ಮಾಲ್ಡೀವ್ಸ್ ನಿಂದ ವೀಸಾ ನಿಯಮ ಉಲ್ಲಂಘನೆ, ಮಾದಕ ವಸ್ತು ಅಕ್ರಮ ಮಾರಾಟ ಸಂಬಂಧಿಸಿ 43 ಭಾರತೀಯರ ಗಡಿಪಾರು : ಮಾಲ್ಡೀವ್ಸ್ ನಿಂದ 186 ವಿದೇಶಯರನ್ನು ಗಡಿಪಾರು ಮಾಡಿದ್ದು, ಅದರಲ್ಲಿ 43 ಮಂದಿ ಭಾರತೀಯರನ್ನು ಗಡಿಪಾರು ಮಾಡಲಾಗಿದೆ ಎಂದು ಮಾಲ್ಡೀವ್ಸ್ ನ ಮಾಧ್ಯಮವೊಂದು ವರದಿ ಮಾಡಿದೆ. 43 :ವೀಸಾ ನಿಯಮ ಉಲ್ಲಂಘನೆ ಮಾದಕ ವಸ್ತು ಅಕ್ರಮ ಮಾರಾಟದಂತಹ ಆರೋಪಗಳಿಗೆ ಸಂಬಂಧಿಸಿದ ಆರು ವಿದೇಶಿಯರನ್ನು ಗಡಿಪಾರು ಮಾಡಿದೆ ಅದರಲ್ಲಿ 43 ಮಂದಿ ಭಾರತೀಯರಿದ್ದಾರೆ ಎಂದು ಅಲ್ಲಿಯ ಮಾಧ್ಯಮ ಒಂದು ತನ್ನ ವರದಿಯಲ್ಲಿ ತಿಳಿಸಿದೆ. ಗಡಿಪಾರು ಮಾಡಿರುವ ದಿನಾಂಕ ಇನ್ನು ಸ್ಪಷ್ಟವಾಗಿಲ್ಲ. ಆದರೆ ಗಡಿಪಾರು ಆದವರಲ್ಲಿ ಹೆಚ್ಚಿನವರು ಬಾಂಗ್ಲಾದೇಶಿಯರು(83), ಭಾರತ(43), ಶ್ರೀಲಂಕಾ(25) ನೇಪಾಳ (10) ಇದ್ದಾರೆ ಎಂದು ಅಧಾದು ಮಾಧ್ಯಮ ವರದಿ ಮಾಡಿದೆ. ವಿವಿಧ ಹೆಸರುಗಳಲ್ಲಿ ಅಕ್ರಮವಾಗಿ ನಡೆಸಲಾಗುತ್ತಿರುವ ವ್ಯಾಪಾರಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಉದ್ದೇಶದೊಂದಿಗೆ ಭದ್ರತಾ ಸಚಿವಾಲಯ ಮತ್ತು ಅರ್ಥ ಸಚಿವಾಲಯ ಜಂಟಿಯಾಗಿ ಕೆಲಸ ಮಾಡುತ್ತಿದೆ, ಈ ಕುರಿತು ಮಾಲ್ಡಿವ್ಸ್ ಆಂತರಿಕ ಭದ್ರತಾ ಸಚಿವ ಅಲಿ ಇಹುಸನ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಇದನ್ನು ಓದಿ : ಸಮರ್ಪಕವಾದ ದಾಖಲೆಗಳು ಮತ್ತು ಪಾಸ್ಪೋರ್ಟ್ ಹೊಂದಿರುವ ಆರೋಪಿಗಳನ್ನು ಗಡಿಪಾರು ಮಾಡಲಾಗಿದೆ ಮತ್ತು ವಿದೇಶಿಗರು ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆಯೇ ಎಂದು ತಿಳಿಯಲು ಹಲವಾರು ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದು ಅಲ್ಲಿಯ ವಲಸೆ ನಿಯಂತ್ರಕ ಶಮಾನ್ ವಹೀದ್ ತಿಳಿಸಿದ್ದಾರೆ. ಯಾವುದೇ ನಿರ್ದಿಷ್ಟ ವರ್ಗವನ್ನು ಗುರಿ ಮಾಡುವ ಉದ್ದೇಶ ಈ ದಾಳಿಗಳು ನಡೆಸುತ್ತಿಲ್ಲ ಮತ್ತು ಪೊಲೀಸ್ ಇಲಾಖೆಯು ವಾರದಲ್ಲಿ ಎರಡರಿಂದ ಮೂರು ದಿನಗಳ ಕಾಲ ದಾಳಿ ನಡೆಸುತ್ತಿದ್ದು, ಅಕ್ರಮ ವ್ಯವಹಾರಗಳನ್ನು ಪತ್ತೆ ಮಾಡುವ ಉದ್ದೇಶವನ್ನು ಇದು ಹೊಂದಿದೆ ಎಂದು ತಿಳಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...