ಈಕೆಗೆ ಪುರುಷರ ರಕ್ತ ಅಂದ್ರೆ ತುಂಬಾ ಇಷ್ಟ..! ವಾರಕ್ಕೆ 36 ಲೀಟರ್ ರಕ್ತ ಕುಡಿತಾಳೆ : ಜಗತ್ತಿನಲ್ಲಿ ಎಂತೆಂಥಾ ಜನರಿರುತ್ತಾರೆ ಎನ್ನುವುದಕ್ಕೆ ಇಲ್ಲೊಂದು ಸ್ಪಷ್ಟ ಉದಾರಹಣೆ ಇದೆ. ಮಾಂಸಹಾರಿಗಳು ಮಟನ್ ರಕ್ತ ಮತ್ತು ಮಟನ್ ತಲೆಯನ್ನು ತಿನ್ನುವುದನ್ನ ಕೇಳಿದ್ದೇವೆ.. ಇದು ಮನುಷ್ಯನ ಆಹಾರದ ಭಾಗವೂ ಒಂದು. ಆದರೆ ಯಾರಾದರೂ ಮನುಷ್ಯರ ರಕ್ತವನ್ನು ಕುಡಿಯುತ್ತಾರೆಯೇ..? ಹಾಗೆ ಮಾಡಿದರೆ ಮನುಷ್ಯರೆನ್ನುವುದಿಲ್ಲ.. ರಾಕ್ಷಸರೆನ್ನುತ್ತಾರೆ..! :ಯಾರೂ ಮನುಷ್ಯರ ರಕ್ತವನ್ನು ಕುಡಿಯಲು ಇಷ್ಟ ಪಡುವುದಿಲ್ಲ. ಇದನ್ನ ಊಹಿಸಲೂ ಭಯವಾಗುತ್ತದೆ. ಆದರೆ ಮಹಿಳೆಯೊಬ್ಬಳು ವಾರಕ್ಕೆ 36 ಲೀಟರ್ ಮಾನವ ರಕ್ತ ಕುಡಿಯುತ್ತಾಳೆ ಅಂದ್ರೆ ನೀವು ನಂಬಲೇಬೇಕು.. ಮನುಷ್ಯನಲ್ಲಿ ಸುಮಾರು 5 ಲೀಟರ್ ರಕ್ತವಿರುತ್ತದೆ.. ಈಕೆ ವಾರಕ್ಕೆ 36 ಲೀಟರ್ ರಕ್ತ ಕುಡಿದರೆ.. ಎಷ್ಟು ಜನರ ರಕ್ತಬೇಕಾಗುತ್ತೆ.. ಊಹೆ ಮಾಡಿಕೊಳ್ಳಿ.. ನಾವು ಹೇಳುತ್ತಿರುವುದು ಅಮೆರಿಕದ ಕ್ಯಾಲಿಫೋರ್ನಿಯಾ ನಿವಾಸಿ 40 ವರ್ಷದ ಮಿಚೆಲ್ ಅವರ ಬಗ್ಗೆ. ಈಕೆ ವೃತ್ತಿಯಲ್ಲಿ ಹಚ್ಚೆ ಕಲಾವಿದೆ. ಇವರು ಹಲವು ವರ್ಷಗಳಿಂದ ಮಾನವನ ರಕ್ತವನ್ನು ಕುಡಿದು ಬದುಕುತ್ತಿದ್ದಾರೆ. ಸ್ವತಃ ಈ ಕುರಿತು ಮಿಚೆಲ್‌ ಟಿವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನನಗೆ ಮನುಷ್ಯರ ರಕ್ತ ಕುಡಿಯುವ ಅಭ್ಯಾಸವಿದೆ.. ಮನುಷ್ಯರ ರಕ್ತ ತುಂಬಾ ಇಷ್ಟ. ಹಾಗಾಗಿ ಅದನ್ನು ಸೇವಿಸುತ್ತಿದ್ದೇನೆ. ಪ್ರಾಣಿಗಳ ರಕ್ತವನ್ನು ಕುಡಿಯುತ್ತೇನೆ. ಹೆಚ್ಚಾಗಿ ಮಾನವ ರಕ್ತವನ್ನು ಕುಡಿಯಲು ಇಷ್ಟ ಅಂತ ಹೇಳಿಕೊಂಡಿದ್ದಾಳೆ ಮಿಚೆಲ್‌. ಅಲ್ಲದೆ, ಈಕೆ ಕೇವಲ ಒಂದು ವಾರದಲ್ಲಿ ಸುಮಾರು 36 ಲೀಟರ್ ರಕ್ತವನ್ನು ಕುಡಿಯುತ್ತಾಳಂತೆ. ಮಿಚೆಲ್ 18 ವರ್ಷದವಳಿದ್ದಾಗ, ಖಿನ್ನತೆಯಿಂದ ಬಳಲುತ್ತಿದ್ದರು. ಆ ಸಮಯದಲ್ಲಿ ತನಗೆ ತಾನೇ ನೋವು ಮಾಡಿಕೊಳ್ಳುತ್ತಿದ್ದಳು. ಒಂದು ದಿನ ಅವಳು ತನ್ನ ಕೈಯನ್ನು ಕತ್ತರಿಸಿಕೊಂಡಿದ್ದಳು. ಕೈಯಿಂದ ರಕ್ತ ಸುರಿಯುತ್ತಿದೆ. ಆಮೇಲೆ ಆ ರಕ್ತವನ್ನು ಕುಡಿದಳು.. ಅದು ಅವಳಿಗೆ ರುಚಿ ಅನಿಸಿ ಇಷ್ಟವಾಯಿತು. ಆಮೇಲೆ ರಕ್ತ ಕುಡಿಯುವ ಅಭ್ಯಾಸವನ್ನು ಬೆಳಸಿಕೊಂಡಳು. ಅಂದಿನಿಂದ ಇಂದಿನ ವರೆಗೆ ರಕ್ತವನ್ನು ಕುಡಿದು ಬದುಕುತ್ತಿದ್ದಾಳೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...