: ಕಂಠಪೂರ್ತಿ ಕುಡಿದು ದೃಷ್ಟಿ ಕಳೆದುಕೊಂಡ ಕುಡುಕ! : ನಿರಂತರವಾಗಿ ಗಂಟೆಗಟ್ಟಲೇ ಎಣ್ಣೆ ಕುಡಿದ ಪರಿಣಾಮ ಕಣ್ಣುಗಳ ಮೇಲೆ ವಿಪರೀತ ಒತ್ತಡ ಬಿದ್ದು, ರಕ್ತದ ಕೊರತೆ ಉಂಟಾಗಿದೆ. ಹೀಗಾಗಿ ಕಣ್ಣುಗಳು ಚಲನೆ ಕಳೆದುಕೊಂಡು, ಆ ವ್ಯಕ್ತಿ ದೃಷ್ಟಿಹೀನನಾಗಿದ್ದಾನೆ ಅಂತಾ ವೈದ್ಯರು ಹೇಳಿದ್ದಾರೆ. ನವದೆಹಲಿ:ಇದು ಕುಡುಕರಿಗೆ ವಾರ್ನಿಂಗ್‌ ನೀಡುವ ಸುದ್ದಿ. ಕಂಠಪೂರ್ತಿ ಕುಡಿದು ತೂರಾಡುತ್ತಾ ಮನೆಗೆ ಬರುವ ಕುಡುಕರು ಕಡ್ಡಾಯವಾಗಿ ಈ ಸುದ್ದಿ ಓದಲೇಬೇಕು. ನಾನು ಎಷ್ಟು ಬೇಕಾದ್ರೂ ಡ್ರಿಂಗ್ಸ್‌ ಮಾಡ್ತೀನಿ ಅನ್ನೋ ಕುಡುಕರು ಇನ್ಮುಂದೆ ಹಾಗೆ ಮಾಡುವಂತಿಲ್ಲ. ಯಾಕೆಂದ್ರೆ ಕಂಠಪೂರ್ತಿ ಕುಡಿದು ವ್ಯಕ್ತಿಯೊಬ್ಬ ತನ್ನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ. ಹೌದು, ಈ ಸುದ್ದಿಯನ್ನು ನೀವು ನಂಬಲೇಬೇಕು! ವ್ಯಕ್ತಿಯೊಬ್ಬನಲ್ಲಿ ಗಂಟೆಗಟ್ಟಲೇ ಕುಳಿತು ಕಂಠಪೂರ್ತಿ ಮದ್ಯ ಸೇವಿಸಿದ್ದಾನೆ. ಬಳಿಕ ಹೊಟ್ಟೆ ಕೆಳಗೆ ಮಾಡಿಕೊಂಡು ಮಲಗಿ ಬೆಳಗ್ಗೆ ಏಳುವಷ್ಟರಲ್ಲಿ ತನ್ನ ಒಂದು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ! ಇದನ್ನೂ ಓದಿ: ಈ ಆಘಾತಕಾರಿ ಘಟನೆ ನಡೆದಿರುವುದು ಚೀನಾದ ತೈವಾನ್‌ನಲ್ಲಿ. ಕಂಠಪೂರ್ತಿ ಕುಡಿದು ಹೊಟ್ಟೆ ಕೆಳಗೆ ಮಾಡಿಕೊಂಡ ಮಲಗಿದ್ದ 44 ವರ್ಷದ ವ್ಯಕ್ತಿಯೊಬ್ಬ ಕಣ್ಣಿನ ಬಾಧೆ ತಾಳಲಾರದೆ ನೇತ್ರ ತಜ್ಞರನ್ನು ಸಂದರ್ಶಿಸಿದ್ದಾನೆ. ನಿರಂತರವಾಗಿ ಗಂಟೆಗಟ್ಟಲೇ ಎಣ್ಣೆ ಕುಡಿದ ಪರಿಣಾಮ ಕಣ್ಣುಗಳ ಮೇಲೆ ವಿಪರೀತ ಒತ್ತಡ ಬಿದ್ದು, ರಕ್ತದ ಕೊರತೆ ಉಂಟಾಗಿದೆ. ಹೀಗಾಗಿ ಕಣ್ಣುಗಳು ಚಲನೆ ಕಳೆದುಕೊಂಡು, ಆ ವ್ಯಕ್ತಿ ದೃಷ್ಟಿಹೀನನಾಗಿದ್ದಾನೆ ಅಂತಾ ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಈ ಸುದ್ದಿ ಓದಿದ ಮೇಲೆಕುಡಿಯುವ ವ್ಯಕ್ತಿಗಳು ಎಣ್ಣೆ ಕುಡಿಯಬೇಕಾದರೆ ೧೦ ಸಾರಿ ಯೋಚಿಸಬೇಕು. ಇಲ್ಲಾ ಅಂದ್ರೆ ಕುಡಿತದ ಚಟಕ್ಕೆ ದಾಸರಾಗಿ ಜೀವವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...