: ಪ್ರಪಂಚದ ಯಾವ ದೇಶದಲ್ಲಿ ಅತಿ ಹೆಚ್ಚು ಸಾಸಿವೆ ಎಣ್ಣೆ ಉತ್ಪಾದಿಸಲಾಗುತ್ತದೆ ಗೊತ್ತೇ..?? : ಪ್ರಪಂಚದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಸಾಸಿವೆ ಎಣ್ಣೆಯು ತುಂಬಾನೇ ಮುಖ್ಯ. ಆದರೇ ಯಾವ ದೇಶ ಸಾಸಿವೆ ಎಣ್ಣೆಯ ಉತ್ಪಾದನೆಯಲ್ಲಿ ಹೆಚ್ಚು ಹೆಸರುವಾಸಿಯಾಗಿದೆ ನಿಮಗೆ ಗೊತ್ತೇ? ಇಲ್ಲಿದೆ ಇದರ ಸಂಪೂರ್ಣ ಮಾಹಿತಿ. :ಸಾಸಿವೆ ಎಣ್ಣೆ, ಇದು ಪ್ರತಿ ದೇಶದ ಪ್ರತಿ ಅಡುಗೆ ಮನೆಯಲ್ಲಿಯೂ ಇರುವ ಸಾಮಾನ್ಯವಾದ ವಿಷಯ. ಅದರಲ್ಲಂತೂ ನಮ್ಮ ಭಾರತದ ಪ್ರತಿ ಮನೆಯಲ್ಲಿಯೂ ಅಡುಗೆ ಮನೆಯಲ್ಲಿ ಸಾಸಿವೆ ಎಣ್ಣೆ ಪ್ರಧಾನವಾಗಿದೆ. ಆದರೆ ಸಾಸಿವೆ ಎಣ್ಣೆಯುಯ ಉತ್ಪಾದನೆಯ ವಿಷಯಕ್ಕೆ ಬಂದರೇ, ಭಾರತ 2021ರಲ್ಲಿ ಸಾಸಿವೆ ಉತ್ಪಾದನೆಯನ್ನು ಹೆಚ್ಚಿಸಿದ್ದು, ಇದು ಸರಿಸುಮಾರು 89.5 ಲಕ್ಷ ಟನ್‌ಗಳ ದಾಖಲೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 19.33 ಶೇಕಡಾ ಗಣನೀಯ ಬೆಳವಣಿಗೆಯನ್ನು ಕಾಣಬಹುದು. ಆದರೆ ಜಗತ್ತಿನಲ್ಲಿ ಅತಿ ಹೆಚ್ಚು ಸಾಸಿವೆ ಎಣ್ಣೆಯ ಉತ್ಪಾದಿಸುವುದು ಒಂದು ಸಣ್ಣ ದೇಶ ಮತ್ತು ಅದು ಭಾರತ ಉಪಖಂಡದ ಭಾಗವಾಗಿದೆ. ಹೌದು.. ನಮ್ಮ ನೆರೆಯ ರಾಷ್ಟ್ರ ನೇಪಾಳದಲ್ಲಿ ಅತಿ ಹೆಚ್ಚು ಸಾಸಿವೆ ಎಣ್ಣೆಯನ್ನು ಉತ್ಪಾದಿಸುತ್ತದೆ ಮತ್ತು ಪ್ರಪಂಚದ ಇತರ ಭಾಗಗಳಿಗೆ ಮಾರಾಟ ಮಾಡಲಾಗುತ್ತದೆ. 2021 ರಲ್ಲಿ ನೇಪಾಳದಲ್ಲಿ 220,250 ಟನ್ ಸಾಸಿವೆ ಉತ್ಪಾದಿಸಲಾಗಿದೆ ಹಾಗೂ ಇದು ವಿಶ್ವದ ಅತಿ ಹೆಚ್ಚು ಸಾಸಿವೆ ಉತ್ಪಾದಕ ದೇಶವೆಂದು ಬಿರುದನ್ನು ಸಹ ಪಡೆದಿದೆ. ಪ್ರಪಂಚದಲ್ಲಿ ಉತ್ಪಾದನೆಯಾಗುವ ಒಟ್ಟು ಸಾಸಿವೆಯ 41.3% ಅನ್ನು ನೇಪಾಳ ಮಾತ್ರ ಉತ್ಪಾದಿಸುತ್ತದೆ. ಇಲ್ಲಿಂದ ಭಾರತ, ಪಾಕಿಸ್ತಾನ, ಚೀನಾ ಸೇರಿದಂತೆ ಹಲವು ದೇಶಗಳಿಗೆ ಸಾಸಿವೆ ಎಣ್ಣೆ ಹೋಗುತ್ತದೆ. ಇದನ್ನೂ ಓದಿ: ಸಾಸಿವೆ ಉತ್ಪಾದನೆಗೆ ಸಂಬಂಧಿಸಿದಂತೆ, ರಷ್ಯಾ ಎರಡನೇ ಸ್ಥಾನದಲ್ಲಿದೆ. ರಷ್ಯಾದಲ್ಲಿ ವಾರ್ಷಿಕವಾಗಿ 183,426 ಲಕ್ಷ ಟನ್ ಸಾಸಿವೆ ಉತ್ಪಾದಿಸಲಾಗುತ್ತದೆ. ಯುರೋಪಿನ ಹಲವಾರು ಭಾಗಗಳಿಗೆ ಇಲ್ಲಿಂದ ಸಾಸಿವೆ ಎಣ್ಣೆಯ ಸಾಗಣೆಯನ್ನು ಮಾಡಲಾಗುತ್ತದೆ. ಕೆಲವು ಏಷ್ಯಾದ ರಾಷ್ಟ್ರಗಳು ರಷ್ಯಾದಿಂದ ಸಾಸಿವೆ ಎಣ್ಣೆಯನ್ನು ಖರೀದಿಸುತ್ತವೆ. ಮೂರನೇ ಸ್ಥಾನ ಕೆನಡಾಕ್ಕೆ ಹೋಗುತ್ತದೆ, ಇದು 161,781 ಟನ್ ಸಾಸಿವೆ ಉತ್ಪಾದಿಸುತ್ತದೆ. ತಾಳೆ ಎಣ್ಣೆಯ ಜಾಗತಿಕ ಪೂರೈಕೆದಾರ ಮಲೇಷ್ಯಾ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿ 144,236 ಟನ್ ಸಾಸಿವೆ ಉತ್ಪಾದನೆಯಾಗುತ್ತದೆ. ಯುಎಸ್ಎ, ಚೀನಾ, ಮ್ಯಾನ್ಮಾರ್ ಮತ್ತು ಉಕ್ರೇನ್ ನಂತರದ ಪಟ್ಟಿಯಲ್ಲಿವೆ. ನೇಪಾಳದಲ್ಲಿ, ಸಮುದ್ರ ಚಿಪ್ಪುಗಳ ಪಳೆಯುಳಿಕೆಗಳನ್ನು 3000 ಮೀಟರ್ ಮತ್ತು ಅದಕ್ಕಿಂತ ಹೆಚ್ಚಿನ ಎತ್ತರದಲ್ಲಿ ಕಂಡುಹಿಡಿಯಬಹುದು. ಈ ದೇಶವು ವಿಶ್ವದ ಪರಂಪರೆಯ ಹಲವಾರು ತಾಣಗಳನ್ನು ಹೊಂದಿದೆ, ಅದರಲ್ಲೂ ಕಠ್ಮಂಡು ಮಾತ್ರ 15-ಕಿಲೋಮೀಟರ್ ವ್ಯಾಪ್ತಿಯೊಳಗೆ ಅಂತಹ ಏಳು ತಾಣಗಳನ್ನು ಆಯೋಜಿಸುತ್ತದೆ. ನೇಪಾಳದ 92% ಕ್ಕಿಂತ ಹೆಚ್ಚು ಶಕ್ತಿಯು ಜಲವಿದ್ಯುತ್ ಸ್ಥಾವರಗಳಿಂದ ಮೂಲವಾಗಿದೆ. ಇನ್ನೂ ನೇಪಾಳ ದೇಶವು ಮೌಂಟ್ ಎವರೆಸ್ಟ್‌ಗೆ ಹೆಸರುವಾಸಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...