ಪರಸ್ಪರ ಗೌರವವಿಲ್ಲ; ಕುವೈತ್ ನಲ್ಲಿ ಮದುವೆಯಾದ ಕೇವಲ 3 ನಿಮಿಷದಲ್ಲಿ ವಿಚ್ಛೇದನ ಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು ಇನ್ನೊಂದು ಪ್ರಕರಣ ಮದುವೆಯಾದ ಕೇವಲ ಮೂರು ನಿಮಿಷಗಳಲ್ಲಿ ದಂಪತಿ ವಿಚ್ಛೇದನ ಪಡೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು ಇನ್ನೊಂದು ಪ್ರಕರಣ ಮದುವೆಯಾದ ಕೇವಲ ಮೂರು ನಿಮಿಷಗಳಲ್ಲಿ ದಂಪತಿ ವಿಚ್ಛೇದನ ಪಡೆದಿದ್ದಾರೆ. ಇದು ನಿನ್ನೆ ಮೊನ್ನೆಯ ಘಟನೆ ಅಲ್ಲ ಇದು ಸುಮಾರು ನಾಲ್ಕು ವರ್ಷಗಳ ಹಿಂದಿನ ಘಟನೆ, 2019 ರಲ್ಲಿ ಈ ಘಟನೆ ನಡೆದಿದ್ದು ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ವೈರಲಾಗುತ್ತಿದೆ ಮತ್ತು ಸದ್ಯ ವಿಚ್ಛೇದನದ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿರುವ ಹಿನ್ನೆಲೆ ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದೆ. ಇದನ್ನು ಓದಿ : ಮದುವೆಯ ವಿಧಿ ವಿಧಾನಗಳು ಪೂರ್ಣಗೊಂಡ ನಂತರ ದಂಪತಿ ಮೂರು ನಿಮಿಷದಲ್ಲಿ ವಿಚ್ಛೇದನವನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ. ಹಿಂದೆ ವರದಿಯಾದ ಪ್ರಕಾರ ಕುವೈಟ್ ನಲ್ಲಿ ಪತಿ ಪತ್ನಿ ಮದುವೆಯಾಗಿ ವಿವಾಹ ಸಮಾರಂಭ ಬಳಿಕ ವಧು-ವರರು ಕೆಳಗಿಳಿಯುವಾಗ ವಧು ಎಡವಿ ಬಿದ್ದಿದ್ದಾರೆ ಈ ವೇಳೆ ವರ ವಧುವಿಗೆ ಬಿದ್ದದ್ದಕ್ಕೆ ಮಂಡಿ ಎಂದು ಕರೆದು ಇದರಿಂದ ಕೋಪಗೊಂಡು ವಿಚ್ಛೇದನ ನೀಡುವಂತೆ ಕೇಳಿಕೊಂಡಿದ್ದಾಳೆ.. ಇದನ್ನು ಓದಿ : ವಿಚ್ಛೇದನ ಕೇಳಿಕೊಂಡ ಹಿನ್ನೆಲೆ ನ್ಯಾಯಾಧೀಶರು ವಿಚ್ಛೇದನ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ವಧುವಿನ ನಿರ್ಧಾರ ಸರಿಯಾಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ ಮತ್ತು ಗೌರವವಿಲ್ಲದ ಮದುವೆಯು ಪ್ರಾರಂಭದಿಂದಲೇ ಹಾಳಾಗಿ ಕೊಂಡು ಬರುತ್ತದೆ ಈ ಕಾರಣ ವಿಚ್ಛೇದನ ಪಡೆದುಕೊಳ್ಳುವುದೇ ಉತ್ತಮ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...