ಗಾಜಾ ಪಟ್ಟಿಯ ರಫಾ ನಗರವನ್ನು ಆಕ್ರಮಿಸಲಾಗುವುದು : ಇಸ್ರೇಲ್ ಬೆದರಿಕೆ : ಗಾಜಾಪಟ್ಟಿಯ ರಫಸ್ ನಗರವನ್ನು ಆಕ್ರಮಿಸಲಾಗುವುದು ಎಂದು ಇಸ್ರೇಲ್ ಹಮಾಸ್ ಬಂಡುಕೋರರಿಗೆ ಬೆದರಿಕೆ ಹಾಕಿದೆ. :ಹಮಾಸ್ ಬಂಡುಕೋರರು ತಮ್ಮ ವಶದಲ್ಲಿರುವ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ, ರಂಜಾನ್ ತಿಂಗಳ ಆರಂಭದ ಸಂದರ್ಭದಲ್ಲಿ ಗಾಜಾ ಪಟ್ಟಿಯ ರಫಾ ನಗರವನ್ನು ಆಕ್ರಮಿಸಲಾಗುವುದು ಎಂದು ಇಸ್ರೇಲ್ ಬೆದರಿಕೆ ಹಾಕಿದೆ. ಕದನ ವಿರಾಮದ ಸಂದರ್ಭದಲ್ಲಿ ನಡೆದ ಮಾತುಕತೆಗಳು ನಿರೀಕ್ಷಿತ ಫಲವನ್ನು ನೀಡಿಲ್ಲ ಮತ್ತು ಇಸ್ರೇಲ್ ಬೆದರಿಕೆ ಹಾಕಿದ ಬೆನ್ನಲ್ಲೇ ವಿಶ್ವಸಂಸ್ಥೆ, ಅಮೆರಿಕ ಹಾಗೂ ಅನೇಕ ದೇಶಗಳು ರಫಾ ಮೇಲೆ ಆಕ್ರಮಣ ಮಾಡುವ ನಿರ್ಧಾರವನ್ನು ಕೈ ಬಿಡಬೇಕು ಎಂದು ಇಸ್ರೇಲ್ಗೆ ಮನವಿ ಮಾಡಿಕೊಂಡಿವೆ. ಇದನ್ನು ಓದಿ : ರಫಾ ನಗರದಲ್ಲಿ ಆಶ್ರಯ ಪಡೆದಿರುವ ಪ್ಯಾಲೆಸ್ಟೀನ್ ನಾಗರಿಕರ ರಕ್ಷಣೆ ಕುರಿತು ಇಸ್ರೇಲ್ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಇದ್ದರು ಈ ಬೆದರಿಕೆಯನ್ನು ಇಸ್ರೇಲ್ ಹಮಾಸ್ ಮೇಲೆ ಹಾಕಿದೆ. ಇದನ್ನು ಓದಿ : ಹಮಾಸ್ ಬಂಡುಕೋರರು ಶರಣಾಗಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ, ಗಾಜಾ ದ ಜನರು ರಂಜಾನ್ ಮಾಸವನ್ನು ಆಚರಣೆ ಮಾಡುವ ಅವಕಾಶವಿದೆ ಎಂದಿದ್ದಾರೆ ಮತ್ತು ಇಲ್ಲದಿದ್ದರೆ ರಫಾ ಸೇರಿದಂತೆ ಎಲ್ಲ ಕಡೆಯೂ ಆಕ್ರಮಣ ನಡೆಸಬೇಕಾಗುತ್ತದೆ ಎಂದು ಸೇನೆಯ ನಿವೃತ್ತ ಮುಖ್ಯಸ್ಥ ಬೆನ್ನಿ ಗ್ಯಾಂಟ್ಜ್ ಅವರು ಭಾನುವಾರ ಜರುಸಲೆಂನಲ್ಲಿ ನಡೆದ ಅಮೆರಿಕನ್ ಯಹೂದಿ ನಾಯಕರ ಸಮ್ಮೇಳನದಲ್ಲಿ ಹೇಳಿದರು ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಆರಂಭವಾದ ಬಳಿಕ ಮೃತಪಟ್ಟ ಪ್ಯಾಲೆಸ್ ಇನ್ ಪ್ರಜೆಗಳ ಸಂಖ್ಯೆ 29, 092ಕ್ಕೆ ತಲುಪಿದೆ ಎಂದು ಗಾಜಾದಲ್ಲಿನ ಆರೋಗ್ಯ ಸಚಿವಾಲಯ ಇಂದು (ಫೆ.19) ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...