ನಾಳೆಯಿಂದ ಅಬುದಾಬಿಯಲ್ಲಿ 13ನೇ ಸಚಿವರ ಸಭೆ : ವಿಶ್ವ ವ್ಯಾಪಾರ ಸಂಘಟನೆಯ 13ನೇ ಸಚಿವರ ಸಭೆ ನಾಳೆಯಿಂದ ಅಬುದಾಬಿಯಲ್ಲಿ ಆರಂಭವಾಗಲಿದೆ 13th :ನಾಳೆಯಿಂದ (ಫೆಬ್ರವರಿ 26) ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಬುದಾಬಿಯಲ್ಲಿ ವಿಶ್ವ ವ್ಯಾಪಾರ ಸಂಘಟನೆಯ 13ನೇ ಸಚಿವರ ಸಭೆ ಆರಂಭವಾಗಲಿದ್ದು, ಈ ಸಭೆಯಲ್ಲಿ ಭಾರತೀಯ ನಿಯೋಗವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ನೇತೃತ್ವ ವಹಿಸಲಿದ್ದಾರೆ. ಸಭೆಯಲ್ಲಿ ಭಾರತವು ಮೀನುಗಾರಿಕೆ ಸಬ್ಸಿಡಿಗಳು, ಕೃಷಿ ಸುಧಾರಣೆಗಳು, ಆಹಾರ ಭದ್ರತೆ, ವಿವಾದಗಳ ಇತ್ಯರ್ಥ ಸೇರಿದಂತೆ ವಿವಿಧ ವಿಷಯಗಳಿಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯುವುದರ ಕುರಿತು ಪ್ರಸ್ತಾಪ ಮಾಡಲಿದೆ. ಇದನ್ನು ಓದಿ : ಆಹಾರ ಭದ್ರತೆಗಾಗಿ ಸರ್ಕಾರವು ಧಾನ್ಯ ಸಂಗ್ರಹಿಸಿ ಇರಿಸುವ ವಿಚಾರ ಹಾಗೂ ಮೀನುಗಾರರ ಹಿತರಕ್ಷಣೆಯಂತಹ ವಿಚಾರಗಳಿಗೆ ಖಾಯಂ ಪರಿಹಾರ ಕಂಡುಕೊಳ್ಳಬೇಕು ಎಂದು ಭಾರತವು ಒತ್ತಾಯಿಸಲಿದೆ. ಅಲ್ಲದೆ ಚೀನಾ ಮುಂದಿಟ್ಟಿರುವ ಹೂಡಿಕೆ ಉತ್ತೇಜನ ಒಪ್ಪಂದ ಪ್ರಸ್ತಾವವನ್ನು ಭಾರತವು ಸಭೆಯಲ್ಲಿ ವಿರೋಧಿಸಲಿದೆ. ಇದನ್ನು ಓದಿ : ಉಕ್ರೇನ್ - ರಷ್ಯಾ ಯುದ್ಧ ಮತ್ತು ಇಸ್ರೇಲ್ ಹಮಾಸ್ ನಲ್ಲಿನ ಸಂಘರ್ಷದಿಂದಾಗಿ ಉಂಟಾಗಿರುವ ಅನಿಶ್ಚಿತ ಜಾಗತಿಕ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಶ್ವ ವ್ಯಾಪಾರ ಸಂಘಟನೆಯ 164 ಸದಸ್ಯ ರಾಷ್ಟ್ರಗಳ ಸಚಿವರು ಈ ಸಭೆಯಲ್ಲಿ ಸೇರಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...