: ಫೆಬ್ರವರಿ 8ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಬಲೂಚಿಸ್ತಾನದ ಚುನಾವಣಾ ಆಯೋಗದ ಕಚೇರಿ ಹೊರಗೆ ಸ್ಫೋಟ : ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗೆ ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಇದಕ್ಕೂ ಮುನ್ನ ಭಾನುವಾರ (ಫೆಬ್ರವರಿ 04) ಬಲೂಚಿಸ್ತಾನದ ನುಷ್ಕಿ ಜಿಲ್ಲೆಯಲ್ಲಿರುವ ಪಾಕಿಸ್ತಾನದ ಚುನಾವಣಾ ಆಯೋಗದ () ಕಚೇರಿಯ ಹೊರಗೆ ಸ್ಫೋಟ ಸಂಭವಿಸಿದೆ. :ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗೆ ಕೇವಲ ಮೂರು ದಿನಗಳಷ್ಟೇ ಬಾಕಿ ಉಳಿದಿದೆ. ಈ ಹೊತ್ತಿನಲ್ಲಿ, ಬಲೂಚಿಸ್ತಾನದ ನುಷ್ಕಿ ಜಿಲ್ಲೆಯ ಪಾಕಿಸ್ತಾನ ಚುನಾವಣಾ ಆಯೋಗದ (ಇಸಿಪಿ) ಕಚೇರಿಯ ಹೊರಗೆ ಭಾನುವಾರ ಮತ್ತೊಂದು ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಎಆರ್‌ವೈ ನ್ಯೂಸ್ ವರದಿ ಮಾಡಿದೆ. ಆದಾಗ್ಯೂ, ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಪೊಲೀಸರು ನೀಡಿರುವ ಹೇಳಿಕೆಯ ಪ್ರಕಾರ,ದ (ಇಸಿಪಿ) ಕಚೇರಿಯ ಗೇಟ್‌ನ ಹೊರಗೆ ಸ್ಫೋಟಕವನ್ನು ಸ್ಫೋಟಿಸಲಾಗಿದೆ. ಘಟನೆ ಬಳಿಕ ಇಡೀ ಪ್ರದೇಶದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದ್ದು ಆರೋಪಿಗಳನ್ನು ಸೆರೆಹಿಡಿಯಲು ಶೋಧ ಕಾರ್ಯ ಮುಂದುವರೆದಿದೆ. ಸ್ಫೋಟದ ಸ್ವರೂಪವನ್ನು ನಿರ್ಧರಿಸಲು ವಿಚಾರಣೆಯನ್ನು ಸಹ ಪ್ರಾರಂಭಿಸಲಾಗಿದೆ ಎಂದು ನ್ಯೂಸ್ ವರದಿ ಮಾಡಿದೆ. ಇದನ್ನೂ ಓದಿ- ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಗೂ ಮೊದಲು ಸ್ಫೋಟ-ಇದೇ ಮೊದಲೇನಲ್ಲ!ಗಮನಾರ್ಹವಾಗಿಗೂ ಮುನ್ನ ಸ್ಫೋಟ ಸಂಭವಿಸಿರುವುದು ಇದೇ ಮೊದಲೇನಲ್ಲ. ಕಳೆದ ವಾರ, ಪಾಕಿಸ್ತಾನದ ಚುನಾವಣಾ ಆಯೋಗದ () ಕರಾಚಿ ಕಚೇರಿಯ ಹೊರಗೆ ಇದೇ ರೀತಿಯ ಸ್ಫೋಟ ಸಂಭವಿಸಿತ್ತು. ಇದನ್ನೂ ಓದಿ- ಕಳೆದ ವಾರ ಸಂಭವಿಸಿದ ಸ್ಫೋಟದಲ್ಲಿ, ಇಸಿಪಿ ಕಚೇರಿಯ ಗೋಡೆಯ ಪಕ್ಕದಲ್ಲಿ ಶಾಪಿಂಗ್ ಬ್ಯಾಗ್‌ನಲ್ಲಿ ಸ್ಫೋಟಕ ವಸ್ತುಗಳನ್ನು ಇರಿಸಲಾಗಿತ್ತು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ದಕ್ಷಿಣ ಸಾಜಿದ್ ಸಾಡೋಜೈ ಹೇಳಿದ್ದಾರೆ. "ಸ್ಫೋಟಕ ವಸ್ತುಗಳನ್ನು ಕರಾಚಿಯ ಕೆಂಪು ವಲಯದ ಪ್ರದೇಶದಲ್ಲಿರುವ ಇಸಿಪಿ ಕಚೇರಿಯ ಗೋಡೆಯ ಉದ್ದಕ್ಕೂ ಶಾಪಿಂಗ್ ಬ್ಯಾಗ್‌ನಲ್ಲಿ ಇರಿಸಲಾಗಿತ್ತು. ಸ್ಫೋಟಕ ವಸ್ತುವಿನಲ್ಲಿ ಬಾಲ್ ಬೇರಿಂಗ್‌ಗಳು ಕಂಡುಬಂದಿಲ್ಲ" ಎಂದು ಎಸ್‌ಎಸ್‌ಪಿ ಸಾಜಿದ್ ಸಾಡೋಜೈ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...