ದಕ್ಷಿಣ ಜಪಾನ್ ನಲ್ಲಿ ಪ್ರಬಲ ಭೂಕಂಪ!ಸುನಾಮಿ ಎಚ್ಚರಿಕೆ :ಜಪಾನ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆಯನ್ನು ಕೂಡಾ ನೀಡಲಾಗಿದೆ. :ಜಪಾನ್‌ನ ದಕ್ಷಿಣ ಕರಾವಳಿಯಲ್ಲಿ ಗುರುವಾರ ಪ್ರಬಲ ಭೂಕಂಪ ಸಂಭವಿಸಿದೆ.ಇದಾದ ಬಳಿಕ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪದ ತೀವ್ರತೆ ಪ್ರಾಥಮಿಕವಾಗಿ 6.9ಯಷ್ಟಿತ್ತು ಎನ್ನಲಾಗಿದೆ.ಭೂಕಂಪದ ಕೇಂದ್ರಬಿಂದುವು ಜಪಾನ್‌ನ ದಕ್ಷಿಣ ಮುಖ್ಯ ದ್ವೀಪವಾದ ಕ್ಯುಶು ಪೂರ್ವ ಕರಾವಳಿಯಿಂದ ಸುಮಾರು 30 ಕಿಲೋಮೀಟರ್ (18.6 ಮೈಲುಗಳು) ಆಳದಲ್ಲಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ಹೇಳಿದೆ. ಭೂಕಂಪದ ನಂತರನೀಡಲಾಗಿದೆ.ಕ್ಯುಶುವಿನ ದಕ್ಷಿಣ ಕರಾವಳಿ ಮತ್ತು ಶಿಕೋಕು ಹತ್ತಿರದ ದ್ವೀಪದ ಉದ್ದಕ್ಕೂ 1 ಮೀಟರ್ (3.3 ಅಡಿ) ವರೆಗಿನ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಇದನ್ನೂ ಓದಿ : ಇನ್ನು ಭೂಕಂಪದಿಂದ ಯಾವುದಾದರೂ ಹಾನಿ ಸಂಭವಿಸಿದೆಯೇ ಎನ್ನುವುದನ್ನು ಕ್ಯುಶು ಮತ್ತು ಶಿಕೋಕುದಲ್ಲಿನ ಪರಮಾಣು ಸ್ಥಾವರಗಳ ನಿರ್ವಾಹಕರು ತನಿಖೆ ನಡೆಸುತ್ತಿದ್ದಾರೆ.ಜಪಾನ್‌ನ ಸ್ಟೇಟ್ ಟೆಲಿವಿಷನ್,ಭೂಕಂಪದ ಕೇಂದ್ರದ ಸಮೀಪವಿರುವಕಿಟಕಿಗಳು ಮುರಿದಿರುವ ಬಗ್ಗೆ ವರದಿ ಮಾಡಿದೆ. ಜಪಾನ್ ಪೆಸಿಫಿಕ್ 'ರಿಂಗ್ ಆಫ್ ಫೈರ್'ನಲ್ಲಿದೆ.ಇದು ವಿಶ್ವದ ಅತ್ಯಂತ ಭೂಕಂಪನ ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ. ಇದನ್ನೂ ಓದಿ : ಜನವರಿ 1 ರಂದು ಜಪಾನ್‌ನ ಉತ್ತರ-ಮಧ್ಯ ಪ್ರದೇಶದಲ್ಲಿ ನೊಟೊದಲ್ಲಿ ಸಂಭವಿಸಿದ ಭೂಕಂಪದಲ್ಲಿ 240 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...