ಬಾಂಗ್ಲಾದೇಶದ ಸಂಸತ್ತು ವಿಸರ್ಜನೆ, ಗೃಹ ಬಂಧನದಿಂದ ಮಾಜಿ ಪ್ರಧಾನಿ ಜಿಯಾ ಮುಕ್ತಿ ವಿದ್ಯಾರ್ಥಿಗಳ ನೇತೃತ್ವದ ದಂಗೆಯ ಮೇಲೆ ಹಿಂಸಾತ್ಮಕ ದಬ್ಬಾಳಿಕೆಯ ನಂತರ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಪಲಾಯನ ಮಾಡಿದ ಒಂದು ದಿನದ ನಂತರ, ಬಾಂಗ್ಲಾದೇಶದ ಅಧ್ಯಕ್ಷರು ಮಂಗಳವಾರ ಸಂಸತ್ತನ್ನು ವಿಸರ್ಜಿಸಿದ್ದಾರೆ. ಢಾಕಾ:ಬಾಂಗ್ಲಾದೇಶದಲ್ಲಿನ ವಿದ್ಯಾರ್ಥಿಗಳ ನೇತೃತ್ವದ ದಂಗೆಯ ನಂತರ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಪಲಾಯನ ಮಾಡಿದ ಒಂದು ದಿನದ ನಂತರ, ಬಾಂಗ್ಲಾದೇಶದ ಅಧ್ಯಕ್ಷರು ಮಂಗಳವಾರ ಸಂಸತ್ತನ್ನು ವಿಸರ್ಜಿಸಿದ್ದಾರೆ. ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರ ಕಚೇರಿಯು ವಿರೋಧ ಪಕ್ಷದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಕ್ಷದ ನಾಯಕಿ, ಹಸೀನಾ ಅವರೊಂದಿಗೆ ದಶಕಗಳ ಕಾಲ ದ್ವೇಷ ಸಾಧಿಸಿದ್ದ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ಅವರನ್ನು ಗೃಹಬಂಧನದಿಂದ ಮುಕ್ತಗೊಳಿಸಲಾಗಿದೆ ಎಂದು ಘೋಷಿಸಿತು.ಸಂಸತ್ತನ್ನು ವಿಸರ್ಜಿಸದಿದ್ದರೆ ಇನ್ನಷ್ಟು ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿ ಪ್ರತಿಭಟನಾಕಾರರು ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ಬಾಂಗ್ಲಾದೇಶದ 1971 ರ ಸ್ವಾತಂತ್ರ್ಯ ಯುದ್ಧದ ಅನುಭವಿಗಳ ಕುಟುಂಬಗಳಿಗೆ ಸಾರ್ವಜನಿಕ ವಲಯದ ಉದ್ಯೋಗಗಳಲ್ಲಿ ಮೀಸಲಾತಿ ನೀಡುವ ವಿಚಾರವಾಗಿ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದೇಶದಾದ್ಯಂತ ವಿದ್ಯಾರ್ಥಿಗಳು ಸರ್ಕಾರದ ಈ ನೀತಿಯನ್ನು ತೀವ್ರವಾಗಿ ವಿರೋಧಿಸಿದ್ದರು.ಜುಲೈನಿಂದ ದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು 300 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.ಸೋಮವಾರ ಪ್ರಧಾನಿಯವರ ನಿವಾಸಕ್ಕೆ ಪ್ರತಿಭಟನಾಕಾರರು ನುಗ್ಗಿ ಲೂಟಿ ಮಾಡಿದ ನಂತರ, ರಾಜಧಾನಿ ಢಾಕಾದ ಬೀದಿಗಳು ಬಿಕೋ ಎನ್ನುತ್ತಿದ್ದವು. ಇದನ್ನೂ ಓದಿ: ರಕ್ಷಣಾ ಪಡೆಗಳ ಮುಖ್ಯಸ್ಥರು, ರಾಜಕೀಯ ಪಕ್ಷಗಳ ಮುಖಂಡರು, ವಿದ್ಯಾರ್ಥಿ ಮುಖಂಡರು ಮತ್ತು ಕೆಲವು ನಾಗರಿಕ ಸಮಾಜದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಸಂಸತ್ತನ್ನು ವಿಸರ್ಜಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷೀಯ ಹೇಳಿಕೆ ತಿಳಿಸಿದೆ.1975 ರಲ್ಲಿ ಹತ್ಯೆಗೀಡಾದ ತನ್ನ ತಂದೆ, ರಾಜ್ಯ ಸಂಸ್ಥಾಪಕ ಮುಜಿಬುರ್ ರೆಹಮಾನ್‌ನಿಂದ ಆನುವಂಶಿಕವಾಗಿ ಪಡೆದ ರಾಜಕೀಯ ಚಳವಳಿಯ ಚುಕ್ಕಾಣಿ ಹಿಡಿದು ಕಳೆದ 30 ವರ್ಷಗಳಲ್ಲಿ 20 ವರ್ಷಗಳ ಕಾಲ ಆಳಿದ 170 ಮಿಲಿಯನ್ ಜನರಿರುವ ದೇಶದಲ್ಲಿ ಹಸೀನಾ ಅವರ 15 ವರ್ಷಗಳ ಎರಡನೇ ಅವಧಿಯ ಅಧಿಕಾರವನ್ನು ಕೊನೆಗೊಳಿಸಿತು. ನೊಬೆಲ್ ಶಾಂತಿ ಪುರಸ್ಕೃತ ಮುಹಮ್ಮದ್ ಯೂನಸ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರನ್ನಾಗಿ ಮಾಡಬೇಕೆಂದು ವಿದ್ಯಾರ್ಥಿ ಮುಖಂಡರು ಹೇಳಿದ್ದರು ಇದಕ್ಕೆ ಯೂನಸ್ ಅವರ ವಕ್ತಾರರು ಅವರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...