: ಮಿಡತೆ, ರೇಷ್ಮೆ ಹುಳ ಸೇರಿ 16 ಬಗೆಯ ಕೀಟಗಳ ಸೇವನೆಗೆ ಸಿಂಗಪುರ ಸರ್ಕಾರದಿಂದ ಗ್ರೀನ್ ಸಿಗ್ನಲ್! ಮಾನವರು ಆಹಾರವಾಗಿ ಸೇವಿಸಲು ಯೋಗ್ಯವಾದ ಜಾತಿಗಳಿಗೆ ಸೇರಿದ ಕೀಟಗಳು ಮತ್ತು ಕೀಟ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಅನುಮತಿಸುತ್ತದೆ ಎಂದು ಸಂಸ್ಕರಿತ ಆಹಾರ ಮತ್ತು ಪಶು ಆಹಾರ ವ್ಯಾಪಾರಿಗಳನ್ನು ಉದ್ದೇಶಿಸಿ ಹೊರಡಿಸಿರುವ ಸುತ್ತೋಲೆಯಲ್ಲಿ ಸಂಸ್ಥೆ ತಿಳಿಸಿದೆ. ನವದೆಹಲಿ:ಮಿಡತೆ, ರೇಷ್ಮೆ ಹುಳ ಸೇರಿದಂತೆ 16 ಬಗೆಯ ಕೀಟಗಳ ಸೇವನೆಗೆ ಸಿಂಗಪುರ ಸರ್ಕಾರವು ಗ್ರೀನ್ ಸಿಗ್ನಲ್ ನೀಡಿದೆ. ಹೌದು, ಇದು ಸಿಂಗಾಪುರದಲ್ಲಿ ಕೀಟಗಳು, ಮಿಡತೆಗಳು ಮತ್ತು ರೇಷ್ಮೆ ಹುಳುಗಳು ಸೇರಿದಂತೆ 16 ಜಾತಿಯ ಕೀಟಗಳನ್ನು ಮನುಷ್ಯರ ಆಹಾರವಾಗಿ ಬಳಸಬಹುದು ಅಂತಾ ಸಿಂಗಾಪುರ್ ಆಹಾರ ಸಂಸ್ಥೆ () ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ಆಹಾರವಾಗಿ ಸೇವಿಸಲು ಯೋಗ್ಯವಾದ ಜಾತಿಗಳಿಗೆ ಸೇರಿದ ಕೀಟಗಳು ಮತ್ತು ಕೀಟ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಅನುಮತಿಸುತ್ತದೆ ಎಂದು ಸಂಸ್ಕರಿತ ಆಹಾರ ಮತ್ತು ಪಶು ಆಹಾರ ವ್ಯಾಪಾರಿಗಳನ್ನು ಉದ್ದೇಶಿಸಿ ಹೊರಡಿಸಿರುವ ಸುತ್ತೋಲೆಯಲ್ಲಿ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಈ ಕೀಟಗಳು ಮತ್ತು ಕೀಟ ಉತ್ಪನ್ನಗಳನ್ನು ಮಾನವ ಬಳಕೆಗಾಗಿ ಅಥವಾ ಆಹಾರ-ಉತ್ಪಾದಿಸುವ ಪ್ರಾಣಿಗಳಿಗೆ ಪಶು ಆಹಾರವಾಗಿ ಬಳಸಬಹುದು. 2022ರ ಅಂತ್ಯದಲ್ಲಿ ಕೀಟಗಳು ಮತ್ತು ಕೀಟ ಉತ್ಪನ್ನಗಳ ನಿಯಂತ್ರಣದ ಕುರಿತು ಸಾರ್ವಜನಿಕ ಸಮಾಲೋಚನೆ ನಡೆಸಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಅಂದರೆ 2023ರ ದ್ವಿತೀಯಾರ್ಧದಲ್ಲಿ 16 ಜಾತಿಯಬಳಕೆಗೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್ ಸಿಗುತ್ತದೆ ಅಂತಾ ಸಂಸ್ಥೆ ಹೇಳಿಕೊಂಡಿತ್ತು. ಅದರಂತೆ ಇದೀಗ ಇವುಗಳನ್ನು ಆಹಾರವಾಗಿ ಬಳಸಬಹುದಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...