ಭಾರತ ಇಂಡೋನೇಷ್ಯಾ ಸ್ಥಳೀಯ ಕರೆನ್ಸಿ ಬಳಕೆಗೆ ಒಪ್ಪಂದ - : ಸ್ಥಾನೀಯ ಮುದ್ರೆಗಳ ಬಳಕೆಗೆ ಪ್ರೋತ್ಸಾಹಿಸಲು ಭಾರತ ಇಂಡೋನೇಷ್ಯಾ ಇಬ್ಬರ ನಡುವೆ ಇರುವ ದ್ವಿಪಕ್ಷೀಯ ಒಪ್ಪಂದಕ್ಕೆ ಸಂತಕ ಮಾಡಿವೆ : ಭಾರತದ ರಿಸರ್ವ್ ಬ್ಯಾಂಕ್ ಮತ್ತು ಇಂಡೋನೇಷ್ಯಾದ ಬ್ಯಾಂಕ್ ಇಬ್ಬರ ನಡುವೆ ಇರುವ ದ್ವಿಪಕ್ಷೀಯ ಒಪ್ಪಂದ ವಾಣಿಜ್ಯದಲ್ಲಿ ಸ್ಥಾನಿಯ ಮುದ್ರೆಗಳ ಬಳಕೆಯನ್ನು ಪ್ರೋತ್ಸಾಹಿಸಲು ಒಪ್ಪಂದಕ್ಕೆ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಇಂಡೋನೇಷ್ಯಾದ ಗವರ್ನರ್ ಪೆರ್ರಿ ವಾರ್ಜಿಯೋ ಸಹಿ ಹಾಕಿದ್ದಾರೆ. ಭಾರತದ ರೂಪಾಯಿ ಹಾಗೂ ಇಂಡೋನೇಷ್ಯಾ ಕರೆನ್ಸಿ ರೂಪಿಯಕ್ಕೆ ಉತ್ತೇಜನ ನೀಡುವ ಒಪ್ಪಂದ ನೆರವಾಗಲಿದ್ದು, ಈ ಮೂಲಕ ಎರಡು ದೇಶಗಳ ಕರೆನ್ಸಿಗಳು ಬಲಗೊಳ್ಳಲಿವೆ. ಇದನ್ನು ಓದಿ : ರಫ್ತುದಾರರು ಮತ್ತು ಆಮದುದಾರರು ಇನ್ ವಾಯ್ಸ್ ಸೃಷ್ಟಿಸಿ ಸ್ಥಳೀಯ ಕರೆನ್ಸಿಗಳಲ್ಲಿ ಪಾವತಿ ಮಾಡಬಹುದಾಗಿದೆ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ ಎರಡು ದೇಶಗಳ ನಡುವೆ ಚಾರಿತ್ರಿಕ ಸಾಂಸ್ಕೃತಿಕ ಹಾಗೂ ಆರ್ಥಿಕ ಸಂಬಂಧಗಳು ಕಟ್ಟಿಕೊಳ್ಳಲು ನೆರವಾಗುತ್ತದೆ ಮತ್ತು ಉಭಯ ದೇಶಗಳ ನಡುವಿನ ದ್ವಿಪಕ್ಷಿಯ ವಹಿವಾಟುಗಳು ಸುಗಮವಾಗಿ ನಡೆಯುತ್ತವೆ. ಇದರ ಜೊತೆಗೆ ವ್ಯಾಪಾರ ಹಾಗೂ ವಿದೇಶಿ ವಿನಿಮಯ ಮಾರುಕಟ್ಟೆಯ ಬೆಳವಣಿಗೆ ಈ ಮೂಲಕ ಸಹಕಾರಿಯಾಗಲಿದೆ ಎಂದು ತಿಳಿಸಿದೆ. ಇದನ್ನು ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...