ಲಡಾಖ್ : ಹಿಮಪಾತದಲ್ಲಿ ಸಿಲುಕಿದ್ದ 80 ಜನರನ್ನು ರಕ್ಷಿಸಿದ ಭಾರತೀಯ ಸೇನೆ ಲಡಾಖ್ ನ ಕೇಂದ್ರಾಡಳಿತ ಪ್ರದೇಶ ಲೇಹ್ ನ ಮತ್ತು ಶ್ಯೋಕ್ ನದಿ ಕಣಿವೆಯ ನಡುವಿನ 17,688 ಅಡಿ ಎತ್ತರದ ಚಾಂಗ್ ಲಾ ಪಾಸ್‌ನಲ್ಲಿ ಹಿಮಪಾತದ ನಡುವೆ ಸಿಲುಕಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 80 ಜನರನ್ನು ಭಾರತೀಯ ಸೇನೆ ರಕ್ಷಿಸಿದೆ. ತ್ರಿಶೂಲ್ ವಿಭಾಗದ ಸೈನಿಕರು ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಭಾರತೀಯ ಸೇನೆಯ ಲೇಹ್ ಮೂಲದ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ತಿಳಿಸಿದೆ. ಇದನ್ನು ಓದಿ : ಈ ಮಾಹಿತಿ ತಿಳಿದ ಸೈನಿಕರು ಅಲ್ಲಿಗೆ ಧಾವಿಸಿ ತಡರಾತ್ರಿ 2 ಘಂಟೆಗಳ ಕಾರ್ಯಾಚರಣೆ ನಡೆಸಿ ಹಿಮದಲ್ಲಿ ಸಿಲುಕಿದ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಒಟ್ಟು 80 ಜನರನ್ನು ರಕ್ಷಣೆ ನಡೆಸಿದ್ದಾರೆ. '- ' , , 80 … — @firefurycorps_IA (@) ಪಟ್ಟು ಬಿಡದೆ ನಿರಂತರ ವಾಗಿ ಕಾರ್ಯವಹಿಸಿ ಚಾಂಗ್ ಲಾದ ಹಿಮಾವೃತ ಎತ್ತರದಲ್ಲಿ ಉದ್ಭವಿಸಿದ ಪರಿಸ್ಥಿತಿಯಲ್ಲಿ ರಕ್ಷಣೆ ಮಾಡಿದ್ದಾರೆ ಎಂದು ಕಾರ್ಪ್ಸ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ನಲ್ಲಿ ಹಂಚಿಕೊಂಡಿದೆ. ಇದನ್ನು ಓದಿ : ಇದರೊಂದಿಗೆ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಹಾಗೂ ಫೋಟೋ ಗಳನ್ನು ಹಂಚಿಕೊಂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...