ಅದೃಷ್ಟ ಅಂದರೆ ಇದು! ಎರಡೆರಡು ಬಂಪರ್ ಲಾಟರಿ ಗೆದ್ದ ದಂಪತಿ !ಖಾತೆಗೆ ಬಿತ್ತು 16 ಕೋಟಿ ರೂಪಾಯಿ : ಗಂಡನ ಬಳಿ ಇರುವ ಟಿಕೆಟನ್ನು ಚೆಕ್ ಮಾಡುವಂತೆ ಪತ್ನಿ ಹೇಳಿದ್ದಾಳೆ. ಆಗಲೇ ಅವರಿಗೆ ತಿಳಿದದ್ದು ಅವರ ಬಳಿ ಇರುವ ಇನ್ನೊಂದು ಟಿಕೆಟ್ ಕೂಡಾ ಬಂಪರ್ ಗೆದ್ದಿದೆ ಎನ್ನುವುದು. :ಮೇರಿಲ್ಯಾಂಡ್‌ನ ಅನ್ನಾಪೊಲಿಸ್ ನಗರದಲ್ಲಿ ವಾಸಿಸುವ ದಂಪತಿಯ ಅದೃಷ್ಟ ಇದ್ದಕ್ಕಿದ್ದಂತೆ ಖುಲಾಯಿಸಿದೆ. ಪವರ್ ಬಾಲ್ ಲಾಟರಿಗಾಗಿ ಒಂದೇ ನಂಬರಿನ ಎರಡು ಟಿಕೆಟ್ ಗಳನ್ನು ವ್ಯಕ್ತಿಯೊಬ್ಬರು ಖರೀದಿಸಿದ್ದಾರೆ.ಈ ವ್ಯಕ್ತಿ 7-ಇಲೆವೆನ್ ಸ್ಟೋರ್‌ನಲ್ಲಿ ಹಳೆಯ ಲಾಟರಿ ಟಿಕೆಟ್‌ಗಳನ್ನು ಸ್ಕ್ಯಾನ್ ಮಾಡಲು ರಿಪ್ಲೇ ವೈಶಿಷ್ಟ್ಯವನ್ನು ಬಳಸುತ್ತಿದ್ದಾಗಲೇ ಅವರ ಅದೃಷ್ಟ ಕೂಡಾ ಬದಲಾಗಿದೆ. ಈ ವೈಶಿಷ್ಟ್ಯವು ಅದೇ ಸಂಖ್ಯೆಯ ಹೊಸ ಟಿಕೆಟ್ ಅನ್ನು ಜನರೇಟ್ ಮಾಡುತ್ತದೆ. ಆದರೆ ಅವನ ಕೆಲವು ಹಳೆಯ ಟಿಕೆಟ್‌ಗಳ ಸಂಖ್ಯೆಗಳು ಕೂಡಾ ಹೊಂದಾಣಿಕೆಯಾಗುತ್ತಿವೆ ಎನ್ನುವುದನ್ನು ಆ ವ್ಯಕ್ತಿ ಕೂಡಾ ಗಮನಿಸಿರಲಿಲ್ಲ. ಲಾಟರಿಯಲ್ಲಿ ಕೋಟ್ಯಂತರ ರೂ :ಬಹುಮಾನದ ಮೊತ್ತವು ಒಂದು ಬಿಲಿಯನ್ ಡಾಲರ್‌ಗಿಂತ ಹೆಚ್ಚಿದ್ದಾಗ ಮಾತ್ರ ತಾನು ಲಾಟರಿ ಖರೀದಿ ಮಾಡುವುದಾಗಿ ವ್ಯಕ್ತಿ ಹೇಳಿದ್ದಾರೆ.ಎರಡು ಮಿಲಿಯನ್ ಡಾಲರ್ (16 ಕೋಟಿ ರೂ.ಗಿಂತ ಹೆಚ್ಚು) ವಿಜೇತ ಟಿಕೆಟ್‌ಗಳು ಮಾರಾಟವಾಗಿವೆ ಎಂಬ ಸುದ್ದಿ ಬಂದಾಗ, ದಂಪತಿ ತಮ್ಮ ಎಲ್ಲಾ ಟಿಕೆಟ್‌ಗಳನ್ನು ಚೆಕ್ ಮಾಡಿದ್ದಾರೆ. ಈ ವೇಳೆ ತಾವು ಲಾಟರಿಯಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಗೆದ್ದಿರುವ ವಿಷಯ ದಂಪತಿಗೆ ತಿಳಿದಿದೆ. ಇದನ್ನೂ ಓದಿ: ಅದೃಷ್ಟ ಅಂದರೆ ಇದು :ಅಸಲಿಗೆ ಈ ದಂಪತಿಗೆ ಮೊದಲು ಒಂದು ಟಿಕೆಟ್ ಗೆದ್ದಿರುವ ಬಗ್ಗೆ ಮಾತ್ರ ಮಾಹಿತಿ ಇತ್ತು. ನಂತರ ಮತ್ತೆ ಗಂಡನ ಬಳಿ ಇರುವ ಟಿಕೆಟನ್ನು ಚೆಕ್ ಮಾಡುವಂತೆ ಪತ್ನಿ ಹೇಳಿದ್ದಾಳೆ. ಆಗಲೇ ಅವರಿಗೆ ತಿಳಿದದ್ದು ಅವರ ಬಳಿ ಇರುವ ಇನ್ನೊಂದು ಟಿಕೆಟ್ ಕೂಡಾ ಬಂಪರ್ ಗೆದ್ದಿದೆ ಎನ್ನುವುದು. ಅಂದರೆ ಈಗ ಆ ದಂಪತಿ ಗೆದ್ದಿರುವ ಮೊತ್ತ ಸುಮಾರು $20 ಮಿಲಿಯನ್‌. (ಸುಮಾರು 16 ಕೋಟಿ ರೂ.). ಇಷು ದೊಡ್ಡತಮ್ಮ ಗುರುತು ಪರಿಚಯವನ್ನು ಎಲ್ಲೂ ಹೊರಗೆ ತಿಳಿಸಿಲ್ಲ. ತಾವು ಗೆದ್ದಿರುವ ಹಣವನ್ನು ಹೂಡಿಕೆ ಮಾಡುವ ಯೋಚನೆಯಲ್ಲಿ ಇದ್ದಾರಂತೆ ಇವರು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...