11ನೇ ಮಗುವಿಗೆ ತಂದೆಯಾದ ವಿಶ್ವದ ನಂ. 1 ಶ್ರೀಮಂತ ಎಲಾನ್ ಮಸ್ಕ್‌..! : ಎಲಾನ್ ಮಸ್ಕ್‌...ವಿಶ್ವದ ನಂ. 01 ಶ್ರೀಮಂತ. ಈತ ಏನೇ ಮಾಡಿದರೂ ಅದು ಸೆನ್ಸೇಷನಲ್‌ ನ್ಯೂಸ್‌. ಒಂದಲ್ಲ ಒಂದು ವಿಷಯದ ಬಗ್ಗೆ ಸದಾ ಸುದ್ದಿಯಲ್ಲಿರುವ ಎಲಾನ್ ಮಸ್ಕ್‌ ಇದೀಗ ಮತ್ತೆ ಸದ್ದು ಮಾಡ್ತಿದ್ದಾರೆ. :ಎಲಾನ್ ಮಸ್ಕ್‌...ವಿಶ್ವದ ನಂ. 01 ಶ್ರೀಮಂತ. ಈತ ಏನೇ ಮಾಡಿದರೂ ಅದು ಸೆನ್ಸೇಷನಲ್‌ ನ್ಯೂಸ್‌. ಒಂದಲ್ಲ ಒಂದು ವಿಷಯದ ಬಗ್ಗೆ ಸದಾ ಸುದ್ದಿಯಲ್ಲಿರುವ ಎಲಾನ್ ಮಸ್ಕ್‌ ಇದೀಗ ಮತ್ತೆ ಸದ್ದು ಮಾಡ್ತಿದ್ದಾರೆ. ವಿಶ್ವದ ಬಿಲಿಯನೇರ್, ಸ್ಪೇಸ್ ಎಕ್ಸ್ ಮತ್ತು ಟೆಸ್ಲಾ ಮುಖ್ಯಸ್ಥರೆಂದೇ ಖ್ಯಾತಿ ಪಡೆದಿರುವ ಎಲೋನ್ ಮಸ್ಕ್ ದುಡ್ಡಿನಲ್ಲಿ ಅಷ್ಟೆ ಅಲ್ಲ ಮಕ್ಕಳ ವಿಷಯದಲ್ಲೂ ಶ್ರಿಮಂತ ಎಂದೇ ಹೇಳಬಹುದು. ಈಗಾಗಲೇ ಹತ್ತು ಮಕ್ಕಳನ್ನು ಹೊಂದಿರುವ ಎಲಾನ್ ಮಸ್ಕ್‌ ಇದೀಗ 11 ನೇ ಮಗುವಿಗೆ ತಂದೆಯಾಗಿದ್ದಾರೆ. ಇದನ್ನೂ ಓದಿ: ಎಲಾನ್ಮಸ್ಕ್‌ ಅವರ ಮೊದಲ ಹೆಂಡತಿ, ಲೇಖಕ ಜಸ್ಟಿನ್ ಮಸ್ಕ್ಗೆ ಐದು ಮಕ್ಕಳಿಗೆ ಜನ್ಮ ನೀಡಿದ್ದರು. ನಂತರ ಇಬ್ಬರ ಮಧ್ಯೆ ಮನಸ್ತಾಪ ಉಂಟಾದ ಕಾರಣ ಇಬ್ಬರು ಬೇರ್ಪಟ್ಟಿದ್ದರು. ನಂತರ ಮಸ್ಕ್‌ ಸಂಗೀತಗಾರ್ತಿ ಗ್ರಿಮ್ಸ್‌ನೊಂದಿಗೆ ಡೇಟಿಂಗ್ ಮಾಡಿ ಮೂರು ಮಕ್ಕಳಿಗೆ ಜನ್ಮ ನೀಡಿದ್ರು. ಇದೀಗ ಎಲೋನ್‌ ಕಂಪನಿಯ ಉದೋಗಿಯಾದ ಶಿವೋನ್ ಜಿಲಿಸ್ ಅವರರೊಂದಿಗೆ ಸಂಬಂಧ ಹೊಂದಿದ್ದು, ಮೊದಲು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದ ಮಸ್ಕ್‌ ಇದೀಗ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದು. ಈ ವಿಷಯವನ್ನು ಎಲ್ಲೂ ಬಹಿರಂಗವಾಗಿಲ್ಲ. ಎಲಾನ್‌ ಮಸ್ಕ್‌ ಮಕ್ಕಳ ಹೆಸರು:ಗ್ರಿಫಿನ್ ಮಸ್ಕ್, ಕ್ಸೇವಿಯರ್, ಡೇಮಿಯನ್, ವಿಲ್ಸನ್, ಕಾಯ್, ಸ್ಯಾಕ್ಸನ್, , ಟೆಕ್ನೋ ಮೆಕಾನಿಕಸ್ ಮಸ್ಕ್, ಆಕ್ಸಾ ಡಾರ್ಕ್ ಸೈಡೆರಲ್ ಮಸ್ಕ್, ಕಾಯ್ ಮಸ್ಕ್ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...