: ತೈವಾನ್‌ನಲ್ಲಿ 6.3 ತೀವ್ರತೆಯ ಭಾರೀ ಭೂಕಂಪ : ಇಪ್ಪತ್ತು ದಿನಗಳ ಹಿಂದೆಯೂ ತೈವಾನ್‌ನಲ್ಲಿ ಭೂಕಂಪ ಸಂಭವಿಸಿತ್ತು. ಇದರ ತೀವ್ರತೆ, 7.2 ರಷ್ಟಿತ್ತು. ಏಪ್ರಿಲ್ 3ರಂದು ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದರು. :ಇತ್ತೀಚೆಗಷ್ಟೇ ಭೂಕಂಪದಿಂದ ನಲುಗಿದ್ದ ತೈವಾನ್‌ನಲ್ಲಿ ನಿನ್ನೆ ತಡರಾತ್ರಿ ಮತ್ತೆ ಭೂಕಂಪ ( ) ಸಂಭವಿಸಿದೆ. ಒಂದೇ ರಾತ್ರಿಯಲ್ಲಿ ದೇಶದಲ್ಲಿ 80 ಬಾರಿ ಭೂಕಂಪ ಸಂಭವಿಸಿರುವ ಬಗ್ಗೆ ವರದಿಯಾಗಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3ರಷ್ಟಿತ್ತು ಎಂದು ತಿಳಿದುಬಂದಿದೆ. ಸೋಮವಾರ (ಏಪ್ರಿಲ್ 22) ತೈವಾನ್‌ನಲ್ಲಿ ಸ್ಥಳೀಯ ಕಾಲಮಾನ ಸಂಜೆ 5:08 ಕ್ಕೆ (0908 ) ಭೂಕಂಪ ಅಪ್ಪಳಿಸಿತು. ರಾಜಧಾನಿ ತೈಪೆಯಲ್ಲೂ ಕೂಡದ () ಅನುಭವವಾಗಿದೆ. ಇದನ್ನೂ ಓದಿ- ರಾಜಧಾನಿ ತೈಪೆ ಸೇರಿದಂತೆ ಉತ್ತರ, ಪೂರ್ವ ಮತ್ತು ಪಶ್ಚಿಮದೊಡ್ಡ ಭಾಗಗಳಲ್ಲಿ ಕಟ್ಟಡಗಳು ಅಲುಗಾಡಿದ ಅನುಭವವಾಗಿದೆ. ತೈವಾನ್‌ನ ಶೌಫೆಂಗ್ ಟೌನ್‌ಶಿಪ್, ಹುವಾಲಿಯನ್ ಕೌಂಟಿಯಲ್ಲಿ ಸೋಮವಾರ 9 ನಿಮಿಷಗಳಲ್ಲಿ ಐದು ಭೂಕಂಪಗಳು ಸಂಭವಿಸಿವೆ ಎಂದು ಕೇಂದ್ರ ಸುದ್ದಿ ಸಂಸ್ಥೆ ಫೋಕಸ್ ತೈವಾನ್ ವರದಿ ಮಾಡಿದೆ. ಇದನ್ನೂ ಓದಿ- ತೈವಾನ್‌ನಲ್ಲಿನ ವಿರಳ ಜನಸಂಖ್ಯೆ ಹೊಂದಿರುವ ಹುವಾಲಿಯನ್ ಏಪ್ರಿಲ್ 3 ರಂದು 7.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದು ಪರ್ವತ ಪ್ರದೇಶದ ಸುತ್ತಲೂ ಭೂಕುಸಿತಗಳನ್ನು ಉಂಟುಮಾಡಿತು. ಈ ದುರ್ಘಟನೆಯಲ್ಲಿ ಕನಿಷ್ಠ 14ಮಂದಿ ಸಾವನ್ನಪ್ಪಿದ್ದರು. ರಸ್ತೆಗಳು ಕೂಡ ಹಾನಿಗೊಳಗಾಗಿದ್ದವು. ಈ ಸಂದರ್ಭದಲ್ಲಿ ಹುವಾಲಿಯನ್‌ನಲ್ಲಿ ಭೂಕಂಪದ ಕೇಂದ್ರವಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...