ಟೆಕ್ ಆಫ್ ಆಗುತ್ತಿದ್ದಂತೆಯೇ ವಿಮಾನ ಪತನ , ೧೮ ಮಂದಿ ದುರ್ಮರಣ : ಸೌರ್ಯ ಏರ್‌ಲೈನ್ಸ್‌ನ ವಿಮಾನ ಟೇಕ್ ಆಫ್ ವೇಳೆ ಪತನಗೊಂಡಿದೆ. ದುರ್ಘಟನೆಯಲ್ಲಿ ೧೮ ಮಂದಿ ಮೃತಪಟ್ಟಿದ್ದಾರೆ. :ಸೌರ್ಯ ಏರ್‌ಲೈನ್ಸ್‌ನ ವಿಮಾನವು ಬುಧವಾರ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್ ವೇಳೆ ಪತನಗೊಂಡಿದೆ.ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 19 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಕಠ್ಮಂಡು ಪೋಸ್ಟ್ ವರದಿಯ ಪ್ರಕಾರ ಘಟನೆಯಲ್ಲಿ 18 ಮಂದಿ ಮೃತಪಟ್ಟಿದ್ದಾರೆ. ೧೮ ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಪೋಖರಾಗೆ ತೆರಳುತ್ತಿದ್ದಆಗುವಾಗ ಅವಘಡ ಸಂಭವಿಸಿದೆ ಎಂದು ಟಿಐಎ ವಕ್ತಾರರು ತಿಳಿಸಿದ್ದಾರೆ.ಕ್ಯಾಪ್ಟನ್ ಎಂಆರ್ ಶಾಕ್ಯಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದನ್ನೂ ಓದಿ : ಸಾಮಾಜಿಕ ಜಾಲತಾಣಗಳಲ್ಲಿ ಈ ಅಪಘಾತದ ಚಿತ್ರಗಳು ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ ವಿಮಾನ ನಿಲ್ದಾಣದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿರುವುದನ್ನು ಕಾಣಬಹುದು.ಅಪಘಾತ ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು? :ದಕ್ಷಿಣ ತುದಿಯಿಂದ ಟೇಕ್ ಆಫ್ ಆಗುತ್ತಿತ್ತು. ಟೇಕ್ ಆಫ್ ಆಗುತ್ತಿದ್ದಂತೆಯೇ ಕೆಳಗಿಳಿಯಲು ಆರಂಭಿಸಿತು. ಹೀಗಾಗುತ್ತಿದ್ದಂತೆಯೇ ವಿಮಾನದ ರೆಕ್ಕೆಯ ತುದಿ ನೆಲಕ್ಕೆ ಅಪ್ಪಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.ತಕ್ಷಣವೇ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿದೆ. ಇದರ ನಂತರ ಅದು ಬುದ್ಧ ಏರ್ ಹ್ಯಾಂಗರ್ ಮತ್ತು ರನ್‌ವೇಯ ಪೂರ್ವ ಭಾಗದಲ್ಲಿರುವ ಕಂದಕಕ್ಕೆ ವಿಮಾನ ಬಿದ್ದಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...