಟುಹೋದ ಬಿಲಿಯನ್ʼಗಟ್ಟಲೆ ಮೌಲ್ಯದ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದಾರೆ. ಜರ್ಮನ್ ಕೌಂಟೆಸ್ ಕಾರ್ಲೋಟಾ ಲೆಬೆನ್‌ ಸ್ಟೈನ್ ಎಂಬವರು ತಮಗೆ ಉತ್ತರಾಧಿಕಾರಿಗಳಾಗಲಿ, ಯಾವುದೇ ನಿಕಟ ಸಂಬಂಧಿಕರಾಗಲಿ ಇಲ್ಲದ ಕಾರಣ ಈ ನಾಯಿಯ ಹೆಸರಿನಲ್ಲಿ ಎಲ್ಲಾ ಸಂಪತ್ತನ್ನು ಬರೆದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...