ಪರಸ್ಪರ ಕೈ ಹಿಡಿದುಕೊಂಡೇ ಕೊನೆಯುಸಿರೆಳೆದ ಡಚ್ ಮಾಜಿ ಪ್ರಧಾನಿ ಹಾಗೂ ಪತ್ನಿ : 93 ವರ್ಷದ ಡ್ರೈಸ್ ವ್ಯಾನ್ ಆಗ್ಟ್ ಹಾಗೂ ಅವರ ಪತ್ನಿ ಯುಜೆನಿ ದಯಾಮರಣಕ್ಕೆ ಅನುಮತಿ ಕೋರಿದ್ದರು. ಈ ಮನವಿಗೆ ಅನುಮತಿ ಸಿಕ್ಕಿತ್ತು. ನೆದರ್ಲ್ಯಾಂಡ್:ಡಚ್ ಮಾಜಿ ಪ್ರಧಾನಿ ಡ್ರೈಸ್ ವ್ಯಾನ್ ಆಗ್ಟ್ ಮತ್ತು ಅವರ ಪತ್ನಿ ವಿಧಿವಾಶರಾಗಿದ್ದಾರೆ. 93 ವರ್ಷ ವಯಸ್ಸಿನ ಈ ದಂಪತಿ ಪರಸ್ಪರ ಕೈ ಹಿಡಿದುಕೊಂಡೇ ಕೊನೆಯುಸಿರೆಳೆದಿದ್ದಾರೆ. 93 ವರ್ಷದ ಡ್ರೈಸ್ ವ್ಯಾನ್ ಆಗ್ಟ್ ಹಾಗೂ ಅವರ ಪತ್ನಿ ಯುಜೆನಿ ದಯಾಮರಣಕ್ಕೆ ಅನುಮತಿ ಕೋರಿದ್ದರು. ಈ ಮನವಿಗೆ ಅನುಮತಿ ಸಿಕ್ಕಿತ್ತು. ಈ ಹಿನ್ನೆಲೆ ಇಬ್ಬರೂ ದಯಾಮರಣದ ಮೂಲಕ ವಿಧಿವಶರಾಗಿದ್ದಾರೆ. ತಮ್ಮ ಹುಟ್ಟೂರಾದ ನಿಜ್ಮೆಗನ್‌ನಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ: ಆಗ್ಟ್ ಮತ್ತು ಪತ್ನಿ ಇಬ್ಬರೂ ಸಾವಿಗೂ ಮುನ್ನ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ರೈಟ್ಸ್ ಫಾರಂ ಸಂಸ್ಥೆ ಈಗ ಈ ಹಿರಿಯ ದಂಪತಿ ನಿಧನದ ವಿಚಾರವನ್ನು ಅಧಿಕೃತಪಡಿಸಿದೆ. ಫೆಬ್ರವರಿ 5 ರಂದು ಇಹಲೋಕ ತ್ಯಜಿಸಿದ್ದಾರೆ. ಡ್ರೈಸ್ ವ್ಯಾನ್ ಆಗ್ಟ್ 1977ರಿಂದ 1982ರವರೆಗೆ ನೆದರ್ಲ್ಯಾಂಡ್‌ ಪ್ರಧಾನ ಮಂತ್ರಿಯಾಗಿದ್ದರು. ಪ್ರಧಾನಿಯಾದ ಸಮಯದಲ್ಲಿ ಅಲ್ಲಿನ ಕ್ರಿಶ್ಚಿಯನ್ ಡೆಮಾಕ್ರಟಿಕ್ ಅಪೀಲ್ ಪಕ್ಷದ ಸ್ಥಾಪಕ ನಾಯಕರಾದರು. ತಮ್ಮ ಅಧಿಕಾರದ ನಂತರವೂ ಅವರು ತಮ್ಮ ರಾಜಕೀಯ ನಿಲುವುಗಳಿಗೆ ಬದ್ಧರಾಗಿ ಪ್ರಬುದ್ಧ ನಾಯಕ ಎಂದೇ ಪ್ರಸಿದ್ಧರಾದರು. 2009ರಲ್ಲಿ ಇವರು ದಿ ರೈಟ್ಸ್ ಫೋರಮ್ ಎಂಬ ಸಂಸ್ಥೆ ಸ್ಥಾಪಿಸಿದರು. ದಿ ರೈಟ್ಸ್ ಫೋರಮ್ ಸಂಸ್ಥೆ ಪ್ಯಾಲೇಸ್ಟಿನಿಯನ್ ಹಕ್ಕುಗಳಿಗಾಗಿ ಹೋರಾಡಲು ಮೀಸಲಾಗಿತ್ತು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...