8ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡುವ ಜರ್ಮನಿ ಗಾಯಕಿಯನ್ನು ಭೇಟಿಯಾದ ಪ್ರಧಾನಿ ಮೋದಿ : 8ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಹಾಡುವ ಜರ್ಮನಿ ಮೂಲದ ಗಾಯಕಿ ಕೆಸೆಂಡ್ರಾ ಮೆ ಸ್ಪಿಟ್ ಮನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ :ಜರ್ಮನಿ ಮೂಲದ ಗಾಯಕಿ ಕೆಸೆಂಡ್ರಾ ಮೆ ಸ್ಪಿಟ್ ಮನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಪಲ್ಲದಮ್ ನಲ್ಲಿ ಅವರನ್ನು ಭೇಟಿಯಾದರು. ಪ್ರಧಾನಿ ಮೋದಿ ಭೇಟಿಯಾದ ಸಂದರ್ಭದಲ್ಲಿ ಕೆಸೆಂಡ್ರಾ ಅವರ ತಾಯಿ ಕೂಡ ಜೊತೆಯಲ್ಲಿದ್ದರು. ಪ್ರಧಾನಿ ಮೋದಿ ಭೇಟಿಯಾದಾಗ ಗಾಯಕಿ 'ಅಚ್ಯುತಂ ಕೇಶವಂ' ಮತ್ತು ತಮಿಳು ಹಾಡನ್ನೊಂದು ಹಾಡಿದ್ದಾರೆ. ಇದನ್ನು ಓದಿ : ಕೆಸೆಂಡ್ರಾ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದು, ಮೋದಿ ಎದುರು ಹಾಡನ್ನು ಹಾಡಿದ್ದಾರೆ. ಗಾಯಕಿ ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಮಲಯಾಳಂ, ತಮಿಳು, ಉರ್ದು, ಆಸ್ಸಾಮಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಹಾಡನ್ನು ಹಾಡಿ ಸಾಮಾಜಿಕ ಜಾಲತಾಣಗಳಲ್ಲಿ ಚಿರಪರಿಚಿತರಾಗಿದ್ದಾರೆ. | - , . ' ' . , , … — (@PTI_News) ಇದನ್ನು ಓದಿ : ಮನ್ ಕಿ ಬಾತ್ ನಲ್ಲಿ ಮೋದಿ ಅವರು ಮಾತನಾಡುವಾಗ ಈ ಗಾಯಕಿ ಬಗ್ಗೆ ತಿಳಿಸಿದ್ದು , ಆಕೆಯದ್ದು ಎಷ್ಟು ಮಧುರ ಧ್ವನಿ ಹಾಡಿನ ಪ್ರತಿ ಪದವು ಭಾವನಾತ್ಮಕವಾಗಿದೆ ದೇವರಲ್ಲಿ ಇರುವ ಭಕ್ತಿಯನ್ನ ಆಕೆಯ ಹಾಡಿನಲ್ಲಿ ಕಾಣಬಹುದು ಈ ಮಧುರ ಧ್ವನಿಯು ಜರ್ಮನಿಯ ಮಗಳದ್ದು ಎಂದು ನಾನು ಬಹಿರಂಗಪಡಿಸಿದರೆ ಬಹುಶಃ ನೀವು ಇನ್ನಷ್ಟು ಆಶ್ಚರ್ಯ ಪಡುತ್ತಿರಿ ಈ ಮಗಳ ಹೆಸರು ಕೆಸೆಂಡ್ರಾ ಮೆ ಸ್ಪಿಟ್ ಮನ್ ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...