184 ಕೋಟಿ ರೂ. ಸೇವಾ ತೆರಿಗೆ ಬಾಕಿ ಹಿನ್ನೆಲೆ ಜೊಮಾಟೊಗೆ ನೋಟಿಸ್ ಆನ್ಲೈನ್ ಆಹಾರ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ಝೋಮ್ಯಾಟೋ ಸೇವಾ ತೆರಿಗೆ ಮತ್ತು ದಂಡ ಸೇರಿ 184 ಕೋಟಿ ಪಾವತಿಸುವಂತೆ ನೋಟಿಸ್ ಪಡೆದುಕೊಂಡಿದೆ. ನವದೆಹಲಿಯ ಕೇಂದ್ರ ತೆರಿಗೆ ಇಲಾಖೆಯು ಆನ್ಲೈನ್ ಆಹಾರ ವಿತರಣಾ ಸಂಸ್ಥೆ ಝೋಮ್ಯಾಟೋ ಗೆ ತೆರಿಗೆ ಕುರಿತಂತೆ ನೋಟಿಸ್ ನೀಡಿದ್ದು 184 ಕೋಟಿ ಸೇವಾ ತೆರಿಗೆ ಬಾಕಿ ಇದೆ ಎಂದು ತಿಳಿಸಿದೆ. ಇದನ್ನು ಓದಿ : ಝೋಮ್ಯಾಟೋ ಅಕ್ಟೋಬರ್ 2014 ರಿಂದ ಜೂನ್ 2017ರ ಅವಧಿಯವರೆಗೆ ಸೇವಾ ತೆರಿಗೆಯನ್ನು ಪಾವತಿಸಿಲ್ಲ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ತೆರಿಗೆ ಇಲಾಖೆಯು ನೋಟಿಸ್ ನೀಡಿದೆ. ಕಂಪನಿಯು ವಿದೇಶಾಂಗ ಸಂಸ್ಥೆಗಳು ಮತ್ತು ಶಾಖಗಳಿಂದ ಆಹಾರ ಪದಾರ್ಥಗಳನ್ನ ಮಾರಾಟ ಮಾಡಿರುವುದಕ್ಕೆ ಸಂಬಂಧಿಸಿದಂತೆ ಸೇವಾ ತೆರಿಗೆ ಇದಾಗಿದೆ ಮತ್ತು ಸೂಕ್ತ ಪ್ರಾಧಿಕಾರದ ಮುಂದೆ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಕಂಪನಿಯು ತಿಳಿಸಿದೆ. ಇದನ್ನು ಓದಿ : ಅಲ್ಲದೆ ಕಂಪನಿಯು ವಿದೇಶದಲ್ಲಿ ಹಲವಾರು ಅಂಗ ಸಂಸ್ಥೆಗಳನ್ನು ಹೊಂದಿದ್ದು ಇದೀಗ ಅಂತರಾಷ್ಟ್ರೀಯ ವ್ಯಾಪಾರವನ್ನು ಮುಚ್ಚಿದೆ ಮತ್ತು ವಿದೇಶಗಳಲ್ಲಿ ಮಾರಾಟ ಮಾಡಿದ ಆಧಾರದ ಮೇಲೆ ತೆರಿಗೆಯನ್ನು ನಿರ್ಧರಿಸಲಾಗುತ್ತದೆ ಎಂದು ಸೈನಿಂಗ್ ನಲ್ಲಿ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...