ದಕ್ಷಿಣ ಏಷ್ಯಾದಲ್ಲಿಯೇ ಸುಧೀರ್ಘ ಶಾಖವನ್ನು ಎದುರಿಸುತ್ತಿದೆ ಬಾಂಗ್ಲಾದೇಶ : ಭಾನುವಾರದಿಂದ ಇನ್ನು ಮೂರು ದಿನಗಳವರೆಗೂ ಶಾಖದ ಅಲೆ ಹಾಗೆ ಇರುತ್ತದೆ ಎಂದು ಬಾಂಗ್ಲಾದೇಶದ ಅಧಿಕಾರಿಗಳು ತಿಳಿಸಿದ್ದಾರೆ. :ಭಾನುವಾರದಿಂದ ಇನ್ನು ಮೂರು ದಿನಗಳವರೆಗೂ ಶಾಖದ ಅಲೆ ಹಾಗೆ ಇರುತ್ತದೆ ಎಂದು ಬಾಂಗ್ಲಾದೇಶದ ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಏಷ್ಯಾದ ಇಡೀ 75 ವರ್ಷಗಳ ಇತಿಹಾಸದಲ್ಲಿ ಬಾಂಗ್ಲಾದೇಶವು ಅತಿ ಹೆಚ್ಚಿನ ಶಾಖದ ಎಲೆಯನ್ನು ಎದುರಿಸುತ್ತಿದೆ. ಇದನ್ನು ಓದಿ : ಬಾಂಗ್ಲಾದೇಶದ ನೈರುತ್ಯ ಜಿಲ್ಲೆ ಚುಡಂಗಾದಲ್ಲಿ ಶುಕ್ರವಾರ 42.7 ಡಿಗ್ರಿ ಸೆಲ್ಸಿಯಸ್ ಅತ್ಯಧಿಕ ತಾಪಮಾನ ಹೊಂದಿರುವುದು ದಾಖಲೆಯಾಗಿದೆ ಮತ್ತು ಹವಾಮಾನ ದತ್ತಾಂಶದ ಪ್ರಕಾರ ಶುಕ್ರವಾರ ಡಾಕಾದ ಗರಿಷ್ಠ ತಾಪಮಾನ 38.2 ಡಿಗ್ರಿ ಸೆಲ್ಸಿಯಸ್. ಈ ಬಿಸಿಲಿನ ತಾಪಮಾನದಿಂದಾಗಿ ಬಾಂಗ್ಲಾದೇಶದ ಕೆಲವು ಪ್ರದೇಶಗಳಲ್ಲಿ ಶಾಲೆಯನ್ನು ಮುಚ್ಚುವಂತೆ ಸರ್ಕಾರ ಕೋರಿದೆ. ಮತ್ತು ಈ ಹಿನ್ನೆಲೆಯಲ್ಲಿ ಬಿಸಿಲಿನ ತಾಪಮಾನಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿವೆ ಎಂದು ತಿಳಿದು ಬರುತ್ತಿದೆ ಮತ್ತು ಆಸ್ಪತ್ರೆಯಲ್ಲಿ ಹೆಚ್ಚಿನ ರೋಗಿಗಳು ದಾಖಲಾಗುತ್ತಿದ್ದಾರೆ. ಇದನ್ನು ಓದಿ : ಇಡೀ ಬಾಂಗ್ಲಾದೇಶದ ಇತಿಹಾಸದಲ್ಲಿ ದಕ್ಷಿಣ ಏಷ್ಯಾದ ದೇಶಗಳಲ್ಲಿ ಒಂದಾದ ಬಾಂಗ್ಲಾದೇಶ 75 ವರ್ಷಗಳಲ್ಲಿ ಸುದೀರ್ಘವಾದ ಶಾಖದ ಅಲೆಯನ್ನು ಈ ಸಮಯದಲ್ಲಿ ಎದುರಿಸುತ್ತಿದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...