ದುಬೈ ವಿಮಾನ ನಿಲ್ದಾಣ : ಈ ಮೂಲಕ ಸಂಚರಿಸಿದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತೀಯರೇ ಅಗ್ರಸ್ಥಾನದಲ್ಲಿ : ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅತಿ ಹೆಚ್ಚು ಸಂಚರಿಸಿದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತೀಯರೇ ಹೆಚ್ಚಿನವರಿದ್ದಾರೆ ಎಂದು ವಿಮಾನ ನಿಲ್ದಾಣ ಪ್ರಕಟಣೆಯಲ್ಲಿ ತಿಳಿಸಿದೆ. :ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಂಚರಿಸಿದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತೀಯರು ಅಗ್ರಸ್ಥಾನದಲ್ಲಿದ್ದಾರೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ. 2023ರಲ್ಲಿ ದುಬೈ ಅಂತರಾಷ್ಟ್ರೀಯ ನಿಲ್ದಾಣದ ಮೂಲಕ ಒಟ್ಟು ಸಂಚರಿಸಿದ ಪ್ರಯಾಣಿಕರ ಸಂಖ್ಯೆ 8.69 ಕೋಟಿ, ಈ ಪ್ರಯಾಣಿಕರಲ್ಲಿ 1.19 ಕೋಟಿಯಷ್ಟು ಜನ ಭಾರತೀಯರಾಗಿದ್ದಾರೆ ಎಂದು ವಿಮಾನ ನಿಲ್ದಾಣ ಸೋಮವಾರ ಬಿಡುಗಡೆಗೊಳಿಸಿದ ಪ್ರಕಟಣೆಯ ಅಂಕಿ ಅಂಶ ತಿಳಿಸಿದೆ. ಇದನ್ನು ಓದಿ : ಈ ಅಂಕಿ ಅಂಶದಲ್ಲಿ ಸೌದಿ ಅರೇಬಿಯಾ 67 ಲಕ್ಷ ಪ್ರಯಾಣಿಕರು, ಬ್ರಿಟನ್ 59 ಲಕ್ಷ , ಪಾಕಿಸ್ತಾನ42 ಲಕ್ಷ, ಅಮೆರಿಕ 36 ಲಕ್ಷ, ರಷ್ಯಾ 25 ಲಕ್ಷ, ಜರ್ಮನಿ 25 ಲಕ್ಷ ಭಾರತ ನಂತರದ ಸ್ಥಾನಗಳನ್ನು ಈ ದೇಶಗಳು ಹೊಂದಿವೆ. ಇದನ್ನು ಓದಿ : ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 104 ದೇಶಗಳಿಗೆ, ಮತ್ತು ಆದೇಶಗಳ 262 ತಾಣಗಳಿಗೆ ಈ ವಿಮಾನ ನಿಲ್ದಾಣ ಸಂಪರ್ಕವನ್ನು ಕಲ್ಪಿಸಿ ಕೊಡುತ್ತದೆ ಮತ್ತು ಒಟ್ಟು 102 ವಿಮಾನಯಾನ ಕಂಪನಿಗಳು ಕಾರ್ಯಾಚರಿಸುತ್ತವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...