ಅಬುಧಾಬಿಯಲ್ಲಿ ಸ್ವಾಮಿ ನಾರಾಯಣ ದೇಗುಲವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ : ಅಬುಧಾಬಿಯಲ್ಲಿ ನಿರ್ಮಾಣಗೊಂಡಿದ್ದ ಬಿಎಪಿಎಸ್ ಸ್ವಾಮಿ ನಾರಾಯಣ ದೇವಾಲಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು (ಫೆ.೧೪ರಂದು) ಉದ್ಘಾಟಿಸಿದ್ದಾರೆ. :: ಅಬುಧಾಬಿಯಲ್ಲಿ ಹಿಂದೂ ದೇವಾಲಯ ಉದ್ಘಾಟನೆಯಾಗಿದೆ. ಹಿಂದೂ ದೇವಾಲಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು (ಫೆ.14ರಂದು) ಉದ್ಘಾಟಿಸಿದ್ದಾರೆ. 27 ಎಕರೆ ಜಾಗದಲ್ಲಿ ತಲೆಯೆತ್ತಿರುವ ಬೃಹತ್ ದೇಗುಲಕ್ಕೆ ಬರೋಬ್ಬರಿ 700 ಕೋಟಿ ರೂಪಾಯಿ ವೆಚ್ಚವಾಗಿದೆ.ಏಷ್ಯಾದ ಅತೀ ದೊಡ್ಡ ಹಿಂದೂ ದೇವಾಲಯ ಎಂಬ ಖ್ಯಾತಿಯೂ ಬಿಎಪಿಎಸ್ ಸ್ವಾಮಿ ನಾರಾಯಣ ದೇಗುಲಕ್ಕೆ ಸಿಕ್ಕಿದೆ ಮತ್ತು ವಿಶ್ವದ 3ನೇ ಅತಿದೊಡ್ಡ ಹಿಂದೂ ದೇಗುಲವ ಎಂಬ ಖ್ಯಾತಿಯೂ ಇದಕ್ಕಿದೆ. ಇದನ್ನು ಓದಿ : ಪ್ರಧಾನಿ ನರೇಂದ್ರ ಮೋದಿ ಇದೀಗ ದೇಗುಲ ಉದ್ಘಾಟಿಸಿದ್ದು, ಈ ಅಪರೂಪದ ಕ್ಷಣವನ್ನು ಯುಎಇಯಲ್ಲಿರುವ ಅಸಂಖ್ಯಾತ ಹಿಂದೂಗಳು ಕಣ್ತುಂಬಿಕೊಂಡರು. ಈ ವೇಳೆ ಸ್ವಾಮೀಜಿಗಳು, ಪಾದ್ರಿ, ಮುಸ್ಲಿಂ ಮೌಲ್ವಿಗಳು ಸೇರಿದಂತೆ ಹಲವು ಧರ್ಮಗಳ ಗುರುಗಳು ಜೊತೆಯಿದ್ದರು. ದೇಗುಲಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಸ್ವಾಮಿ ನಾರಾಯಣ ಪಾದದ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಕೆಲ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿ, ಈ ಅದ್ಭುತ ದೇಗುಲವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಜಲಾಭಿಷೇಕ ಮಾಡುವ ಮೂಲಕ ಈ ದೇಗುಲವನ್ನು ಉಧ್ಘಾಟನೆ ನಡೆಯಿತು. ಇದನ್ನು ಓದಿ : ಧರ್ಮ ಸಾಮರಸ್ಯದ ಅದ್ಭುತ ಕ್ಷಣಕ್ಕೆ ಅಬುಧಾಬಿಯ ಈ ದೇಗುಲ ಸಾಕ್ಷಿಯಾಗಿದ್ದು, ಈ ವೇಳೆ ಬಿಎಎಸ್‌ಪಿ ಸ್ವಾಮಿ ನಾರಾಯಣ ಸಂಸ್ಥೆ ಮುಖ್ಯಸ್ಥರು, ಹಿಂದೂ ಧರ್ಮದ ಗುರುಗಳು, ಮುಸ್ಲಿಂ ಮೌಲ್ವಿಗಳು, ಕ್ರಿಶ್ಚಿಯನ್ ಧರ್ಮದ ಪಾದ್ರಿಗಳು ಸೇರಿದಂತೆ ವಿವಿಧ ಧರ್ಮಗಳ ಮುಖಂಡರು ಪ್ರಧಾನಿ ಮೋದಿಯವರಿಗೆ ಇದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...