: 23 ಕೋಟಿ ಆಸ್ತಿಯನ್ನು ನಾಯಿ-ಬೆಕ್ಕಿನ ಹೆಸರಿಗೆ ಬರೆದ ವೃದ್ಧೆ! : ತನ್ನ ಮಕ್ಕಳು ತನ್ನನ್ನು ನಿರ್ಲಕ್ಷ್ಯಿಸಿದ್ದಾರೆಂಬ ಸಿಟ್ಟಿನಲ್ಲಿ ಶಾಂಘೈ ಮೂಲದ ಲಿಯು, ತನ್ನ ಹೆಸರಿನಲ್ಲಿದ್ದ ಮನೆ, ಹಣ ಸೇರಿದಂತೆ ಎಲ್ಲಾ ಆಸ್ತಿಯನ್ನು ತಾನು ಪ್ರೀತಿಯಿಂದ ಸಾಕಿದ್ದ ನಾಯಿ ಮತ್ತು ಬೆಕ್ಕಿನ ಹೆಸರಿಗೆ ಬರೆದಿದ್ದಾರೆ. ನವದೆಹಲಿ:ತನ್ನನ್ನು ತಿರಸ್ಕಾರದಿಂದ ನೋಡುತ್ತಿದ್ದ ಮಕ್ಕಳಿಗೆ ಪಾಠ ಕಲಿಸಲು ಮಹಿಳೆಯೊಬ್ಬರು ತಮ್ಮ 28 ಕೋಟಿ(2.8 ಮಿಲಿಯನ್ ಡಾಲರ್) ರೂ. ಮೌಲ್ಯದ ಆಸ್ತಿಯನ್ನು ಮಕ್ಕಳ ಬದಲಿಗೆ ತನ್ನ ಸಾಕುಪ್ರಾಣಿಗಳ ಹೆಸರಿಗೆ ಬರೆದಿರುವ ವಿಚಿತ್ರ ಘಟನೆ ನಡೆದಿದೆ. ವರದಿಗಳ ಪ್ರಕಾರ, ಈ ಘಟನೆ ಚೀನಾದಲ್ಲಿ ನಡೆದಿದೆ. ಹೌದು, ಅನಾರೋಗ್ಯಕ್ಕೆ ತುತ್ತಾಗಿದ್ದ ಲಿಯು ಎಂಬ ಮಹಿಳೆ, ಮಕ್ಕಳು ಒಮ್ಮೆಯೂ ತನ್ನ ಆರೋಗ್ಯ ವಿಚಾರಿಸಲು ಬಂದಿಲ್ಲವೆಂದು ಕೋಪಗೊಂಡು ಬರೋಬ್ಬರಿ 28 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪ್ರೀತಿಯಿಂದ ಸಾಕಿದ್ದ ನಾಯಿ ಮತ್ತು ಬೆಕ್ಕಿನ ಹೆಸರಿಗೆ ಬರೆದಿದ್ದಾರೆ. ಕ್ಕೆ ತುತ್ತಾದರೂ ಸಹ ಲಿಯುವನ್ನು ನೋಡಲು ಆಕೆಯ ಮಕ್ಕಳು ಒಮ್ಮೆಯೂ ಬಂದಿರಲಿಲ್ಲ. ಇದರಿಂದ ಕೋಪಗೊಂಡ ಆಕೆ ತನ್ನ ಆಸ್ತಿಯನ್ನೆಲ್ಲಾ ಸಾಕುಪ್ರಾಣಿಗಳ ಪರವಾಗಿ ವಿಲ್ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಈ ವೃದ್ಧ ಮಹಿಳೆ ತನ್ನ ವಯಸ್ಕ ಮಕ್ಕಳಿಗೆ 23 ಕೋಟಿ ರೂ. ವಿಲ್ ಮಾಡಿದ್ದರಂತೆ. ಆದರೆ ಆಕೆ ಅನಾರೋಗ್ಯದಿಂದ ಬಳಲುತ್ತಿದ್ದಾಗ ಆಕೆಯ ಮಕ್ಕಳು ತಲೆಕೆಡಿಸಿಕೊಳ್ಳದೆ, ಆಕೆಯನ್ನು ಭೇಟಿ ಮಾಡಿಲ್ಲವಂತೆ. ಹೀಗಾಗಿ ಇದರಿಂದ ನೊಂದ ಲಿಯು ತನ್ನ ವಿಲ್‌ಅನ್ನು ಬದಲಾಯಿಸಿದ್ದಾಳಂತೆ. ಇದನ್ನೂ ಓದಿ: ತನ್ನ ಮಕ್ಕಳು ತನ್ನನ್ನು ನಿರ್ಲಕ್ಷ್ಯಿಸಿದ್ದಾರೆಂಬ ಸಿಟ್ಟಿನಲ್ಲಿ ಶಾಂಘೈ ಮೂಲದ ಲಿಯು, ತನ್ನ ಹೆಸರಿನಲ್ಲಿದ್ದ ಮನೆ, ಹಣ ಸೇರಿದಂತೆ ಎಲ್ಲಾ ಆಸ್ತಿಯನ್ನು ತಾನು ಪ್ರೀತಿಯಿಂದ ಸಾಕಿದ್ದ ನಾಯಿ ಮತ್ತು ಬೆಕ್ಕಿನ ಹೆಸರಿಗೆ ಬರೆದಿದ್ದಾರೆ. ಸ್ವಂತ ಮಕ್ಕಳೇ ನನ್ನನ್ನು ನೋಡಿಕೊಳ್ಳಲು ಬಂದಿಲ್ಲ. ಹೀಗಾಗಿ ಸಾಯುವವರೆಗೂ ನನ್ನ ಜೊತೆಯಾಗಿದ್ದ ನಾಯಿ ಮತ್ತು ಬೆಕ್ಕುಗಳಿಗೆ ನಾನು ಆಸ್ತಿ ಬರೆದಿದ್ದೇನೆ ಅಂತಾ ಲಿಯು ಹೇಳಿದ್ದಾಳೆ. ಲಿಯು ವಿಲ್​ ಪ್ರಕಾರ ಆಕೆಯ ಎಲ್ಲಾ ಹಣವನ್ನು ತನ್ನ ಸಾಕುಪ್ರಾಣಿಗಳು ಅಥವಾ ಅವುಗಳ ಸಂತತಿ ನೋಡಿಕೊಳ್ಳಲು ಬಳಸಬೇಕು ಅಂತಾ ಕಂಡಿಷನ್‌ ಹಾಕಿದ್ದಾರೆ. ಚೀನಾದ ಕಾನೂನು ತನ್ನ ಎಲ್ಲಾ ಹಣವನ್ನು ನೇರವಾಗಿ ಪ್ರಾಣಿಗಳ ಹೆಸರಿಗೆ ಮಾಡಬೇಕು. ಸ್ಥಳೀಯ ಪಶುವೈದ್ಯಕೀಯ ಚಿಕಿತ್ಸಾಲಯವು ಅವುಗಳ ಉತ್ತರಾಧಿಕಾರ ವಹಿಸಬೇಕು ಅಂತಾ ಹೇಳಲಾಗಿದೆ. ಇದನ್ನೂ ಓದಿ: ಲಿಯು ತಮ್ಮ ಮಕ್ಕಳಿಗೆ ಸರಿಯಾಗಿಯೇ ಪಾಠ ಕಲಿಸಿದ್ದಾರೆ.ಯನ್ನು ನೋಡಿಕೊಳ್ಳದ ಮಕ್ಕಳಿಗೆ ಒಂದು ರೂಪಾಯಿಯೂ ಸೇರಬಾರದು. ಅವರು ನಾಯಿ ಮತ್ತು ಬೆಕ್ಕುಗಳ ಹೆಸರಿಗೆ ತಮ್ಮ ಎಲ್ಲಾ ಆಸ್ತಿಯನ್ನು ಬರೆದಿರುವುದು ಸರಿಯಾಗಿಯೇ ಇದೆ ಎಂದು ಲಿಯು ಅವರ ಕಾರ್ಯವನ್ನು ಅನೇಕರು ಶ್ಲಾಘಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...