: ಭಾರತದ ನೆರೆಯ ದೇಶದಲ್ಲಿ 7.2 ತೀವ್ರತೆಯ ಭೂಕಂಪ, ದೆಹಲಿ-ಎನ್‌ಸಿಆರ್‌ನಲ್ಲೂ ಕಂಪಿಸಿದ ಭೂಮಿ : ಭಾರತದ ನೆರೆಯ ದೇಶ ಚೀನಾದ ಕ್ಸಿನ್‌ಜಿಯಾಂಗ್‌ನಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದ್ದುಇದರ ಪರಿಣಾಮ ದೆಹಲಿ ಎನ್‌ಸಿ‌ಆರ್ ಭಾಗಗಳಲ್ಲೂ ಕಂಡು ಬಂದಿದೆ. : ಸೋಮವಾರ (ಜನವರಿ 22, 2024) ರಾತ್ರಿ ಭಾರತದ ನೆರೆಯ ರಾಷ್ಟ್ರ ಚೀನಾದ ದಕ್ಷಿಣ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 7.2 ಎಂದು ದಾಖಲಾಗಿದೆ. ಚೀನಾದಲ್ಲಿ ಭೂಕಂಪದ ಬಳಿಕ ಭಾರತದ ರಾಜಧಾನಿ ದೆಹಲಿ ಹಾಗೂ ಅದರ ಸುತ್ತಮುತ್ತಲಿನ ಎನ್‌ಸಿ‌ಆರ್‌ ಪ್ರದೇಶಗಳಲೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿಯಾಗಿದೆ. ದಲ್ಲಿ ಜನವರಿ 22, 2024ರಂದು 23:39ರಾತ್ರಿ ಸುಮಾರು 11:39ರ ವೇಳೆಗೆ ಭೂಕಂಪ ಸಂಭವಿಸಿದೆ. ಕಂಪನಗಳು ಅಕ್ಷಾಂಶ 40.96 ಮತ್ತು ರೇಖಾಂಶ 78.30 ನಲ್ಲಿ ಕೇಂದ್ರೀಕೃತವಾಗಿವೆ ಮತ್ತು 80 ಕಿಮೀ ಆಳದಲ್ಲಿ ನೆಲೆಗೊಂಡಿವೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ತಿಳಿಸಿದೆ. :7.2, 22-01-2024, 23:39:11 , : 40.96 & : 78.30, : 80 ,: , — (@NCS_Earthquake) ಇದನ್ನೂ ಓದಿ- ಭೂಕಂಪದಿಂದಾಗಿ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಭೂಕಂಪದ ತೀವ್ರತೆಯಿಂದಾಗಿ ಚೀನಾದ ಕಿರ್ಗಿಸ್ತಾನ್-ಕ್ಸಿನ್‌ಜಿಯಾಂಗ್ ಗಡಿಯಲ್ಲಿ ಕೆಲವು ಮನೆಗಳು ಕುಸಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪದ ನಂತರ ಕ್ಸಿನ್‌ಜಿಯಾಂಗ್ ರೈಲ್ವೆ ಇಲಾಖೆಯು ತಕ್ಷಣವೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು 27 ರೈಲು ಸಂಚಾರವನ್ನು ನಿಲ್ಲಿಸಲಾಗಿದೆ. ಚೀನಾದ ಮಾಧ್ಯಮಗಳ ಪ್ರಕಾರ, ಚೀನಾದ ವಾಯುವ್ಯ ಪ್ರದೇಶದಲ್ಲಿ ವೂಶಿ ಕೌಂಟಿಯ ಕೇಂದ್ರಬಿಂದುವಿನ ಬಳಿ 3.0 ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣದ 14 ಆಘಾತಗಳು ದಾಖಲಾಗಿವೆ. ಭೂಕಂಪದ ಕೇಂದ್ರದಿಂದ ಸುಮಾರು 17 ಕಿ.ಮೀ ದೂರದಲ್ಲಿ 5.3 ತೀವ್ರತೆಯ ನಂತರದ ಕಂಪನ ಸಂಭವಿಸಿದೆ. ಇದನ್ನೂ ಓದಿ- ಚೀನಾದಲ್ಲಿ ಭೂಕಂಪದ ಬಳಿಕ ಸರಿಸುಮಾರು 1,400 ಕಿಲೋಮೀಟರ್ ದೂರದಲ್ಲಿರುವಯಲ್ಲೂ ಭೂಮಿ ಕಂಪಿಸಿರುವ ಬಗ್ಗೆ ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ. ಇದಲ್ಲದೆ, ಸಮೀಪದ ಕಝಾಕಿಸ್ತಾನ್‌ನಲ್ಲಿ, ತುರ್ತು ಸಚಿವಾಲಯವು 6.7 ತೀವ್ರತೆಯೊಂದಿಗೆ ಒಂದೇ ರೀತಿಯ ಭೂಕಂಪವನ್ನು ದಾಖಲಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. -. . — (@) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...