ಕರ್ನಾಟಕ ಮತ್ತು ಜಪಾನ್ ಬಾಂಧವ್ಯ ಪ್ರವರ್ಧಮಾನಕ್ಕೆ ಇಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ಶುಕ್ರವಾರ ಸಂಜೆ ಜರುಗಿದ ಜಪಾನ್ ದೇಶದ ‘ರಾಷ್ಟ್ರೀಯ ದಿನಾಚರಣೆ’ ಹಾಗೂ ಆ ದೇಶದ ಚಕ್ರವರ್ತಿ ಶ್ರೀ ನರುಹಿಟೋ ಅವರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಸಚಿವ ಎಂ.ಬಿ.ಪಾಟೀಲ್ ಶುಭಾಶಯ ಕೋರಿದರು. ಬೆಂಗಳೂರು:ಇಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ಶುಕ್ರವಾರ ಸಂಜೆ ಜರುಗಿದ ಜಪಾನ್ ದೇಶದ ‘ರಾಷ್ಟ್ರೀಯ ದಿನಾಚರಣೆ’ ಹಾಗೂ ಆ ದೇಶದ ಚಕ್ರವರ್ತಿ ಶ್ರೀ ನರುಹಿಟೋ ಅವರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಸಚಿವ ಎಂ.ಬಿ.ಪಾಟೀಲ್ ಶುಭಾಶಯ ಕೋರಿದರು. ಕರ್ನಾಟಕ ಮತ್ತು ಜಪಾನ್ ಬಾಂಧವ್ಯ ಪ್ರವರ್ಧಮಾನಕ್ಕೆ ಬರುತ್ತಿದ್ದು, ಟೊಯೋಟಾ, ಹಿಟಾಚಿ ಮತ್ತು ಹೋಂಡಾದಂತಹ 525 ಕ್ಕೂ ಹೆಚ್ಚು ಕಂಪನಿಗಳು ಹೂಡಿಕೆ ಮಾಡಿ, ನಮ್ಮ ರಾಜ್ಯವನ್ನು ದೇಶದಲ್ಲೇ ನಂ.1 ಸ್ಥಾನಕ್ಕೆ ಏರಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಇದನ್ನೂ ಓದಿ: ತುಮಕೂರು ಬಳಿ ಜಪಾನಿಸ್ ಟೌನ್ ಶಿಪ್ ನಿರ್ಮಾಣ, ಜಪಾನ್ – ಇಂಡಿಯಾ ಸ್ಟಾರ್ಟಪ್ ಹಬ್, ಕ್ಲೀನ್ ಮೊಬಿಲಿಟಿ ನೀತಿ ಮುಂತಾದ ಉಪಕ್ರಮಗಳು ಉಭಯ ರಾಷ್ಟ್ರಗಳ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಿವೆ. ಕಾರ್ಯಕ್ರಮದಲ್ಲಿ ಭಾರತದಲ್ಲಿನ ಜಪಾನ್ ಕಾನ್ಸೋಲ್ ಜನರಲ್ ಶ್ರೀಹಾಗೂ ಅಧಿಕಾರಿಗಳ ವರ್ಗ, ಉದ್ಯಮಿಗಳು, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಸೆಲ್ವಕುಮಾರ್, ಇಲಾಖೆಯ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...