: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪತ್ನಿಗೆ 14 ವರ್ಷಗಳ ಜೈಲು ಶಿಕ್ಷೆ ' : ಈ ಎರಡೂ ಪ್ರಕರಣಗಳಲ್ಲಿ ಇಮ್ರಾನ್ ಖಾನ್ ಗೆ ಶಿಕ್ಷೆಯಾಗಿದ್ದು, ಫೆಬ್ರವರಿ 8 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮತ್ತು ಇಮ್ರಾನ್ ಖಾನ್ ಅವರ ಚುನಾವಣಾ ಮಹತ್ವಾಕಾಂಕ್ಷೆಗಳಿಗೆ ಪ್ರಮುಖ ಅಡಚಣೆಯಾಗಿ ಹೊರಹೊಮ್ಮಿದೆ. :ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗೂ ಮುನ್ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಒಂದರ ಹಿಂದೆ ಒಂದರಂತೆ ಶಾಕ್ ಎದುರಾಗಿದೆ. ನಿನ್ನೆಯಷ್ಟೇ (ಜನವರಿ 30) ಅವರು ಸೈಫರ್ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಇಂದು (ಜನವರಿ 31) ತೋಷಖಾನಾ (ರಾಜ್ಯ ಉಡುಗೊರೆ) ಪ್ರಕರಣದಲ್ಲಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಎರಡೂ ಪ್ರಕರಣಗಳಲ್ಲಿಶಿಕ್ಷೆಯಾಗಿದ್ದು, ಫೆಬ್ರವರಿ 8 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮತ್ತು ಇಮ್ರಾನ್ ಖಾನ್ ಅವರ ಚುನಾವಣಾ ಮಹತ್ವಾಕಾಂಕ್ಷೆಗಳಿಗೆ ಪ್ರಮುಖ ಅಡಚಣೆಯಾಗಿ ಹೊರಹೊಮ್ಮಿದೆ. ಇದನ್ನೂ ಓದಿ : ಸೌದಿ ಕ್ರೌನ್ ಪ್ರಿನ್ಸ್‌ನಿಂದ ಪಡೆದ ಆಭರಣ ಸೆಟ್ ಅನ್ನು ಉಳಿಸಿಕೊಂಡಿದ್ದಕ್ಕಾಗಿ ನ್ಯಾಯಾಲಯದಲ್ಲಿ ಇಬ್ಬರ ವಿರುದ್ಧ ಕಳೆದ ತಿಂಗಳು ಹೊಸ ಪ್ರಕರಣವನ್ನು ದಾಖಲಿಸಿದೆ ಎಂದು ದಿ ಡಾನ್ ವರದಿ ಮಾಡಿದೆ. ಪ್ರಧಾನಿಯಾಗಿದ್ದ ಅವಧಿಯಲ್ಲಿ ಇಮ್ರಾನ್ ಮತ್ತು ಅವರ ಪತ್ನಿ ವಿವಿಧ ರಾಷ್ಟ್ರಗಳ ಮುಖ್ಯಸ್ಥರು ಮತ್ತು ವಿದೇಶಿ ಗಣ್ಯರಿಂದ ಒಟ್ಟು 108 ಉಡುಗೊರೆಗಳನ್ನು ಪಡೆದಿದ್ದರು ಎಂದು ಆರೋಪಿಸಲಾಗಿದೆ.ಈ ತಿಂಗಳ ಆರಂಭದಲ್ಲಿ ಈ ಪ್ರಕರಣದಲ್ಲಿ ಇಬ್ಬರನ್ನೂ ದೋಷಿ ಎಂದು ತೀರ್ಪು ನೀಡಿತ್ತು. ಇದನ್ನೂ ಓದಿ : ಇಮ್ರಾನ್ ಖಾನ್ ಗೆ ಮೂರನೇ ಶಿಕ್ಷೆ:ಇಂದಿನ ಶಿಕ್ಷೆ ಇಮ್ರಾನ್ ಖಾನ್ ಗೆ ಇದುವರೆಗಿನ ಮೂರನೇ ಶಿಕ್ಷೆಯಾಗಿದೆ. ನಿನ್ನೆಯಷ್ಟೇ ಸೈಫರ್ ಪ್ರಕರಣದಲ್ಲಿ ರಾಷ್ಟ್ರೀಯ ರಹಸ್ಯಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರು ಮತ್ತು ಮಾಜಿ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದಕ್ಕೂ ಮೊದಲು, ಆಗಸ್ಟ್ 5 ರಂದು ತೋಷಖಾನಾ ಪ್ರಕರಣದಲ್ಲಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಲಾಗಿದ್ದು, ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಆದರೆ ಈ ಶಿಕ್ಷೆಯನ್ನು ಇಸ್ಲಾಮಾಬಾದ್ ಹೈಕೋರ್ಟ್ () ಈ ಶಿಕ್ಷೆಯನ್ನು ತಡೆ ಹಿಡಿದಿತ್ತು. ನಂತರ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ವಿಭಾಗೀಯ ಪೀಠಕ್ಕೆ ಇಮ್ರಾನ್ ಮಾಡಿದ ಮನವಿಯನ್ನು ಕೋರ್ಟ್ ತಳ್ಳಿ ಹಾಕಿದೆ. ಇದನ್ನೂ ಓದಿ : ಇಂದಿನ ತೀರ್ಪು ಏನು ಹೇಳುತ್ತದೆ ?ಇಂದು ಪ್ರಕಟಿಸಿದ ನಿರ್ಧಾರದ ಪ್ರಕಾರ, ಇಮ್ರಾನ್ ಮತ್ತು ಬುಶ್ರಾ ಮುಂದಿನ 10 ವರ್ಷಗಳವರೆಗೆ ಯಾವುದೇ ಸಾರ್ವಜನಿಕ ಹುದ್ದೆಯನ್ನು ಹೊಂದುವಂತಿಲ್ಲ. ಇಬ್ಬರಿಗೂ ತಲಾ 787 ಮಿಲಿಯನ್ ದಂಡ ವಿಧಿಸಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...