ಎಲೋನ್ ಮಸ್ಕ್ ಅನಾವರಣಗೊಳಿಸಿದ ಫ್ಯಾಶನ್ ಶೋ : ಮೋದಿಜೀ ರಾಂಪ್ ವಾಕ್ ಹೇಗಿತ್ತು ನೋಡಿ..! ತಂತ್ರಜ್ಞಾನ ಬಂದಂತೆ ಹೊಸ ಹೊಸ ವಿಭಿನ್ನ ಸೃಜನಾತ್ಮಕ ಬೆಳವಣಿಗೆಗಳು ಬರುತ್ತಲೇ ಇದೆ. ಇದೀಗ ಟೆಸ್ಲಾ ಮತ್ತು ಎಕ್ಸ್ ಮಾಲಿಕ ಎಲಾನ್ ಮಸ್ಕ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಸದ್ಯ ವೈರಲ್ ಆಗುತ್ತಿದೆ ತಂತ್ರಜ್ಞಾನ ಬಂದಂತೆ ಹೊಸ ಹೊಸ ವಿಭಿನ್ನ ಸೃಜನಾತ್ಮಕ ಬೆಳವಣಿಗೆಗಳು ಬರುತ್ತಲೇ ಇದೆ. ಇದೀಗ ಟೆಸ್ಲಾ ಮತ್ತು ಎಕ್ಸ್ ಮಾಲಿಕ ಎಲಾನ್ ಮಸ್ಕ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಸದ್ಯ ವೈರಲ್ ಆಗುತ್ತಿದೆ ಇದನ್ನು ಓದಿ : ತಂತ್ರಜ್ಞಾನವನ್ನು ಬಳಸಿಕೊಂಡು ವಿವಿಧ ವಿಡಿಯೋಗಳನ್ನು ಸೃಜನಾತ್ಮಕವಾಗಿ ರಚಿಸಲಾಗುತ್ತಿದೆ ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ಎಲಾನ್ ಮಸ್ಕ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು ಬೇರೆ ಬೇರೆ ನಾಯಕರ ರಾಂಪ್ ವಾಕ್ ಅನ್ನು ಇದು ಒಳಗೊಂಡಿದೆ. — (@) ಎಲಾನ್ ಮಸ್ಕ್ ವಿಡಿಯೋ ಹಂಚಿಕೊಂಡ ಪೋಸ್ಟ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ರಾಂಪ್ ವಾಕ್ ಅನ್ನು ತೋರಿಸಲಾಗಿದೆ. ಮೋದಿ ಮಾತ್ರವಲ್ಲದೆ ಅಮೆರಿಕಾದ ಅಧ್ಯಕ್ಷ ಜೋ ಬೈಡನ್, ಕಮಲ್ ಹ್ಯಾರಿಸ್, ಬರಾಕ ಒಬಾಮಾ, ಕ್ಸಿ ಜಿನ್ ಪಿಂಗ್ ಸೇರಿದಂತೆ ಇತರರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಓದಿ : ಮೋದಿ ಈ ವಿಡಿಯೋದಲ್ಲಿ ಬಣ್ಣ ಬಣ್ಣದ ಬಟ್ಟೆಯಲ್ಲಿ ಹಾಗೂ ಹಣೆಯ ಮೇಲೆ ತಿಲಕವನಿಟ್ಟುಕೊಂಡು ರಾಂಕ್ ವಾಕ್ ಮಾಡಿದ್ದಾರೆ. ಜೊತೆಗೆ ವೀಡಿಯೊದಲ್ಲಿ ಜಸ್ಟಿನ್ ಟ್ರುಡೊ, ವ್ಲಾಡಿಮಿರ್ ಪುಟಿನ್, ಪೋಪ್ ಫ್ರಾನ್ಸಿಸ್, ಆಪಲ್ ಸಿಇಒ ಟಿಮ್ ಕುಕ್, ಡೊನಾಲ್ಡ್ ಟ್ರಂಪ್, ಮಾರ್ಕ್ ಜುಕರ್‌ಬರ್ಗ್ ಮತ್ತು ಎಲಾನ್ ಮಸ್ಕ್ ಇದ್ದಾರೆ. ಇದರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...