ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ PPPಯ ಹಿರಿಯ ನಾಯಕ ಆಸಿಫ್‌ ಅಲಿ ಜರ್ದಾರಿ ಆಯ್ಕೆ ' : ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ () ಹಿರಿಯ ನಾಯಕ ಆಸಿಫ್‌ ಅಲಿ ಜರ್ದಾರಿ 2ನೇ ಬಾರಿಗೆ ಅಧ್ಯಕ್ಷ ಹುದ್ದೆ ವಹಿಸಿಕೊಂಡ ಹಿರಿಯ ನಾಗರೀಕ ಎನಿಸಿಕೊಂಡಿದ್ದಾರೆ. :ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ () ಹಿರಿಯ ನಾಯಕ ಆಸಿಫ್‌ ಅಲಿ ಜರ್ದಾರಿ ಆಯ್ಕೆಯಾಗಿದ್ದಾರೆ. 2ನೇ ಬಾರಿಗೆ ಪಾಕಿಸ್ತಾನದ ಅಧ್ಯಕ್ಷ ಚುಕ್ಕಾಣಿ ಜರ್ದಾರಿ ಪಾಲಾಗಿದೆ. ಶನಿವಾರ ನಡೆದ ಅಧ್ಯಕ್ಷರ ಚುನಾವಣೆಯ ವೇಳೆ ಆಸಿಫ್‌ ಅಲಿ ಜರ್ದಾರಿ ಗೆಲುವು ಕಾಣುವ ಮೂಲಕ ಪಾಕಿಸ್ತಾನದ ಅಧ್ಯಕ್ಷರೆನಿಸಿಕೊಂಡಿದ್ದಾರೆ. ಇದರೊಂದಿಗೆ ಪಾಕಿಸ್ತಾನದ 14ನೇ ಅಧ್ಯಕ್ಷ ಎನ್ನುವ ಕೀರ್ತಿ ಅವರದಾಗಿದೆ. ಇದನ್ನು ಓದಿ : ಪಿಪಿಪಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನೇತೃತ್ವದ ಸಮ್ಮಿಶ್ರ ಸರ್ಕಾರದ ಜಂಟಿ ಅಭ್ಯರ್ಥಿ ಜರ್ದಾರಿ ಅವರು 255 ಮತಗಳನ್ನು ಪಡೆದುಕೊಂಡರೆ, ಇಮ್ರಾನ್ ಖಾನ್ ಬೆಂಬಲಿತ ಸುನ್ನಿ ಇತ್ತೆಹಾದ್ ಕೌನ್ಸಿಲ್ (ಎಸ್‌ಐಸಿ) ಅಭ್ಯರ್ಥಿ ಮಹಮೂದ್ ಖಾನ್ ಅಚಕ್ಜಾಯ್ 119 ಮತಗಳನ್ನು ಪಡೆದುಕೊಂಡರು. ಪಿಪಿಪಿಯ ಹಿರಿಯ ನಾಯಕರಾಗಿರುವ ಆಸಿಫ್‌ ಅಲಿ ಜರ್ದಾರಿ, 2ನೇ ಬಾರಿಗೆ ಅಧ್ಯಕ್ಷ ಹುದ್ದೆ ವಹಿಸಿಕೊಂಡ ಹಿರಿಯ ನಾಗರೀಕ ಎನಿಸಿಕೊಂಡಿದ್ದಾರೆ. ಇದನ್ನು ಓದಿ : ಕಳೆದ ವರ್ಷ ಐದು ವರ್ಷಗಳ ಅವಧಿ ಮುಗಿಸಿರುವ ಡಾ.ಆರಿಫ್ ಅಲ್ವಿ ಅವರ ಸ್ಥಾನವನ್ನು ಅವರು ವಹಿಸಿಕೊಳ್ಳಲಿದ್ದಾರೆ. ಆದರೆ, ಹೊಸ ಸರ್ಕಾರ ಸಂಪೂರ್ಣವಾಗಿ ರಚನೆಯಾಗದ ಕಾರಣ ಅವರು ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಜರ್ದಾರಿ ಅವರು ಪಾಕಿಸ್ತಾನದ ಇತಿಹಾಸದಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ನಾಗರಿಕರಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...